ಉತ್ತರಕನ್ನಡ: ನಿಧಿ ಆಸೆಗೆ ಬಿದ್ದು ಬಾವಿ ತೋಡಿದ ಖದೀಮರು..!

By Girish GoudarFirst Published Dec 25, 2022, 11:32 PM IST
Highlights

ಕಳೆದ ಅಮವಾಸ್ಯೆ ದಿನ ದೇವರು ಕನಸಲ್ಲಿ ಬಂದು ಈ ಜಾಗದಲ್ಲಿ ನಾನು ನೆಲಸಿದ್ದೇನೆ. ನೀವು ಇಲ್ಲಿಗೆ ಬಂದು ಆಳದವರೆಗೆ ಬಾವಿ ತೋಡಿ ಅಲ್ಲಿ ಬರುವ ಪವಿತ್ರ ಗಂಗಾಜಲವನ್ನು ನನ್ನ ಮೈಗೆ ಸಿಂಪಡಿಸು. ನಂತರ ಇದು ಪುಣ್ಯ ಕ್ಷೇತ್ರವಾಗುತ್ತೆ ಅಂತಾ ಹೇಳಿದ್ರರಂತೆ. 

ಉತ್ತರಕನ್ನಡ(ಡಿ.25):  ದೇವಿ ಕನಸಲ್ಲಿ ಬಂದು ಬಾವಿ ತೋಡಲು ಹೇಳಿದ್ದಾರೆಂದು ನಿಧಿಯ ಆಸೆಗೆ ಬಿದ್ದು ಮೀಸಲು ಅರಣ್ಯ ಭಾಗದಲ್ಲಿ ಬಾವಿ ತೋಡುತ್ತಿದ್ದ‌ ಭೂಪರು ಇದೀಗ ಕಂಬಿ ಎಣಿಸುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೋಳೂರು ಗ್ರಾಮದಲ್ಲಿ ನಡೆದಿದೆ. 

ಕಳೆದ ನಾಲ್ಕೈದು ದಿನಗಳಿಂದ ಈ ಅರಣ್ಯ ಪ್ರದೇಶದಲ್ಲಿ ನಿತ್ಯ ಕಲ್ಲಿಗೆ ಪೂಜೆ ಮಾಡಿ ನಿಧಿ ಆಸೆಗೆ ಹಾರೆ, ಗುದ್ದಲೆ, ಸಲಾಕೆ ಹಿಡಿದು ಬಾವಿ ತೋಡುತ್ತಿದ್ದ ಕಾರವಾರ ತಾಲೂಕಿನ ಶಿರವಾಡದ ಮೂಲದ ಹಿದಾಯತ್ ಅಬ್ದುಲ್ ಗನಿ (43), ರಸ್ತುಂ ರಜಾಕ್ ಸಾಬ್(53), ಹರ್ಷದ ಅಲಿ ಹೈದರ್ (21), ಸರಫರಾಜ್ ಅಬಿಬುಲ್ಲಾ (25) ಇದೀಗ ಜೈಲು ಸೇರಿದ್ದಾರೆ.‌ ಸ್ವಾರಸ್ಯಕರ ವಿಚಾರವಂದ್ರೆ, ಆರೋಪಿಗಳ‌ ಪೈಕಿ ರುಸ್ತುಂ ರಜಾಕ್ ಎಂಬಾತನಿಗೆ ಮೈ ಮೇಲೆ ಶಿರಸಿ ಮಾರಿಕಾಂಬಾ ದೇವರು ಬರುತ್ತಿದ್ದರಂತೆ. 

Crime News: ಜಮೀನಿಗೆ ನುಗ್ಗಿ 200 ಅಡಿಕೆ ಸಸಿ ಕತ್ತರಿಸಿ ಹಾಕಿದ ದುಷ್ಕರ್ಮಿಗಳು; ರೈತ ಮಹಿಳೆ ಕಂಗಾಲು

ಕಳೆದ ಅಮವಾಸ್ಯೆ ದಿನ ದೇವರು ಕನಸಲ್ಲಿ ಬಂದು ಈ ಜಾಗದಲ್ಲಿ ನಾನು ನೆಲಸಿದ್ದೇನೆ. ನೀವು ಇಲ್ಲಿಗೆ ಬಂದು ಆಳದವರೆಗೆ ಬಾವಿ ತೋಡಿ ಅಲ್ಲಿ ಬರುವ ಪವಿತ್ರ ಗಂಗಾಜಲವನ್ನು ನನ್ನ ಮೈಗೆ ಸಿಂಪಡಿಸು. ನಂತರ ಇದು ಪುಣ್ಯ ಕ್ಷೇತ್ರವಾಗುತ್ತೆ ಅಂತಾ ಹೇಳಿದ್ರರಂತೆ. 

ಈ ರೀತಿ ಕಥೆ ಕಟ್ಟಿಕೊಂಡು ಕಳೆದ ನಾಲ್ಕು ದಿನಗಳಿಂದ ಈ ಭೂಪರು ಬಾವಿ ತೋಡುತ್ತಿದ್ದರು. ಕಾಡಿನ ನಡುವೆ ಇರುವ ದೊಡ್ಡ ಬಂಡೆಗೆ ಪೂಜೆ ಸಲ್ಲಿಸುತ್ತಿದ್ದ ಈ ಆರೋಪಿಗಳು, ಕಳೆದ ನಾಲ್ಕೈದು ದಿನಗಳಲ್ಲಿ ಅದರ ಸಮೀಪದಲ್ಲೇ 15 ರಿಂದ 20 ಅಡಿಗಳ ಬಾವಿಯನ್ನು ತೋಡಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕುಮಾರ ಕೆ.ಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಅವರು ಅರಣ್ಯ ಸಿಬ್ಬಂದಿ ಜತೆ ದಾಳಿ ಮಾಡಿದ್ದಾರೆ. ಇದರಿಂದ ಆರೋಪಿಗಳು ಸ್ಥಳದಲ್ಲಿ ಸಿಕ್ಕಿಬಿದ್ದಿದ್ದಾರೆ. 

ಮೀಸಲು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿ ಬಾವಿ ಯಾಕೆ ತೋಡಿದ್ದೀರಿ ಎಂದು ಅಧಿಕಾರಿಗಳು ಕೇಳಿದಾಗ, ಕಳೆದ ಅಮಾವಾಸ್ಯೆಯ ದಿನ ರಾತ್ರಿ ಶಿರಸಿಯ ಮಾರಿಕಾಂಬೆ ಕನಸಿನಲ್ಲಿ ಬಂದು ಇಲ್ಲಿ ಪೂಜೆ ಸಲ್ಲಿಸಲು ತಿಳಿಸಿದ್ದಾಳೆ. ಹಾಗಾಗಿ ನಾವು ಬಾವಿ ತೋಡುತ್ತಿದ್ದೇವೆ. ನಾವು ಯಾವುದೇ ಮರವನ್ನೂ ಕತ್ತರಿಸಿಲ್ಲ‌ ಎಂದು ಆರೋಪಿಗಳು ಉತ್ತರಿಸಿದ್ದಾರೆ.. ಆದರೆ, ಸಂರಕ್ಷಿತ ಪ್ರದೇಶಕ್ಕೆ ಪ್ರವೇಶಿಸಿ ಬಾವಿ ತೋಡಿದ ಹಿನ್ನೆಲೆ‌ ಆರೋಪಿಗಳ ವಿರುದ್ಧ 1963ರ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಾಲ್ವರನ್ನು ವಶಕ್ಕೆ ಪಡೆಯುವ‌ ಮೂಲಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

click me!