
ಶಿವಮೊಗ್ಗ(ನ.08): ಅಧಿಕಾರಿಗಳು ನಡೆಸಿದ ಭ್ರಷ್ಟಾಚಾರಕ್ಕೆ ಮೆಸ್ಕಾಂ ನೌಕರನೊಬ್ಬ ಜೀವ ತೆತ್ತ ಘಟನೆ ನಗರದ ಕುಂಸಿಯ ಮೆಸ್ಕಾಂ ವಸತಿ ಗೃಹದಲ್ಲಿ ನಿನ್ನೆ(ಗುರುವಾರ) ನಡೆದಿದೆ. ನಂದೀಶ್ (38) ಎಂಬಾತನೇ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಇಲಾಖೆಯ ವಸತಿ ಗೃಹದಲ್ಲೇ ಮೆಸ್ಕಾಂ ಮೇಸ್ತ್ರೀ ನಂದೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದೀಶ್ ವಸತಿ ಗೃಹದಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಳ್ಳುತ್ತಿದ್ದೇನೆ ಎಂದು ನಂದೀಶ್ ಹೇಳಿದ್ದಾರೆ. ಆತ್ಮಹತ್ಯೆಗೂ ಮುನ್ನ ನಂದೀಶ್ ಮಾಡಿರುವ ಆಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಗದಗ: ಕೌಟುಂಬಿಕ ಕಲಹ, ಸಾಲದಿಂದ ಬೇಸತ್ತು 3 ಮಕ್ಕಳೊಂದಿಗೆ ನದಿಗೆ ಹಾರಿ ವ್ಯಕ್ತಿ ಆತ್ಮ*ತ್ಯೆ
ಕಳೆದ ಸೆಪ್ಟೆಂಬರ್ 7 ರಂದು ನಡೆದಿದ್ದ ದುರ್ಘಟನೆಗೆ ಸಂಭವಿಸಿದಂತೆ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ನಂದೀಶ್ ಹೇಳಿದ್ದಾರೆ. ಕುಂಸಿ ಮೆಸ್ಕಾಂ ಘಟಕದಲ್ಲಿ, ಹೊರಗುತ್ತಿಗೆದಾರರಾಗಿದ್ದ ಯುವರಾಜ್ ವಿದ್ಯುತ್ ಶಾಕ್‌ನಿಂದ ಗಾಯಾಳು ಆಗಿದ್ದರು. ಹೊರಗುತ್ತಿಗೆದಾರ ವಿಜಯ್ ಕುಮಾರ್ ಬಳಿ ಯುವರಾಜ್ ಕೆಲಸ ಮಾಡುತ್ತಿದ್ದರು. ಮೆಸ್ಕಾಂ ಅನುಮತಿ ಪಡೆಯದೇ ಏಕಾಏಕಿ ಕಂಬ ಹತ್ತಿ, ದುರಸ್ತಿ ಮಾಡಲು ವಿಜಯ ಕುಮಾರ್ ಸೂಚಿಸಿದ್ದರು. ಎಲ್ಸಿ ಪಡೆಯದೇ ಯುವರಾಜ್ ಗೆ ಕೆಲಸ ಮಾಡಲು ವಿಜಯ ಕುಮಾರ್ ಸೂಚಿಸಿದ್ದರು. ವಿಜಯ್ ಕುಮಾರ್ ಹಾಗೂ ನಂದೀಶ್ ಅವರು ಗಾಯಾಳು ಯುವರಾಜ್ ಅನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು.
ದುರಸ್ತಿ ಆಗಿದೆ ಎಂದು ಅಧಿಕಾರಿಗಳು ಬಿಲ್ ಪಾಸ್ ಮಾಡಿದ್ದ ಕೆಲಸ ಮಾಡಿಸಲು ವಿಜಯ್ ಕುಮಾರ್ ಮುಂದಾಗಿದ್ದರು. ಗಾಯಾಳು ಯುವರಾಜ್‌ನ ಚಿಕಿತ್ಸೆಗೆಂದ್ದು ಮೃತ ನಂದೀಶ್ 4.50 ಲಕ್ಷ ಖರ್ಚು ಮಾಡಿದ್ದರು. ಇದಾದ ನಂತರ ಗಾಯಾಳು ಯುವರಾಜ್ ಸಂಬಂಧಿಕರು ಮತ್ತಷ್ಟು ಹಣ ನೀಡುವಂತೆ ಪೀಡುಸುತ್ತಿದ್ದರಂತೆ.
ಸದರಿ ವಿಷಯದಲ್ಲಿ ಮೆಸ್ಕಾಂನ ಮೇಲಾಧಿಕಾರಿಗಳು ಮೌನ ವಹಿಸಿದ್ದರು. ಮತ್ತಷ್ಟು ಹಣ ಕೊಡದ ಹೊರತು ಯುವರಾಜ್ ನನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಗಾಯಾಳು ಯುವರಾಜ್ ಸಂಬಂಧಿಕರು ಹೇಳಿದ್ದರು. ಈ ವಿಷಯದಲ್ಲಿ ಗಾಯಾಳು ನಂದೀಶ್ ಮಾನಸಿಕ ಹಿಂಸೆ ಅನುಭವಿಸಿದ್ದರು.
ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಣಿ ನೇಣು ಬಿಗಿದು ಆತ್ಮ*ತ್ಯೆ
ಘಟನೆಯಿಂದ ಹೊರಬರಲು ಬೇರೆ ದಾರಿ ಕಾಣದೆ ನಂದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಇಡೀ ಘಟನೆ ಕುರಿತು ನಂದೀಶ್ ಆಡಿಯೋ ಮಾಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ1 ಗುತ್ತಿಗೆದಾರ ವಿಜಯ್ ಕುಮಾರ್, ಸೇರಿದಂತೆ ಗಾಯಳು ಯುವರಾಜ್, ರವಿ, ಜಗದೀಶ್ ಹಾಗೂ ಯುವರಾಜ್ ಸಂಬಂಧಿಕರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ