ಮಿಡ್‌ನೈಟ್‌ ಮರ್ಡರ್‌ ಕೇಸ್; ಹಂತಕರ ಹೆಡೆಮುರಿ ಕಟ್ಟಿದ ಕಲಬುರಗಿ ಖಾಕಿ!

By Kannadaprabha NewsFirst Published May 25, 2023, 4:31 AM IST
Highlights

ಇಡೀ ಕಲಬುಗಿ ನಗರ ಬೆಚ್ಚಿ ಬೀಳಿಸಿದ್ದ ಮೇ 22ರ ಮಧ್ಯರಾತ್ರಿ ಆದರ್ಶ ನಗರ ರಿಂಗ್‌ ರಸ್ತೆಯಲ್ಲಿ ನಡೆದಂತಹ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಹಂತಕರನ್ನ ಹೆಡಮುರಿ ಕಟ್ಟುವಲ್ಲಿ ಕಲಬುರಗಿ ಪೊಲೀಸರು ಯಶ ಕಂಡಿದ್ದಾರೆ.

ಕಲಬುರಗಿ (ಮೇ.25) : ಇಡೀ ಕಲಬುಗಿ ನಗರ ಬೆಚ್ಚಿ ಬೀಳಿಸಿದ್ದ ಮೇ 22ರ ಮಧ್ಯರಾತ್ರಿ ಆದರ್ಶ ನಗರ ರಿಂಗ್‌ ರಸ್ತೆಯಲ್ಲಿ ನಡೆದಂತಹ ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಹಂತಕರನ್ನ ಹೆಡಮುರಿ ಕಟ್ಟುವಲ್ಲಿ ಕಲಬುರಗಿ ಪೊಲೀಸರು ಯಶ ಕಂಡಿದ್ದಾರೆ.

ಸದರಿ ಕೊಲೆ ಪ್ರಕರಣದಲ್ಲಿ ಪೊಲೀಸ(kalaburagi police)ರಿಂದ ಬಂಧಿತರಾಗಿರುವ ಆರೋಪಿಗಳು ಇಬ್ಬರೂ ವಿದ್ಯಾರ್ಥಿಗಳಾಗಿರೋದು ಪ್ರಕರಣದಲ್ಲಿ ಮತ್ತೆ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಸ್ವರಾಜ್‌ ಸಾಹೀಲ್‌ ನಾಗರಾಜ ಹೊಡಲ್‌ (19) ಹಾಗೂ ಇನ್ನೋರ್ವ ಅಪ್ರಾಪ್ತ ಬಾಲಕನನ್ನು ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಬಳಸಿರುವ ವಾಹನ ತಮ್ಮ ಮನೆ ಮುಂದೆ ಬಚ್ಚಿಡುವಲ್ಲಿ ನೆರವು ನೀಡಿದ್ದನೆಂದು ಆರೋಪಿ ಸ್ವರಾಜ್‌ ತಂದೆ ನಾಗರಾಜ್‌ನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ಮಿಡ್‌ನೈಟ್ ಆಪರೇಷನ್: ಬೆಂಗಳೂರಿನ ಈ ಗ್ಯಾಂಗ್ ಕೈಗೆ ಸಿಕ್ರೆ ನಿಮ್ಮ ಕಥೆ ಅಷ್ಟೇ!

ಬಂಧಿತರೆಲ್ಲರೂ ಗಾಜಿಪುರ ಗಲ್ಲಿಯ ನಿವಾಸಿಗಳಾಗಿದ್ದಾರೆ. ಮಧ್ಯರಾತ್ರಿ ಕೊಲೆ ಮಾಡಿ ಬಂದು ಥಾರ್‌ ಜೀಪ್‌ನ್ನು ಬಚ್ಚಿಟ್ಟಿದ್ದರು ಎನ್ನಲಾಗಿದ್ದು ಪೊಲೀಸರು ಕೊಲೆಗಡುಕರ ಜಾಡು ಹಿಡಿದು ಬರೋಬ್ಬರಿ ಅವರ ಮನೆಗೆ ಹೋಗಿ ಬಂಧಿಸಿದ್ದಾರೆ.

ಸದರಿ ಪ್ರಕರಣದಲ್ಲಿ ಪೊಲೀಸರು ಹಂತಕರ ಬಂಧಿಸಿರೋದಕ್ಕೆ ನಗರ ಪೊಲೀಸ್‌ ಕಮೀಷ್ನರ್‌ ಚೇತನ್‌ ಮೆಚ್ಚುಗೆ ಸೂಚಿಸಿದ್ದು ಕಾರ್ಯಾಚರಣೆಯಲ್ಲಿ ಯಶ ಕಂಡಿರುವ ತಂಡಕ್ಕೆ 10 ಸಾವಿರ ರುಪಾಯಿ ಬಹುಮಾನ ಘೋಷಿಸಿದ್ದಾರೆ.

ಭಾನುವಾರ ಮಧ್ಯರಾತ್ರಿ ಕೊಲೆಯಾದ ಇಂದ್ರಜೀತ್‌ ಹೋಳಿ ತಮ್ಮ ಬಂಧು ಅವಿನಾಶ ಜೊತೆ ಬೈಕ್‌ಮೇಲೆ ಹೊರಟಿದ್ದಾಗ ದಾರಿಯಲ್ಲಿ ದಾರಿ ಕೊಡೋ ವಿಚಾರದಲ್ಲಿ ಆದರ್ಶನಗರ ರಿಂಗ್‌ ರಸ್ತೆಯ ಬಳಿ ಹಂತಕÃರು ಹಾಗೂ ಬೈಕ್‌ ಸವಾರರ ನಡುವೆ ವಾಗ್ವಾದ ನಡೆಯುತ್ತದೆ. ಮಾತಿಗೆ ಮಾತುಬಬೆಳೆದು ಮರುಕ್ಷಣದಲ್ಲೇ ಮಹೀಂದ್ರಾ ಜೀಪ್‌ನಿಂದ ಕೆಳಗಿಳಿಯುವ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದ​ರು.

ಇಡೀ ನಗರವನ್ನೇ ಈ ಘಟನೆ ಬೆಚ್ಚಿ ಬೀಳಿಸಿತ್ತು. ಇದು ಪೊಲೀಸರಿಗೂ ಸವಾಲಾಗಿತ್ತು. ದ್ವೇಶ, ವೈಷಮ್ಯವಿಲ್ಲದೆ ಹೀಗೆ ಕೊಲೆಗಳಾದರೆ ಹೇಗೆಂದು ಜನರು ಭಯಗೊಂಡಿದ್ದರು. ಡಿಸಿಪಿ ಕಾನೂನು ಸುವ್ಯವಸ್ಥೆ ಅಡ್ಡೂರು ಶ್ರೀನಿವಾಸುಲು ನೇತೃತ್ವದಲ್ಲಿ ನಡೆದ ಪ್ರಕರಣದ ತನಿಖೆಯಲ್ಲಿ ಉತ್ತರ ಎಸಿಪಿ ಸಂತೋಷ ಬನಹಟ್ಟಿ, ಎಂಬಿ ನಗರ ಠಾಣೆ ಇನ್ಸಪೆಕ್ಟರ್‌ ವಿಶ್ವನಾಥ ಕಬ್ಬೂರ್‌ ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಪ್ರಕರಣದಲ್ಲಿ ಹಂತಕರು ಪತ್ತೆಯಾಗಿದ್ದಾರೆ.

ಕೊಲೆಯ ಆರೋಪಿ ಸ್ವರಾಜ್‌ ಅಲಿಯಾಸ್‌ ಸಾಹಿಲ್‌ ಈತ ಹಿಂದೆಯೂ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದದ. ಈತನ ವಿರುದ್ಧ ಬಿ ರೌಡೀಶೀಟ್‌ ಇದ್ದು ಪೊಲೀಸರು ಈತನಿಂದ ಮುಚ್ಚಳಿಕೆ ಸಹ ಬರೆಯಿಸಿಕೊಂಡು ನಿಗಾ ಇಟ್ಟಿದ್ದರು. ಈ ಹಂತದಲ್ಲಿಯೇ ಆರೋಪಿ ಮತ್ತೊಂದು ಹೀನ ಕೃತ್ಯ ಎಸಗಿದ್ದಾನೆ. ಈತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದಲ್ಲದೆ ಈತನ ತಂಗೆ ನಾಗರಾಜ್‌ ಹೊಡಲ್‌ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಕಮೀಷ್ನರ್‌ ಚೇತನ್‌ ಹೇಳಿದ್ದಾರೆ.

ಎಂಬಿ ನಗರದಲ್ಲಿ ಸದರಿ ಪ್ರರಣ ದಾಖಲಾಗಿತ್ತು. ಅಲ್ಲಿನ ಇನ್ಸಪೆಕ್ಟರ್‌ ವಿಶ್ವನಾಥ ಕಬ್ಬೂರ್‌ ನೇತೃತ್ವದಲ್ಲಿ ರಚನೆಯಾದ ತಂಡದಲ್ಲಿ ಸಿಬ್ಬಂದಿ ಹಣಮಂತ, ಗುರುರಾಜ, ಮಹೇಶ, ದಸ್ತಯ್ಯ, ಸಂತೋಷ, ಕಾಶಿರಾಮ, ಮುಕೇಶ, ಚನ್ನಬಸಯ್ಯ, ನಾಗರಾಜ್‌ ಸೇರಿದಂತೆ ಇನ್ನೂ ಹಲವರು ಕಾರ್ಯಾಚರಣೆಯಲ್ಲಿದ್ದರು. ತಂಡದ ಇಡೀ ಕೆಲಸವನ್ನು ಕಮೀಷ್ನರ್‌ ಚೇತನ್‌ ಶ್ಲಾಘಿಸಿದ್ದಾರೆ.

ಕಾನೂನು- ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಸದಾ ಸನ್ನದ್ಧ

ಇದೇ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಕಮೀಷ್ನರ್‌ ಚೇತನ್‌ ಕಲಬುರಗಿ(SP Chetan kumar) ಮಹಾನಗರದ ಕಾನೂನು- ಸುವ್ಯವಸ್ಥೆ ಆಪಾಡಲು ಕಲಬುರಗಿಪೊಲೀಸ್‌ ಸದಾಕಾಲ ಸಿದ್ಧವಾಗಿರುತ್ತದೆ. ಜನತೆ ಯಾವುದೇ ಕಾರಣಕ್ಕೂ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು. ತನಿಖೆಯಲ್ಲಿ ಪೊಲೀಸರಿಗೆ ಸಹಕರಿಸುವ ಮೂಲಕ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ನಂಗೆ ಎಣ್ಣೆ ಸಾಲುತ್ತಿಲ್ಲವೆಂದು ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ರೌಡಿಶೀಟರ್‌

ಮೇ ತಿಂಗಳಲ್ಲಿ ಹೆಚ್ಚಿನ ಅಪರಾಧ ಪ್ರಕರಣ ನಡೆದಿವೆ ಎಂದು ಕೆಲವು ಪತ್ರಿಕೆಗಳಲ್ಲಿ ಆಗಿರುವ ವರದಿಯ ಹಿನ್ನೆಲೆಯಲ್ಲಿ ಅಂಕಿ ಸಂಖ್ಯೆ ಸಮೇತ ವಿಷಯ ಪ್ರಸ್ತಾಪಿಸಿದ ಚೇತನ್‌ 2022 ರ ಮೇ ನಲ್ಲಿ 14 ಎಚ್‌ಬಿಟಿ ನಡೆದರೆ 2023ರ ಮೇ ನಲ್ಲಿ 16 ಆಗಿವೆ. ಇನ್ನು 2022 ರಲ್ಲಿ ಸರಗಳ್ಳತನ 2 ದಾಖಲಾದರೆ 2023 ರ ಮೇ ನಲ್ಲಿ 3 ದಾಖಲಾಗಿವೆ. ಬೈಕ್‌ ಕಳವು ಸಹ ಕಳೆದ ವರ್ಷ ಮೇ ನಲ್ಲಿ 20 ದಾಖಲಾದರೆ ಈ ವರ್ಷ ದಾಖಲಾಗಿರುವ ಪ್ರಕರಣ 14. ಮೇ ಇತಂಗಳಲ್ಲಿ ಅಪರಾಧ ಪ್ರಕರಣ ಹೆಚ್ಚೋದಕ್ಕೆ ಹಲವು ಕಾರಣಗಲಿವೆ. ಅವನ್ನೆಲ್ಲಪæäಲೀಸರು ನಿಯಂತ್ರಿಸುವ ಉಪಾಯ ಮಾಡುತ್ತಿದ್ದೇವೆ. ತನಿಖೆ, ಪಂಚನಾಮಾಗಳಲ್ಲಿ ಜನತೆ ಸಹಕರಿಸಬೇಕು. ಕಳೆದ ಏಪ್ರಿಲ್‌ನಲ್ಲಿ ನಡೆದಂತಹ ಚೆನ್ನವೀರ ಜಮಶೆಟ್ಟಿಇವರ ಮನೆ ಕಳವಿನ ಪ್ರಕರಣದಲ್ಲಿ ತನಿಖೆ ಸಾಗಿದೆ. ಕಳ್ಳರು ಮಹಾರಾಷ್ಟ್ರದವರೆಂದು ಗೊತ್ತಾಗಿದೆ. ಒಂದು ಪೊಲೀಸ್‌ ತಂಡ ಅಲಲ್ಲಿಯೂ ಹೋಗಿದೆ. ಈ ಪ್ರಕರಣವನ್ನು ನಾವು ಶೀಘ್ರವೇ ಭೇದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.

click me!