ಹಿಂದೆ ಮಂಗಳೂರಿನಿಂದ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ವರದಿಯಾಗಿದ್ದವು/ ಬಿಹಾರದಿಂದ ನೈತಿಕ ಪೊಲೀಸ್ ಗಿತರಿ ಪ್ರಕರಣ/ ಸ್ನೇಹಿತನ ಜತೆ ಕುಳಿತಿದ್ದ ಹುಡುಗಿಗೆ ಕಾಟ/ ದುಪ್ಪಟ್ಟಾ ಎಳೆದಾಡಿದರು/
ಗಯಾ(ಫೆ. 23) ಬಿಹಾರದಿಂದ ನೈತಿಕ ಪೊಲೀಸ್ ಗಿರಿಯ ಘಟನೆ ವರದಿಯಾಗಿದೆ. ಸ್ನೇಹಿತನೊಂದಿಗೆ ಸಮಯ ಕಳೆಯುತ್ತಿದ್ದ ಹುಡುಗಿಯ ಮೇಲೆ ದೌರ್ಜನ್ಯ ಎಸಗಲಾಗಿದೆ.
ಹುಡುಗಿಯ ದುಪ್ಪಟ್ಟಾವನ್ನು ಎಳೆದಾಡಿದ್ದು ಆಕೆಯನ್ನು ಹಿಂದೆ ಮುಂದೆ ತಳ್ಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಶಾಲೆಯ ಸಮವಸ್ತ್ರದಲ್ಲಿದ್ದ ಹುಡುಗಿ ತನ್ನ ಸ್ನೇಹಿತನ ಜತೆ ನಿರ್ಜನ ಪ್ರದೇಶವೊಂದರಲ್ಲಿ ಕುಳಿತಿದ್ದಳು. ನಾಲ್ಕು ಜನರ ತಂಡವೊಂದು ಅವರನ್ನು ಸುತ್ತುವರಿದಿದೆ.
ಹುಡುಗರು ಅವರನ್ನು ಸುತ್ತುವರಿದು ಎಳೆದಾಡಲು ಮುಂದಾಗಿದ್ದಾರೆ. ಹುಡುಗಿ ದುಪ್ಪಟ್ಟಾದಿಂದ ಮುಖ ಮುಚ್ಚಿಕೊಳ್ಳಲು ಯತ್ನ ಮಾಡಿದ್ದು ಅದಕ್ಕೆ ತಡೆ ಹಾಕಿದ್ದಾರೆ.
ಕಾಲ್ ರಿಸೀವ್ ಮಾಡಿದ್ರೆ ಅತ್ತ ಕಡೆಯಿಂದ ಬೆತ್ತಲೆ ಲೋಕ.. ಹುಷಾರು
ಹುಡುಗಿಯ ಜತೆ ಇದ್ದ ಹುಡುಗನ ಮೇಲೆ ಹಲ್ಲೆ ಮಾಡಿದ್ದಾರೆ. ವಿಡಿಯೋ ಮಾಡಬೇಡಿ ಎಂದು ಕೇಳಿಕೊಂಡರೂ ವಿಡಿಯೋ ಮಾಡಿ ಅದನ್ನು ಹರಿಯಬಿಟ್ಟಿದ್ದಾರೆ.
ಹುಡುಗಿಯನ್ನು ದಬಾಯಿಸಿದ್ದು ನಿನ್ನ ತಂದೆ ಹೆಸರೇನು? ಯಾವ ಊರು ಎಂದೆಲ್ಲಾ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ. ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ .
ನಟಿ ಸಂಯುಕ್ತಾ ಹೆಗ್ಡೆ ಬೆಂಗಳೂರಿನ ಪಾರ್ಕ್ ಒಂದರಲ್ಲಿ ನೃತ್ಯ ಪ್ರಾಕ್ಟೀಸ್ ಮಾಡಲು ಮುಂದಾದಾಗ ಇಂಥದ್ದೆ ಪ್ರಕರಣ ವರದಿಯಾಗಿತ್ತು. ಸಂಯುಕ್ತಾ ಅವರನ್ನು ತಡೆದಿದ್ದು ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿತ್ತು.