ವಿಜಯಪುರ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್ ಏಕಾಏಕಿ ಜೋಳ ಕುಸಿದಿದ್ದರಿಂದ ನಡೆದ ದಾರುಣ ಘಟನೆಯಲ್ಲಿ ವಿವಿಧ ರಕ್ಷಣಾ ತಂಡಗಳು ಸತತ 17 ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಬಿಹಾರ ಮೂಲದ 7 ಮಂದಿ ಕಾರ್ಮಿಕರ ಶವಗಳನ್ನು ಹೊರತೆಗೆದಿದ್ದಾರೆ.
ವಿಜಯಪುರ (ಡಿ.5): ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 200ಕ್ಕೂ ಹೆಚ್ಚು ಟನ್ ಏಕಾಏಕಿ ಜೋಳ ಕುಸಿದಿದ್ದರಿಂದ ಅದರ ರಾಶಿಯೊಳಗೆ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿರುವ ದಾರುಣ ಘಟನೆ ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್ ಗೋದಾಮಿನಲ್ಲಿ ಸೋಮವಾರ ಸಂಜೆ ನಡೆದಿತ್ತು. ವಿವಿಧ ರಕ್ಷಣಾ ತಂಡಗಳು ಸತತ 17 ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಬಿಹಾರ ಮೂಲದ 7 ಮಂದಿ ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ. ಮೃತ ಕಾರ್ಮಿಕರ ಪಟ್ಟಿ ಇಲ್ಲಿದೆ
1)ರಾಜೇಶ್ ಮುಖಿಯಾ 25 ವರ್ಷ
2)ರಾಮ್‌ಬ್ರಿಚ್ ಮುಖಿಯಾ 29 ವರ್ಷ
3)ಶಂಭೂ ಮುಖಿಯಾ 26 ವರ್ಷ
4)ರಾಮ್ ಬಾಲಕ್ 38 ವರ್ಷ
5)ಲೋಖಿ ಯಾಧವ್ 56 ವರ್ಷ
6)ಕಿಶನಕುಮಾರ 20 ವರ್ಷ
7)ದಾಲನಚಂದ ಮುಖಿನ
ಸಿಲುಕಿಕೊಂಡಿದ್ದ 8 ಜನ ಕಾರ್ಮಿಕರಲ್ಲಿ 7 ಜನ ಕಾರ್ಮಿಕರು ಸಾವನ್ನಪ್ಪಿದ್ದು, ಸೋಮವಾರ ಓರ್ವನನ್ನು ರಕ್ಷಣಾ ತಂಡ ಜೀವಂತವಾಗಿ ಹೊರ ತೆಗೆದಿತ್ತು. ದುರಾದೃಷ್ಟವಶಾತ್ ಮಿಕ್ಕ 7 ಜನ ಮೃತಪಟ್ಟಿದ್ದಾರೆ. ಘಟನೆ ನಡೆದ ವೇಳೆಯೇ ತಕ್ಷಣಕ್ಕೆ 3 ಜನ ಪಾರಾಗಿದ್ದರು. ಮಹಾರಾಷ್ಟ್ರದ ಪುಣೆಯಿಂದ 30 ಸಿಬ್ಬಂದಿಗಳ ಎನ್ ಡಿಆರ್ ಎಫ್ ತಂಡ, ಎಸ್ ಡಿ ಆರ್ ಎಫ್, ಹಾಗೂ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವು ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 17 ಗಂಟೆ ಕಾರ್ಯಾಚರಣೆ ನಡೆಸಿದ್ದರು.
200 ಟನ್ ಮೆಕ್ಕೆಜೋಳದ ರಾಶಿ ಅಡಿ ಸಿಲುಕಿದ 10 ಕಾರ್ಮಿಕರು: ಆಮ್ಲಜನಕ ಪೂರೈಕೆ, ರಕ್ಷಣೆ ಮಾಡಲು ಸಾಹಸ!
ಇನ್ನು ಘಟನೆ ಬಳಿಕ ರಾಜಗುರು ಫುಡ್ ಮಾಲೀಕ, ಸೂಪರ್ವೈಸರ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ವಿಜಯಪುರ ಎಸ್ಪಿ ಋಷಿಕೇಶ್ ಸೋನಾವನೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಘಟನೆ ಬಳಿಕ ಮೃತ ಹಾಗೂ ಗಾಯಾಳು ಕಾರ್ಮಿಕರಿಗೆ ರಾಜಗುರು ಫುಡ್ಸ್ ಮಾಲೀಕ ಕಿಶೋರಕುಮಾರ ಜೈನ್ ಪರಿಹಾರ ಘೋಷಣೆ ಮಾಡಿದ್ಧಾರೆ. ಮೃತ ಕಾರ್ಮಿಕರಿಗೆ ತಲಾ 5 ಲಕ್ಷ ಹಾಗೂ ಗಾಯಾಳು ಕಾರ್ಮಿಕರಿಗೆ ತಲಾ 2 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ. ಇದರ ಹೊರತಾಗಿ ಸರ್ಕಾರದಿಂದಲೂ ಮೃತ ಕಾರ್ಮಿಕರಿಗೆ ಗಾಯಗೊಂಡ ಕಾರ್ಮಿಕರಿಗೆ ಪರಿಹಾರ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆ ನಡೆದಾಗ ಸುಮಾರು 15 ಕಾರ್ಮಿಕರು ಸ್ಥಳದಲ್ಲಿ ಪ್ಯಾಂಕಿಂಗ್‌ನಲ್ಲಿ ತೊಡಗಿದ್ದರು. ದುರ್ಘಟನೆ ನಡೆದಾಗ ಕೆಲವರು ಬಚಾವ್ ಆಗಿದ್ದರು. ಫುಡ್ ಪ್ರೋಸೆಸಿಂಗ್ ಯುನಿಟ್ ನ ಹಾರ್ಡ್ ತಗಡಿನ ಕೆಳಗೆ ಕಾರ್ಮಿಕರು ಸಿಲುಕಿ ಮೃತಪಟ್ಟಿದ್ದಾರೆ. ತಗಡಿನ ಶೀಟ್‌ಗಳು ಬಹಳ ಗಟ್ಟಿಯಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ತಗಡಿನ ಕೆಳಗೆ ಕಾರ್ಮಿಕರ ಶವಗಳು ಚಪ್ಪಟೆಯಾಗಿತ್ತು. ಕಬ್ಬಿಣ ಕಟ್ ಮಾಡಿ ಕಾರ್ಯಚರಣೆ ಮಾಡಲಾಯ್ತು.
ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ರೇಡ್, ಕೋಟಿ ಕೋಟಿ ಸಂಪತ್ತು ಪತ್ತೆ!
ಇನ್ನು ಈ ಹಿಂದೆ ಕೂಡ ಕಾರ್ಮಿಕ ಸತ್ತಾಗ ರಾಜ್‌ಗುರು ಸಂಸ್ಕರಣಾ ಘಟಕದ ಮಾಲಿಕ ಮೃತದೇಹವನ್ನು ಕೊಟ್ಟಿರಲಿಲ್ಲ. ಇದನ್ನ ಸ್ವತಃ ಕ್ಯಾಮರಾ ಎದುರು ಕಾರ್ಮಿಕರು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆ ಡೆಡ್ ಬಾಡಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ಗೆ ಉಳಿದ ಕಾರ್ಮಿಕರು ದಾರಿ ಬಿಡದೆ ಅಡ್ಡಿಪಡಿಸಿದರು. ಮೊದಲು ಪರಿಹಾರ ಘೋಷಣೆ ಮಾಡಿ ಆ ಮೇಲೆ ಶವ ಕೊಂಡೊಯ್ಯಿರಿ ಎಂದು ಪ್ರತಿಭಟನೆ ನಡೆಸಿದರು. ಕಯ್ಯಲ್ಲಿ ಕಬ್ಬಿಣದ ರಾಡ್ ಹಿಡಿದು ನಿಂತು ಪ್ರತಿಭಟಿಸಿದ ಬಿಹಾರ ಕಾರ್ಮಿಕರು ಪೊಲೀಸರ ಮನವೊಲಿಕೆಗೂ ಬಗ್ಗದೆ ಆಕ್ರೋಶ ವ್ಯಕ್ತಪಡಿಸಿ ಆಂಬುಲೆನ್ಸ್ ಮೇಲೆ ಗೋವಿನಜೋಳ ತೂರಿ ಸಿಟ್ಟು ಹೊರಹಾಕಿದರು.