
ಬೆಂಗಳೂರಿನ ಮಾರತಹಳ್ಳಿಯಲ್ಲಿ ದೇವರ ಹೆಸರಿನಲ್ಲಿ ಹಣ ಕೇಳಿ ಹಲ್ಲೆ!
ಬೆಂಗಳೂರು (ಮೇ.24) ಸಿಲಿಕಾನ್ ಸಿಟಿಯಲ್ಲಿ ದೇವರ ಹೆಸರಿನಲ್ಲಿ ಹಣ ಕೇಳಿ, ಕೊಡದಿದ್ದರೆ ಬೆದರಿಕೆ, ಹಲ್ಲೆ ನಡೆಸುವವಂಥ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿವೆ. ಇದೀಗ ಅಂತಹದ್ದೇ ಘಟನೆ ಮಾರತಹಳ್ಳಿ ಬಸ್ ನಿಲ್ದಾಣದ ಬಳಿ ನಡೆದಿದೆ ಎನ್ನಲಾದ ಈ ಘಟನೆಯೊಂದರಲ್ಲಿ, ದೇವರ ಮೂರ್ತಿ ಮತ್ತು ಚಾವಟಿ ಹಿಡಿದ ಕೆಲವರು ಹಣ ಕೊಡದ ಬಡಪಾಯಿ ವ್ಯಕ್ತಿಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಬ್ಬ ಮಹಿಳೆ ಕಲ್ಲು ಹಿಡಿದುಕೊಂಡು ಮತ್ತು ಮತ್ತೊಬ್ಬ ಚಾವಟಿಯಿಂದ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ದೃಶ್ಯಗಳು ಕಂಡುಬಂದಿವೆ. ಈ ಘಟನೆ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: Bengaluru crime: ಡ್ರಗ್ಸ್ ಮಾರುತ್ತಿದ್ದ ಒಡಿಶಾ ಮೂಲದ 7 ಮಂದಿ ಸೆರೆ
ಬೆಂಗಳೂರಿನಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವ ಕಾರಣ, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಅಂಗಡಿಗಳು ಮತ್ತು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ರೌಡಿಗಳು, ಮಂಗಳಮುಖಿಯರು ಹಾಗೂ ದೇವರ ಹೆಸರಿನಲ್ಲಿ ಹಣ ಕೇಳುವವರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಹಣ ಕೊಡದಿದ್ದರೆ ಬೆದರಿಕೆ, ನಿಂದನೆ ಮತ್ತು ಕೆಲವೊಮ್ಮೆ ಹಲ್ಲೆಗೆ ಒಳಗಾಗುವ ಘಟನೆಗಳು ಸಾಮಾನ್ಯವಾಗಿವೆ.
ಸಾರ್ವಜನಿಕರು ಇಂತಹ ಘಟನೆಗಳಿಂದ ತಮ್ಮ ಸುರಕ್ಷತೆಗಾಗಿ ಜಾಗರೂಕರಾಗಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ