ಬೆಂಗಳೂರಲ್ಲಿ ಮಿತಿಮೀರಿದ ಪುಂಡರ ಹಾವಳಿ! ಬೈಕ್ ಹಿಂಬಾಲಿಸಿ ಹೆದ್ದಾರಿ ಉದ್ದಕ್ಕೂ ಯುವತಿಗೆ ಕೀಟಲೆ!

By Ravi Janekal  |  First Published Jun 30, 2024, 3:28 PM IST

ಯುವತಿ ಹೋಗುತ್ತಿದ್ದ ಬೈಕ್ ಹಿಂಬಾಲಿಸಿಕೊಂಡು ಬಂದು ಚುಡಾಯಿಸಿದ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬೆಂಗಳೂರು ಪೊಲೀಸರೇ ಪುಂಡರ ಮಟ್ಟಹಾಕುವುದು ಯಾವಾಗ? ಬರಿ ಮಾತೇ ಆಗೋಯ್ತಾ?


ಆನೇಕಲ್ (ಜೂ.30): ಬೆಂಗಳೂರಲ್ಲಿ ದಿನೇದಿನೆ ಹೆಚ್ಚುತ್ತಿದೆ ಪುಂಡರ ಹಾವಳಿ. ಹಾಡುಹಗಲೇ ಒಂಟಿ ಹೆಣ್ಣುಮಕ್ಕಳನ್ನ ಫಾಲೋ ಮಾಡ್ತಾರೆ ದುರುಳರು. ಹೆದ್ದಾರಿಯಲ್ಲಿ ರಾಜಾರೋಷವಾಗಿ ಹೆಣ್ಣುಮಕ್ಕಳನ್ನ ಚುಡಾಯಿಸುತ್ತಾರೆ. ಪುಂಡರನ್ನ ಮಟ್ಟಹಾಕುತ್ತೇವೆಂದು ಗುಡುಗಿದ್ದ ಬೆಂಗಳೂರು ಪೊಲೀಸರದು ಬರೀ ಮಾತೇ ಆಗೋಯ್ತಾ? ಪುಂಡರನ್ನ ಬೆಂಗಳೂರಲ್ಲಿ ಇಲ್ಲದಂತೆ ಮಾಡುವ ಕೆಲಸ ಯಾವಾಗ? ಬೆಂಗಳೂರು ಪೊಲೀಸರೇ ಇಲ್ಲಿ ನೋಡಿ, ಹೆದ್ದಾರಿಯಲ್ಲಿ ಹೋಗುತ್ತಿದ್ದ ಹೆಣ್ಣುಮಕ್ಖಳ ಹಿಂದೆ ಬೈಕ್‌ನಲ್ಲಿ ಹಿಂಬಾಲಿಸಿ ಹೇಗೆ ಕೀಟಲೆ ಮಾಡುತ್ತಿದ್ದಾರೆ! ಈ ಘಟನೆ ನೋಡಿದಾಗ ಪುಂಡರನ್ನ ಮಟ್ಟಹಾಕುವಲ್ಲಿ ಪೊಲೀಸರು ವಿಫಲವಾಗಿರುವುದು ಎದ್ದು ಕಾಣುತ್ತಿದೆ. ಒಂದು ಹೆಣ್ಣುಮಕ್ಕಳಿಗೆ ಟಾರ್ಚರ್, ಇನ್ನೊಂದು ಕಡೆ ಹೆದ್ದಾರಿ ಉದ್ದಕ್ಕೂ ವೀಲಿಂಗ್ ಮಾಡಿ ವಾಹನ ಸವಾರರಿಗೂ ತೊಂದರೆ ಕೊಡ್ತಿರೋ ಪುಂಡರು.

ಯುವತಿ ಹೋಗುತ್ತಿದ್ದ ಬೈಕ್ ಹಿಂಬಾಲಿಸಿಕೊಂಡು ಬಂದು ಚುಡಾಯಿಸಿದ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಂದಾಪುರದಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಯುವತಿಯನ್ನ ಫಾಲೋ ಮಾಡಿಕೊಂಡು ಬಂದಿರುವ ಪುಂಡರು. ಹಲವು ಬಾರಿ ಯುವತಿ ಎಚ್ಚರಿಕೆ ನೀಡಿದರೂ ಹುಚ್ಚಾಟ ಮುಂದುವರಿಸಿದ ಪುಂಡರು. ವ್ಹೀಲಿಂಗ್ ಮಾಡುತ್ತ ಇತರೆ ವಾಹನಗಳಿಗೆ ತೊಂದರೆ ಕೊಡುತ್ತಲೇ ಯುವತಿ ಬೆನ್ನುಹತ್ತಿದ ದುರುಳರು. ಆಟೋದವರು, ಕಾರು ಚಾಲಕರ ಸೂಚನೆಗೂ ತಲೆಕೆಡಿಸಿಕೊಳ್ಳದೆ ಪುಂಡಾಟ. 

Tap to resize

Latest Videos

ಮೈಸೂರು: ಕ್ರೆಡಿಟ್ ಕಾರ್ಡ್ ಸಾಲಕ್ಕೆ ಹೆದರಿ ಯುವಕ ಆತ್ಮಹತ್ಯೆ

ಒಬ್ಬರಲ್ಲ ಇಬ್ಬರಲ್ಲ ಡಿಯೋ ಬೈಕ್‌ನಲ್ಲಿ ಬಂದ ಎಂಟು ಜನ ಪುಂಡರಿಂದ ಕೀಟಲೆ. ಹೆಬ್ಬಗೋಡಿ ಪೊಲೀಸ್ ಠಾಣೆ ಎದುರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿಯನ್ನ ಹಿಂಬಾಲಿಸಿ ಬಂದು ರೇಗಿಸಿದ ಎಂಟು ಜನ ಪುಂಡರು. ಹಾಡಹಗಲೇ ಹೀಗೆ ಇನ್ನೂ ರಾತ್ರಿ ಹೊತ್ತು ಹೋಗುವ ಒಂಟಿ ಮಹಿಳೆಯರ ಗತಿಯೇನು? ಪದೇಪದೆ ರೇಗಿಸುತ್ತಿದ್ದ ಯುವಕರ ವಿಡಿಯೋ ಮಾಡಿಕೊಂಡ ಯುವತಿ. ಯುವತಿ ವಿಡಿಯೋ ಮಾಡುತ್ತಿದ್ದಂತೆ ಮುಖ ಮುಚ್ಚಿಕೊಂಡು ಪರಾರಿಯಾದ ಕಿರಾತಕರು.

ಬೆಂಗಳೂರು: ಅಮಲಿನಲ್ಲಿ ಜಗಳ, ಮಹಡಿಯಿಂದ ನೂಕಿ ಸ್ನೇಹಿತನ ಕೊಂದ ಪೇಂಟರ್‌..!

ನಗರದಲ್ಲಿ ಪೊಲೀಸರಿದ್ದರೂ ಮಹಿಳೆಯರಿಗೆ ಈ ಪರಿ ತೊಂದರೆಯಾಗುತ್ತಿದೆ. ಸಿಸಿಟಿವಿ ಜಾಲಾಡಿ ಮೊದಲ ಪುಂಡರನ್ನ ಬಂಧಿಸಿ ನಗರದಿಂದಲೇ ಗಡಿಪಾರು ಮಾಡಿ. ಇನ್ನೊಮ್ಮೆ ಮಹಿಳೆಯರಿಗೆ ಚುಡಾಯಿಸುವುದಕ್ಕೆ ಮುಂದಾಗದಂತೆ ಶಿಕ್ಷೆಕೊಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

click me!