ಜಗಳವಾಡಬೇಡಿ ಎಂದ ಅತ್ತೆಯ ಸುತ್ತಿಗೆಯಲ್ಲಿ ಬಡಿದು ಕೊಂದ ಅಳಿಯ

Published : Feb 18, 2025, 01:56 PM IST
ಜಗಳವಾಡಬೇಡಿ ಎಂದ ಅತ್ತೆಯ ಸುತ್ತಿಗೆಯಲ್ಲಿ ಬಡಿದು ಕೊಂದ ಅಳಿಯ

ಸಾರಾಂಶ

ಮೂಡಿಗೆರೆಯಲ್ಲಿ ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಅಳಿಯನಿಗೆ ಬುದ್ಧಿ ಹೇಳಿದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಮಗಳೊಂದಿಗೆ ಜಗಳವಾಡಬೇಡಿ ಎಂದ ಅತ್ತೆಯ ಸುತ್ತಿಗೆಯಲ್ಲಿ ಬಡಿದು ಕೊಂದ ಅಳಿಯ

ಮೂಡಿಗೆರೆ(ಚಿಕ್ಕಮಗಳೂರು): ಮನೆಯಲ್ಲಿ ಕುಡಿದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಅಳಿಯನಿಗೆ ಬುದ್ದಿವಾದ ಹೇಳಿದಕ್ಕೆ ಕೋಪಗೊಂಡು ಅತ ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯನ್ನೇ ಕೊಲೆ ಮಾಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್ ನಲ್ಲಿ ಈ ಘಟನೆ ನಡೆದಿದೆ. ಕೊಲೆಯ ಬಳಿಕ ಆರೋಪಿ ಶಶಿಧರ್‌ ಪರಾರಿಯಾಗಿದ್ದಾನೆ. 

ಕಣತಿ ಗ್ರಾಮದ ಯಮುನಾ(65) ಕೊಲೆಯಾದ ದುರ್ದೈವಿ. ಶಶಿಧರ್‌ ಕೊಲೆ ಆರೋಪಿ. ಯಮುನಾ ಕೂಲಿ ಕೆಲಸ ಮುಗಿಸಿ ಮಗಳ ಮನೆಗೆ ಹೋದಾಗ ಆತ ಕುಡಿದು ಬಂದು ಮಗಳೊಂದಿಗೆ ಜಗಳವಾಡುತ್ತಿದ್ದ. ಈ ವೇಳೆ ಅಳಿಯನಿಗೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಶಶಿಧರ ಸುತ್ತಿಗೆಯಿಂದ ಯಮುನಾ ಅವರ ತಲೆಗೆ ಹೊಡೆದಿದ್ದಾನೆ. ಯಮುನಾ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮೂಡಿಗೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.

ಆಸ್ತಿಗಾಗಿ ಮನೆಯಿಂದ ಹೊರದಬ್ಬಿದ ಮಗ: ದಯಾಮರಣಕ್ಕೆ ತಂದೆ ಅರ್ಜಿ 

ಶ್ರೀರಂಗಪಟ್ಟಣ: ಆಸ್ತಿಗಾಗಿ ಜನ್ಮನೀಡಿದ ತಂದೆಯನ್ನೇ ಮನೆಯಿಂದ ಹೊರ ಹಾಕಿರುವ  ಘಟನೆ ತಾಲೂಕಿನ ಬೆಳಗೊಳದಲ್ಲಿ ಬೆಳಕಿಗೆ ಬಂದಿದೆ. 70 ವರ್ಷದ ವಯೋವೃದ್ಧ ಶಿವರಾಮು, ತನ್ನ ಮಗಳು ಲಾವಣ್ಯರೊಂದಿಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು. ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿ ಒಟ್ಟು ಮೂವರು ಮಕ್ಕಳಿದ್ದಾರೆ. ಕಾಲಿಗೆ ಗ್ಯಾಂಗ್ರೀನ್ ತಗುಲಿದ್ದು, ಮೂರ್ಛೆ ರೋಗ ಸಹ ಇದೆ. 9 ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದಾರೆ. 5 ಎಕರೆ ಜಮೀನಿದೆ. ಜತೆಗೆ ಬೆಳಗೊಳದಲ್ಲಿ ಮನೆ ಇದೆ. ನನ್ನ ಮಗ ಹರಿಪ್ರಸಾದ, ಸೊಸೆ ರೂಪಿಣಿ, ನಾನು ಒಂದೇ ಮನೆಯಲ್ಲಿದ್ದೇವು. ಈಗ ಮಗ-ಸೊಸೆ ಮನೆ ಬೀಗ ಒಡೆದು, ಚಿನ್ನ ಹಾಗೂ ಹಣ ಕದ್ದಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ. ನಮಗೆ ನ್ಯಾಯ ಸಿಗದಿದ್ದಲ್ಲಿ ಜಿಲ್ಲಾಧಿಕಾರಿಗಳಿಂದ ದಯಾಮರಣ ಕೋರಿ ಅರ್ಜಿ ಸಲ್ಲಿಸುವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು