ಆರೋಪಿಯನ್ನು ಹರಿಯಾಣದ ದೀಪಲ್‌ಪುರ ರಾಯ್ ನಿವಾಸಿ ರಾಜು ಎಂದು ಗುರುತಿಸಲಾಗಿದ್ದು, ಇವರು ಜಹಾಂಗೀರ್‌ಪುರಿ ಮತ್ತು ಬಹಲ್‌ಗಢ್ ಬಳಿ ಗುತ್ತಿಗೆ ಆಧಾರದ ಮೇಲೆ ವ್ಯಾನ್ ಚಲಾಯಿಸುತ್ತಿದ್ದರು. ತನಗೆ ಪಿಟ್ಸ್ ಬರುತ್ತಿರುತ್ತದೆ ಎಂದು ಆತ ಹೇಳಿಕೊಂಡಿದ್ದಾರೆ.
ದೆಹಲಿ (ಜನವರಿ 2, 2024): ಉತ್ತರ ದೆಹಲಿಯ ಬುರಾರಿಯಲ್ಲಿ ವ್ಯಾನ್‌ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಬಳಿಕ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮಹಿಳೆ, ಆಕೆಯ ಮಗ ಮೃತಪಟ್ಟಿದ್ದು, ಈ ಸಂಬಂಧ ವಾಹನ ಅಪಘಾತ ಮಾಡಿದವರನ್ನು ಬಂಧಿಸಲಾಗಿದೆ.
ಆದರೆ, ತನಗೆ ಪಿಟ್ಸ್ ಬಂದು ಅಥವಾ ಮೂರ್ಛೆ ರೋಗ ಬಂದು ವಾಹನದ ನಿಯಂತ್ರಣ ತಪ್ಪಿ ಅಪಘಾತಕ್ಕೆ ಕಾರಣವಾಯಿತು ಎಂದು ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಆರೋಪಿಯ ಹೇಳಿಕೆಯನ್ನು ಪೊಲೀಸ್ ಅಧಿಕಾರಿಗಳು ವೈದ್ಯಕೀಯವಾಗಿ ಪರಿಶೀಲಿಸುತ್ತಿದ್ದಾರೆ.
undefined
ಇದನ್ನು ಓದಿ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 4 ತಿಂಗಳ ಬಳಿಕ ಪ್ರಕರಣ ಬಯಲಿಗೆ!
ಆರೋಪಿಯನ್ನು ಹರಿಯಾಣದ ದೀಪಲ್‌ಪುರ ರಾಯ್ ನಿವಾಸಿ ರಾಜು (39) ಎಂದು ಗುರುತಿಸಲಾಗಿದ್ದು, ಇವರು ಜಹಾಂಗೀರ್‌ಪುರಿ ಮತ್ತು ಬಹಲ್‌ಗಢ್ ಬಳಿ ಗುತ್ತಿಗೆ ಆಧಾರದ ಮೇಲೆ ವ್ಯಾನ್ ಚಲಾಯಿಸುತ್ತಿದ್ದರು. ತನಗೆ ಪಿಟ್ಸ್ ಬರುತ್ತಿರುತ್ತದೆ ಎಂದು ಆತ ಹೇಳಿಕೊಂಡಿದ್ದಾರೆ.
ಮೃತರಾದ 26 ವರ್ಷದ ಕಾನಿಕ್ ಮಹಾಜನ್ ಮತ್ತು 52 ವರ್ಷದ ತಾಯಿ ಆಶಾ, ಬುರಾರಿಯ ತೋಮರ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಅವರು ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಮದುವೆಯ ದಿನವೇ ವರದಕ್ಷಿಣೆಗೆ ಬೇಡಿಕೆ ಇಟ್ಟು ಜೈಲುಪಾಲಾದ ವರ!
ಅಧಿಕಾರಿಗಳ ಪ್ರಕಾರ, ಸೋಮವಾರ, ರಾಜು ಟ್ರಾಫಿಕ್‌ನಿಂದಾಗಿ ಅಲಿಪುರದ ಖಾತು ಶ್ಯಾಮ್ ಮಂದಿರದ ಬಳಿ ತನ್ನ ಮಾಮೂಲಿ ಮಾರ್ಗ ಬಿಟ್ಟು ಬೇರೆ ರೋಡ್‌ನಲ್ಲಿ ಹೋಗಿದ್ದಾರೆ. ಬುರಾರಿ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಚಾಲನೆ ಮಾಡುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅವರು ತೀವ್ರವಾಗಿ ಗಾಯಗೊಂಡರು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಮನೋಜ್ ಮೀನಾ ಹೇಳಿದರು.
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಆರೋಪಿ ಮತ್ತೆರಡು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದೂ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆತನನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಅವರ ಹೇಳಿಕೆಗಳು ಪ್ರಸ್ತುತ ಪರಿಶೀಲನೆಯಲ್ಲಿವೆ. ಈ ಹಿನ್ನೆಲೆ ವೈದ್ಯಕೀಯ-ಕಾನೂನು ಪರೀಕ್ಷೆ ನಡೆಸಲಾಗುತ್ತಿದೆ. ಚಾಲಕ ಮದ್ಯದ ಅಮಲಿನಲ್ಲಿ ಇರಲಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.