ವರ್ಕ್ ಫ್ರಮ್ ಹೋಂ ರೀಲ್ ನೋಡಿ ₹20 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ!

Published : Jul 15, 2025, 07:37 PM IST
work from home

ಸಾರಾಂಶ

ಮನೆಯಿಂದಲೇ ಕೆಲಸ ಮಾಡುವ ಆಮಿಷವೊಡ್ಡಿ ಇನ್‌ಸ್ಟಾಗ್ರಾಂ ಮೂಲಕ ಮಹಿಳೆಯೊಬ್ಬರಿಗೆ ₹20,62,713 ವಂಚಿಸಲಾಗಿದೆ. ಟೆಲಿಗ್ರಾಂ ಖಾತೆಗಳ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು: ಮನೆಯಿಂದಲೇ ಕೆಲಸ/ಪಾರ್ಟ್‌ಟೈಂ ಕೆಲಸದಿಂದ ಹಣ ಸಂಪಾದಿಸಬಹುದು ಎಂದು ಇನ್‌ಸ್ಟಾಗ್ರಾಂನಲ್ಲಿ ಬಂದ ಸಂದೇಶವನ್ನು ನಂಬಿ ಮಹಿಳೆಯೊಬ್ಬರು 20,62,713 ರು. ಕಳೆದುಕೊಂಡು ವಂಚನೆಗೊಳಗಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಮೇ 6ರಂದು ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಿ ಎಂಬ ಬಗ್ಗೆ ಸಂದೇಶ ಬಂದಿದ್ದು, ಅದನ್ನು ಕ್ಲಿಕ್‌ ಮಾಡಿದಾಗ ವಾಟ್ಸಾಪ್‌ ತೆರೆದುಕೊಂಡಿದೆ. ವಾಟ್ಸಾಪ್‌ನಲ್ಲಿ ಸಂಪರ್ಕಕ್ಕೆ ಬಂದ ಅಪರಿಚಿತ ವ್ಯಕ್ತಿ, ಬಳಿಕ ಟೆಲಿಗ್ರಾಂನಲ್ಲಿ 3 ಲಿಂಕ್‌ ಕಳುಹಿಸಿದ್ದು, ರೆಸ್ಟೋರೆಂಟ್‌, ಸ್ಥಳ, ಹೊಟೇಲ್‌ಗಳನ್ನು ಲೈಕ್‌ ಮಾಡಿ 5 ಸ್ಟಾರ್‌ಗಳನ್ನು ಕೊಟ್ಟು ಕಮೆಂಟ್‌ ಮಾಡಿ, ಸ್ಕ್ರೀನ್‌ ಶಾಟ್‌ ಕಳುಹಿಸಿ ಮನೆಯಿಂದಲೇ ಹಣ ಸಂಪಾದಿಸಬಹುದು ಎಂದು ತಿಳಿಸಿದ್ದಾನೆ.

ಅನಂತರ ಮೀನಾ ರೆಡ್ಡಿ ಎನ್ನುವ ಟೆಲಿಗ್ರಾಂ ಖಾತೆದಾರೆ ಬ್ಯಾಂಕ್‌ ವಿವರ ಪಡೆದುಕೊಂಡಿದ್ದಾಳೆ. ವಿವಿಧ ಟಾಸ್ಕ್‌ಗಳಿಗೆ ಹಂತ ಹಂತವಾಗಿ 120, 200 ರು.ಗಳನ್ನು ವರ್ಗಾವಣೆ ಮಾಡಿದ್ದಾಳೆ. ದೂರುದಾರರನ್ನು ಕೆಲವು ಟೆಲಿಗ್ರಾಂ ಖಾತೆಗಳಿಗೆ ಸೇರಿಸಿ, ಟಾಸ್ಕ್‌ ನೀಡಿದ್ದಾಳೆ. ಟ್ರೇಡಿಂಗ್‌ ಅಕೌಂಟ್‌ ಲಿಂಕ್‌ ಕಳುಹಿಸಿ ರಿಜಿಸ್ಪ್ರೇಷನ್‌ ಆಗಲು ಸೂಚಿಸಿದ್ದಾಳೆ. ಅದರಂತೆ ಲಿಂಕ್‌ಗೆ ಕ್ಲಿಕ್‌ ಮಾಡಿ ಮಾಹಿತಿ ತುಂಬಿದ್ದು, ಅನಂತರ ಆಕೆಯ ಸೂಚನೆಯಂತೆ ಟಾಸ್ಕ್‌ ಪೂರ್ಣಗೊಳಿಸಲು ರಾಜೇಶ್‌ ವರ್ಮಾ ಎಂಬಾತನ್ನು ಸಂಪರ್ಕಿಸಿದ್ದಾರೆ. ಹೀಗೆ ಒಬ್ಬರು ಮತ್ತೊಬ್ಬರನ್ನು ಪರಿಚಯಿಸಿ, ರೋಹಿತ್‌ ಶರ್ಮಾ, ಲಕ್ಕಿ ಸಿಂಗ್‌, ರವಿ ಪಟೇಲ್‌ ಎಂಬವರು ದೂರುದಾರರನ್ನು ನಂಬಿಸಿ 20,62,713 ರು. ಹಣವನ್ನು ವರ್ಗಾವಣೆ ಮಾಡಿಸಿಕೊಂಡು, ಹಣವನ್ನು ಆನ್‌ಲೈನ್‌ ಮೂಲಕ ವಂಚನೆ ಮಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!