ಸಂತೆಯಲ್ಲಿ ಮೊಬೈಲ್‌ಗಳೇ ಮಾಯ: ಕಂಗಾಲಾದ ಜನತೆ..!

By Kannadaprabha News  |  First Published Dec 5, 2023, 12:13 PM IST

ಕರ್ನಾಟಕ ಪೊಲೀಸ್ ಇಲಾಖೆಯಿಂದ ಈ ಲಾಸ್ಟ್ ಎಂಬ ಆ್ಯಪ್ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಕಳೆದು ಹೋದ ಮಾಹಿತಿಯನ್ನು ಇದರಲ್ಲಿ ದಾಖಲು ಮಾಡಿದರೆ ಆ ಮೊಬೈಲ್‌ ಸಿಕ್ಕ ಸಂದೇಶ ಬರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಲೋಕಾಪುರ(ಡಿ.05):  ಮಂಗಳವಾರದ ಲೋಕಾಪುರ ಸಂತೆಗೆ ಮೊಬೈಲ್‌ ತೆಗೆದುಕೊಂಡು ಹೋಗುವ ಮುನ್ನ ಇರಲಿ ಎಚ್ಚರ. ಹೌದು, ಲೋಕಾಪುರದ ಮಂಗಳವಾರದ ಸಂತೆಯಲ್ಲಿ ಎರಡು ವಾರಗಳಿಂದ ಇಲ್ಲಿ ಮೊಬೈಲ್‌ಗಳ ಕಳ್ಳತನ ಹೆಚ್ಚಾಗಿದೆ. ಇದರಿಂದ ಜನ ಕಂಗಾಲಾಗಿ ಹೋಗಿದ್ದಾರೆ. 

ಸ್ವಲ್ಪ ಮುಂದೆ ಬಾಗಿ ತರಕಾರಿ ಖರೀದಿಸಿ ಮೇಲೆ ಏಳುತ್ತಿದ್ದಂತೆ ಮೊಬೈಲ್ ಮಾಯವಾಗುತ್ತಿವೆ. ಕಳ್ಳರು ಎಗರಿಸಿ ಜಾಗ ಖಾಲಿ ಮಾಡಿರುತ್ತಾರೆ. ಬೇರೆಯವರ ಮೊಬೈಲ್‌ ತೆಗೆದುಕೊಂಡು ರಿಂಗಣಿಸುತ್ತಿದ್ದಂತೆ ನೀವು ಕರೆ ಮಾಡಿರುವ ನಂಬರ್ ಸದ್ಯ ಸ್ವಿಚ್ಡ್‌ ಆಫ್ ಆಗಿರುತ್ತದೆ ಎಂಬ ಧ್ವನಿ ಕೇಳಿಬರುತ್ತದೆ. ಇದರ ಹಿಂದೆ ಒಂದು ತಂಡ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೂಡ ಈಗ ಕೇಳಿಬರುತ್ತಿದೆ. ಪೊಲೀಸರು ಇಂತಹ ಖದೀಮರನ್ನು ಹಿಡಿದು ಬೆಂಡೆತ್ತಿ ಬುದ್ಧಿ ಕಲಿಸಬೇಕು ಎಂದು ಮೊಬೈಲ್‌ ಕಳೆದುಕೊಂಡವರು ಆಗ್ರಹಿಸುತ್ತಲೇ ಇದ್ದಾರೆ.

Latest Videos

undefined

ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ಖತರ್ನಾಕ್‌ ಖದೀಮರ ಬಂಧನ

ಪ್ರಕರಣ ದಾಖಲಾಗಿಲ್ಲ:

ಹಲವು ದಿನಗಳಿಂದ ಸಂತೆಯಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ ಮೊಬೈಲ್‌ ಕಳ್ಳತನ ನಡೆಯುತ್ತಿದೆ. ಆದರೆ ಈ ಬಗ್ಗೆ ಇಲ್ಲಿನ ಠಾಣೆಯಲ್ಲಿ ಯಾವೊಂದು ಪ್ರಕರಣವೂ ದಾಖಲಾಗಿಲ್ಲ. ಕಳ್ಳರು ಪೊಲೀಸರ ಕೈಗೆ ಸಿಕ್ಕದ್ದು ಅಪರೂಪ. ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಾರೆ. ಅದಕ್ಕೆ ಪೂರಕ ಅಗತ್ಯ ದಾಖಲೆಗಳೇ ಇರುವುದಿಲ್ಲ. ಅದಕ್ಕೆ ಮೊಬೈಲ್‌ ಕಳೆದುಕೊಂಡಿರುವ ಸಾರ್ವಜನಿಕರು ಪೊಲೀಸ್‌ ಠಾಣೆಯನ್ನು ಹತ್ತುವುದೇ ಅಪರೂಪವಾಗಿದೆ. ಪೊಲೀಸರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಆದರೆ, ಮೊಬೈಲ್‌ ಕಳ್ಳತನದ ಮಾಹಿತಿ ಪೊಲೀಸರಿಗೂ ಗೊತ್ತಿದೆ. ಆದರೆ, ಅವರು ಜಾಣಮೌನ ವಹಿಸಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಮೊಬೈಲ್‌ ಕಳ್ಳತನ ಪ್ರಕರಣ ದಾಖಲಿಸುತ್ತೇವೆ. ಸಾರ್ವಜನಿಕರು ಈ ಬಗ್ಗೆ ತಪ್ಪು ತಿಳಿಯಬಾರದು. ಪೊಲೀಸ್ ಸಿಬ್ಬಂದಿಯನ್ನು ಅಲ್ಲಲ್ಲಿ ಗಸ್ತು ಮಾಡಲಾಗುವುದು. ಮೊಬೈಲ್‌ ಕಳ್ಳರು ಮೊಬೈಲ್‌ ಮಾರಲು ಬಂದರೇ ಯಾರು ಸಾರ್ವಜನಿಕರು ತೆಗೆದುಕೊಳ್ಳಬಾರದು. ಪೊಲೀಸ್ ಇಲಾಖೆ ತಿಳಿಸಬೇಕು. ಕರ್ನಾಟಕ ಪೊಲೀಸ್ ಇಲಾಖೆಯಿಂದ ಈ ಲಾಸ್ಟ್ ಎಂಬ ಆ್ಯಪ್ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಕಳೆದು ಹೋದ ಮಾಹಿತಿಯನ್ನು ಇದರಲ್ಲಿ ದಾಖಲು ಮಾಡಿದರೆ ಆ ಮೊಬೈಲ್‌ ಸಿಕ್ಕ ಸಂದೇಶ ಬರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

click me!