* ದಾವಣಗೆರೆ ನಗರದ ಟಿವಿ ಸ್ಟೇಷನ್ ಕೆರೆಯಲ್ಲಿ ನಡೆದ ಘಟನೆ
* ಸ್ಥಳಕ್ಕೆ ಮೇಯರ್ ಹಾಗೂ ಆಯುಕ್ತರು ಬರುವಂತೆ ಸ್ಥಳೀಯರ ಆಗ್ರಹ
* ನಿನ್ನೆ ಮಧ್ಯಾಹ್ನ ಮನೆಯಿಂದ ನಾಪತ್ತೆಯಾಗಿದ್ದ ಬಾಲಕ
ದಾವಣಗೆರೆ(ಸೆ.12): ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕನ ಶವ ನಗರದ ಟಿವಿ ಸ್ಟೇಷನ್ ಕೆರೆಯಲ್ಲಿ ಪತ್ತೆಯಾದ ಘಟನೆ ಇಂದು(ಭಾನುವಾರ) ನಡೆದಿದೆ. ಗಣ್ಯ (07) ಮೃತಪಟ್ಟ ಬಾಲಕನಾಗಿದ್ದಾನೆ.
ಕೆರೆ ಪಕ್ಕದ ಚಿಕ್ಕಮ್ಮಣ್ಣಿ ದೇವರಾಜ್ ಅರಸು ಬಡಾವಣೆ ನಿವಾಸಿಯಾದ ಬಾಲಕ ಗಣ್ಯ ನಿನ್ನೆ(ಶನಿವಾರ) ಮಧ್ಯಾಹ್ನ ಮನೆಯಿಂದ ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದೆ. ದೊಡ್ಡಮ್ಮನ ಮನೆಯಿಂದ ತಿರುಗಾಡುತ್ತಾ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ರಾಯಚೂರು: ಮೊಸಳೆಗೆ ಬಲಿಯಾಗಿದ್ದ ಬಾಲಕನ ರುಂಡ ಮಾತ್ರ ಪತ್ತೆ
ಕೆರೆಗೆ ಕಾಂಪೌಂಡ್ ಕಟ್ಟದ ಹಿನ್ನೆಲೆಯಲ್ಲಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಮೇಯರ್ ಹಾಗೂ ಆಯುಕ್ತರು ಬರುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕೆಟಿಜೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಿಂದ ಬಾಲಕನ ಶವವನ್ನ ಸ್ಥಳೀಯರು ಹೊರತೆಗೆದಿದ್ದಾರೆ.