Shraddha Walker Murder: ಅಫ್ತಾಬ್‌ ಪೂನಾವಾಲಾ ವಿರುದ್ಧ 6 ಸಾವಿರ ಪುಟಗಳ ಚಾರ್ಜ್‌ಶೀಟ್‌

Published : Jan 24, 2023, 06:20 PM ISTUpdated : Jan 24, 2023, 06:23 PM IST
Shraddha Walker Murder: ಅಫ್ತಾಬ್‌ ಪೂನಾವಾಲಾ ವಿರುದ್ಧ 6 ಸಾವಿರ ಪುಟಗಳ ಚಾರ್ಜ್‌ಶೀಟ್‌

ಸಾರಾಂಶ

ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪೊಲೀಸರು 6636 ಪುಟಗಳ ವಿವರವಾದ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆ ಚಾರ್ಜ್ ಶೀಟ್ ನಲ್ಲಿ ಆರೋಪಿ ಅಫ್ತಾಬ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಆ ಚಾರ್ಜ್ ಶೀಟ್ ಅನ್ನು ಸ್ವತಃ ಅಫ್ತಾಬ್ ತನ್ನ ವಕೀಲರಿಗೆ ತೋರಿಸಲು ಬಯಸಿಲ್ಲ ಎನ್ನುವುದು ಪ್ರಮುಖ ವಿಚಾರ.  

ನವದೆಹಲಿ (ಜ.24): ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ಡೆಲ್ಲಿಯ 35 ಪೀಸ್‌ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಶ್ರದ್ಧಾ ವಾಕರ್‌ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸ್‌ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದೆ. ಪೊಲೀಸರು 6636 ಪುಟಗಳ ವಿವರವಾದ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆ ಚಾರ್ಜ್ ಶೀಟ್ ನಲ್ಲಿ ಆರೋಪಿ ಅಫ್ತಾಬ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಆದರೆ, ಈ ಚಾರ್ಜ್‌ಶೀಟ್‌ಅನ್ನು ಸ್ವತಃ ಅಫ್ತಾಬ್‌ ಪೂನಾವಾಲಾ ತನ್ನ ವಕೀಲರಿಗೆ ತೋರಿಸೋದು ಬೇಡ ಎಂದು ಹೇಳಿರುವುದು ಅಚ್ಚರಿಯ ವಿಚಾರವಾಗಿದೆ. ವಕೀಲರನ್ನು ಬದಲಾವಣೆ ಪ್ರಸ್ತಾಪ ಮಾಡುವ ವಿಚಾರವನ್ನು ಅಫ್ತಾಭ್‌ ಮಾಡಿದ್ದು, ಅದಕ್ಕೂ ಮುನ್ನ ಯಾವುದೇ ವಕೀಲರಿಗೆ ತನ್ನ ಚಾರ್ಜ್‌ಶೀಟ್‌ ತೋರಿಸೋದು ಬೇಡ ಎಂದಿದ್ದಾರೆ. ಸದ್ಯ ಅಫ್ತಾಬ್‌ನ ನ್ಯಾಯಾಂಗ ಬಂಧನವನ್ನು ಫೆಬ್ರವರಿ 7ರವರೆಗೆ ವಿಸ್ತರಿಸಲಾಗಿದೆ.

ದೆಹಲಿ ಪೊಲೀಸರು 75 ದಿನಗಳ ನಂತರ ಈ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಅಫ್ತಾಬ್ ನ ನಾರ್ಕೋ ಟೆಸ್ಟ್ ಮಾಡಿಸಿದ ಪೊಲೀಸರು, .ಪಾಲಿಗ್ರಫಿ ಟೆಸ್ಟ್ ಮಾಡಿಸಿ, ಹಲವು ರೀತಿಯ ಪ್ರಶ್ನೆ-ಉತ್ತರಗಳನ್ನು ಕೇಳಿದ ನಂತರ ಈ ಚಾರ್ಜ್ ಶೀಟ್ ಸಿದ್ಧಪಡಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ, ಚಾರ್ಜ್ ಶೀಟ್ ಅನ್ನು ತನ್ನ ವಕೀಲರಿಗೆ ತೋರಿಸಬಾರದು, ಆದರೆ ಪ್ರತಿಯನ್ನು ತನಗೆ ಲಭ್ಯವಾಗುವಂತೆ ಮಾಡಬೇಕು ಎಂದು ಅಫ್ತಾಬ್ ಬಯಸಿದ್ದರು. ಈ ಬಗ್ಗೆ ಫೆಬ್ರವರಿ 7 ರಂದು ಈ ಬೇಡಿಕೆಯ ಬಗ್ಗೆ ಗಮನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಮ್ಯಾಜಿಸ್ಟ್ರೇಟ್ ಸ್ಪಷ್ಟವಾಗಿ ಹೇಳಿದ್ದಾರೆ. ಆ ಬಳಿಕವಷ್ಟೇ ಅಫ್ತಾಬ್, ಪ್ರಕರಣದ ಚಾರ್ಜ್ ಶೀಟ್ ಪಡೆಯಲು ಸಾಧ್ಯವಾಗುತ್ತದೆ.

ಈ ಕೇಸ್‌ನ ಬಗ್ಗೆ ಮಾತನಾಡುವುದಾದರೆ, ಅಫ್ತಾಬ್, ಕಳೆದ ವರ್ಷ ಮೇ 18 ರಂದು ತನ್ನ ಲಿವ್‌ ಇನ್‌ ಪಾರ್ಟ್‌ನರ್‌ ಆಗಿದ್ದ ಶ್ರದ್ಧಾ ವಾಕರ್‌ಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆಕೆ ಸಾವು ಕಂಡ ಬಳಿಕ, ಆಕೆಯ ದೇಹವನ್ನು ನಿರ್ದಯವಾಗಿ 35 ಪೀಸ್‌ಗಳನ್ನಾಗಿ ಮಾಡಿದ್ದ. ನಂತರ ಇನ್ನಷ್ಟು ಜಾಣತನದಿಂದ ಮೆಹ್ರುಲಿಯ ಅರಣ್ಯ ಸೇರಿದಂತೆ ನಗರದ ವಿವಿದೆಡೆ ಬಿಸಾಡಿದ್ದ.

ಮಧ್ಯರಾತ್ರಿಯ ವೇಳೆಗೆ ಶ್ರದ್ಧಾಳ ದೇಹದ ಪೀಸ್‌ಗಳಿದ್ದ ಬ್ಯಾಗ್‌ಅನ್ನು ಹೆಗಲಿಗೇರಿಸಿಕೊಂಡು ನಗರದ ವಿವಿದೆಡೆ ಎಸೆದಿದ್ದ ಎಂದು ಹೇಳಲಾಗಿದೆ. ಕೊನೆಗೆ ಪ್ರಕರಣ ಬಹಿರಂಗವಾದ ಬಳಿಕ ಕಳೆದ ವರ್ಷ ನವೆಂಬರ್‌ 12 ರಂದು ಪೊಲೀಸರು ಅಫ್ತಾಭ್‌ನಲ್ಲಿ ಬಂಧಿಸಿದ್ದರು. ಸದ್ಯ ಅಫ್ತಾಬ್‌ ಪೂನಾವಾಲಾ ತಿಹಾರ್‌ ಜೈಲಿನಲ್ಲಿದ್ದಾನೆ. ಈ ಪ್ರಕರಣ ದೇಶದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ವಿಷಯದಲ್ಲಿ ಹಲವಾರು ಸಂಗತಿಗಳು ಬಹಿರಂಗವಾಗಿದೆ. ಆದರೆ, ಪ್ರಮುಖವಾದ ಸಂಗತಿ ಏನೆಂದರೆ ಒಂದು ವಿಷಕಾರಿ ರಿಲೇಷನ್‌ಷಿಪ್‌ನ ಕಾರಣದಿಂದ ಇಷ್ಟೆಲ್ಲಾ ಘಟನೆಗಳಾಗಿವೆ.

Shraddha Walker Murder case: ಶ್ರದ್ಧಾ ಕೊಲೆಗೆ ಗಲ್ಲಿಗೇರಿಸಿದರೂ ಪಶ್ಚಾತಾಪವಿಲ್ಲ: ಅಫ್ತಾಬ್‌

ಅಫ್ತಾಬ್‌ ಪೂನಾವಾಲಾ ಪ್ರತಿನಿತ್ಯ ಶ್ರದ್ಧಾಳನ್ನು ವಿವಿಧ ಕಾರಣಕ್ಕಾಗಿ ಥಳಿಸುತ್ತಿದ್ದ ಎನ್ನುವುದು ಆಕೆಯ ಸ್ನೇಹಿತರ ಹೇಳಿಕೆಗಳು ಹಾಗೂ ಸ್ವತಃ ಶ್ರದ್ಧಾಳ ಕೆಲವು ಚಾಟ್‌ಗಳಿಂದ ಬಹಿರಂಗವಾಗಿದೆ. ಶ್ರದ್ಧಾಳನ್ನು ಪ್ರತಿದಿನ ಹಿಂಸೆ ಮಾಡುತ್ತಿದ್ದ. ಕಳೆದ ವರ್ಷದ ಮೇ 18 ರಂದು ಇದೇ ರೀತಿಯಾಗಿ ಶ್ರದ್ಧಾಳ ಜೊತೆ ಅಫ್ತಾಬ್‌ ಗಲಾಟೆ ಮಾಡಿದ್ದ. ಸಿಟ್ಟಿನ ಭರದಲ್ಲಿ ಅಫ್ತಾಬ್‌ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ.

Shraddha Walker Murder: ಜೊಮಾಟೋ, ಸೋಶಿಯಲ್‌ ಮೀಡಿಯಾ ಮಾಹಿತಿ ಕೇಳಿದ ಪೊಲೀಸ್‌!

ಬಳಿಕ ಆಕೆಯನ್ನು 35 ಪೀಸ್‌ಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದ. ಕೊಲೆಯ ನಂತರ ಅಫ್ತಾಬ್ ಗೆ ಮತ್ತೊಬ್ಬ ಗೆಳತಿ ಇದ್ದಳು ಎಂಬುದೂ ತನಿಖೆಯಲ್ಲಿ ಬಯಲಿಗೆ ಬಂದಿದೆ. ಆ ಗೆಳತಿ ಕೂಡ ಶ್ರದ್ಧಾಳ ಮೃತ ದೇಹವನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಅವನ ಫ್ಲಾಟ್ ಗೆ ಬಂದಿದ್ದಳು. ಪೊಲೀಸರ ಪ್ರಕಾರ, ಶ್ರದ್ಧಾಗೆ ನೀಡಿದ್ದ ಉಂಗುರವನ್ನು ಅಫ್ತಾಬ್ ತನ್ನ ಗೆಳತಿಗೆ ಉಡುಗೊರೆಯಾಗಿ ನೀಡಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ