ಹಿಂದೂ ಯುವಕನೊಂದಿಗೆ ಮದುವೆ: ಆಟೋ ಹತ್ತಿಸಿ ಗರ್ಭಿಣಿ ಮಗಳ ಕೊಲ್ಲಲೆತ್ನಿಸಿದ ತಂದೆ

By Suvarna NewsFirst Published Aug 5, 2022, 5:42 PM IST
Highlights

ರಾಜಸ್ಥಾನದ ಭರತ್‌ಪುರದಲ್ಲಿ ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಮಹಿಳೆಯ ತಂದೆ ತನ್ನ ಆಟೋರಿಕ್ಷಾದಿಂದ ದಂಪತಿಗೆ ಹಾನಿ ಮಾಡಲು ಯತ್ನಿಸಿದ್ದಾನೆ

ರಾಜಸ್ಥಾನ (ಆ. 05): ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಮಹಿಳೆಯ ತಂದೆ ತನ್ನ ಸ್ವಂತ ಮಗಳನ್ನೇ ಆಟೋ ರಿಕ್ಷಾದಿಂದ ತುಳಿದು ಕೊಲ್ಲಲು ಯತ್ನಿಸಿದ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ. ಗುಂಪು ಸೇರುತ್ತಿದ್ದಂತೆ ಆರೋಪಿ ತಂದೆ ತನ್ನ ಆಟೋದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗರ್ಭಿಣಿ ಮಗಳು ಹೇಗೋ ಪ್ರಾಣ ಉಳಿಸಿಕೊಂಡಿದ್ದಾಳೆ. ಭರತ್‌ಪುರದ ಮಹಿಳೆ ನಗ್ಮಾ ನರೇಂದ್ರ ಸೈನಿ ಎಂಬ ಯುವಕನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರೂ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರಿಂದ ಅವರ ಸಂಬಂಧವನ್ನು ಹುಡುಗಿಯ ಮನೆಯವರು ಒಪ್ಪಿರಲಿಲ್ಲ.

ಮನೆಯವರ ವಿರೋಧದ ನಡುವೆಯೂ  ನಗ್ಮಾ ನರೇಂದ್ರನೊಂದಿಗೆ ಮನೆಯಿಂದ ಓಡಿಹೋಗಿದ್ದರು. ಫೆಬ್ರವರಿ 22 ರಂದು, ದಂಪತಿಗಳು ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾದರು. ಬಳಿಕ ಮದುವೆಯ ನಂತರ ಇಬ್ಬರೂ ಭರತ್‌ಪುರಕ್ಕೆ ಹಿಂದಿರುಗಿದ್ದರು. 

ನಂತರ, ನಗ್ಮಾ ಅವರ ತಂದೆ ಇಸ್ಲಾಂ ಖಾನ್ ಮಗಳನ್ನು ಅಪಹರಿಸಿ ಆಮಿಷ ಒಡ್ಡಿ ಬಲವಂತವಾಗಿ ಮದುವೆಯಾಗಿದ್ದಕ್ಕಾಗಿ ಹುಡುಗನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಕೇಸ್ ಮತ್ತು ಕುಟುಂಬ ಸದಸ್ಯರಿಗೆ ಹೆದರಿದ ಹುಡುಗ ನಗ್ಮಾಳನ್ನು ಮಧ್ಯಪ್ರದೇಶದ ಕಟ್ನಿಗೆ ಕರೆದೊಯ್ದಿದ್ದ. ಬಳಿಕ ಎರಡು ತಿಂಗಳ ಕಾಲ ಮಥುರಾದಲ್ಲಿ ದಂಪತಿ ವಾಸಿಸಿದ್ದರು, ಈ ಸಮಯದಲ್ಲಿ ನಗ್ಮಾ ಗರ್ಭಿಣಿಯಾದರು.

ಕೊಪ್ಪಳ: ಅಂತರ್ಜಾತಿ ಪ್ರೇಮ: ತಮ್ಮನ ಪ್ರೀತಿಗೆ ಅಣ್ಣ ಟಾರ್ಗೇಟ್‌

ಮಗಳನ್ನು ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿದ ತಂದೆ: ದಂಪತಿಗಳು ನಂತರ ಭರತ್‌ಪುರಕ್ಕೆ ಮರಳಿದ್ದರು. ಇಬ್ಬರೂ ನಗರದ ರಂಜಿತ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಗುರುವಾರ ಮಧ್ಯಾಹ್ನ ನರೇಂದ್ರ ತನ್ನ ಪತ್ನಿ ನಗ್ಮಾಳನ್ನು ದಿನನಿತ್ಯದ ತಪಾಸಣೆಗಾಗಿ ಜನನಾ ಆಸ್ಪತ್ರೆಗೆ ಕರೆದೊಯ್ದಾಗ, ನಗ್ಮಾಳ ತಂದೆ ಇಸ್ಲಾಂ ತನ್ನ ಮಗಳನ್ನು ತನ್ನ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ.

''ಈಗಾಗಲೇ ಎರಡೂ ಕಡೆಯವರೊಂದಿಗೆ ಮಾತನಾಡಲಾಗಿದೆ. ಈಗಾಗಲೇ ನ್ಯಾಯಾಲಯದಲ್ಲಿ ಸೆಕ್ಷನ್ 122 ಸಿಆರ್‌ಪಿಸಿ ಅಡಿಯಲ್ಲಿ ಕ್ರಮ ನಡೆಯುತ್ತಿದೆ. ಅವರ ಸುರಕ್ಷತೆಗಾಗಿ ಎಸ್‌ಎಚ್‌ಒಗೂ ಪತ್ರ ಬರೆಯಲಾಗಿದೆ. ಆದರೆ, ಅವರು ಮತ್ತೊಮ್ಮೆ ಬಂದಿದ್ದರಿಂದ, ಅಗತ್ಯ ಕ್ರಮಕ್ಕಾಗಿ ಎಸ್‌ಪಿ ಮತ್ತು ಸಂಬಂಧಪಟ್ಟ ಎಸ್‌ಎಚ್‌ಒಗೆ ಪತ್ರ ಬರೆಯಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ, 

click me!