Latest Videos

ರಸ್ತೆಯಲ್ಲಿ ಮಹಿಳೆಗೆ ತೀವ್ರ ಥಳಿತ ನೋಡುತ್ತಾ ನಿಂತ ಜನ, ಪಶ್ಚಿಮ ಬಂಗಾಳದಲ್ಲಿ ತಾಲಿಬಾನ್ ಶಿಕ್ಷೆ ವಿಡಿಯೋ!

By Chethan KumarFirst Published Jun 30, 2024, 8:25 PM IST
Highlights

ನಡು ರಸ್ತೆಯಲ್ಲಿ ಮಹಿಳೆಯನ್ನು ತೀವ್ರವಾಗಿ ಥಳಿಸಲಾಗಿದೆ. ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರೂ ಎಲ್ಲರೂ ನಿಂತು ನೋಡಿದ್ದಾರೆ. ಟಿಎಂಸಿ ಪಕ್ಷದ ಕೆಲ ಪುಂಡರು ಈ ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ. ಇತ್ತ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ಮಮತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
 

ಕೋಲ್ಕತಾ(ಜೂ.30) ಪಶ್ಚಿಮ ಬಂಗಾಳದ ವಿಡಿಯೋ ಒಂದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ನಡು ರಸ್ತೆಯಲ್ಲಿ ಮಹಿಳೆ ಹಾಗೂ ಪುರುಷನಿಗೆ ತೀವ್ರವಾಗಿ ಥಳಿಸುವ ಈ ವಿಡಿಯೋ ಇದೀಗ ಮಮತಾ ಬ್ಯಾನರ್ಜಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಟಿಎಂಸಿ ನಾಯಕ ತಜೇಮುಲ್ ಈ ಕೃತ್ಯ ಎಸಗಿದ್ದಾರೆ  ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಮಹಿಳೆಯನ್ನು ನಡು ರಸ್ತೆಯಲ್ಲಿ ತೀವ್ರವಾಗಿ ಥಳಿಸಲಾಗಿದೆ. ಮಹಿಳೆ ಅಸ್ವಸ್ಥಗೊಂಡರೆ, ಇತ್ತ ಪುರುಷನ ಮೇಲೂ ಇದೇ ರೀತಿ ಥಳಿಸಾಗಿದೆ. 50ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿದ್ದರೂ ಯಾರೊಬ್ಬರು ನೆರವಿಗೆ ಬಂದಿಲ್ಲ. ಈ ವಿಡಿಯೋ ವೈರಲ್ ಆಗುತ್ತದ್ದಂತೆ ಬಿಜೆಪಿ ಮಮತಾ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.

ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಸೇರಿದಂತೆ ಹಲವು ನಾಯಕರು ಈ ವಿಡಿಯೋ ಹಂಚಿಕೊಂಡು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ, ಪುರುಷರಿಗೆ ರಕ್ಷಣೆ ಇಲ್ಲ. ನಡು ಬೀದಿಯಲ್ಲಿ ಯಾವ ಭಯವೂ ಇಲ್ಲದೆ ಈ ರೀತಿ ಥಳಿಸಲಾಗುತ್ತಿದೆ ಎಂದು ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಈ ಕೃತ್ಯ ಎಸಗಿರುವುದು ಜೆಸಿಬಿ ಎಂದು ಗುರುತಿಸಿಕೊಂಡಿರುವ ಟಿಎಂಸಿ ನಾಯಕ ಎಂಬ ಆರೋಪ ಕೇಳಿಬಿಂದಿದೆ.

ನಡು ರಸ್ತೆಯಲ್ಲಿ ಯುವತಿಗೆ ಖಾಸಗಿ ಅಂಗ ತೋರಿಸಿ ಹಸ್ತಮೈಥುನ, ಕಾಮುಕನ ಅಸಹ್ಯ ದೃಶ್ಯ ಸೆರೆ!

ತಪ್ಪು ಮಾಡಿದವರಿಗೆ ತಾನೇ ಶಿಕ್ಷೆ ನೀಡುವ ಮೂಲಕ ಸ್ಥಳೀಯವಾಗಿ ಜನರಲ್ಲಿ ಭಯ ಹುಟ್ಟಿಸಿರುವ ಜೆಸಿಬಿ ಈ ಕೃತ್ಯ ಎಸಗಿದ್ದಾನೆ. ಅತ್ಯಂತ ಕ್ರೌರ್ಯವಾಗಿ ಥಳಿಸಲಾಗಿದೆ. ಈ ಘಟನೆಯಲ್ಲಿ ಇಬ್ಬರು ಅಸ್ವಸ್ಥಗೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ತಜೇಮುಲ್ ತಾಲಿಬಾನ್ ರೀತಿ ಇನ್‌ಸಾಫ್ ಸಭಾ ಆಯೋಜಿಸಿದ್ದಾನೆ. ಈ ಸಭೆಯಲ್ಲಿ ಆರೋಪ ಪ್ರತ್ಯಾರೋಪ, ತಪ್ಪಿನ ಮಾಹಿತಿ ಕೇಳಿ ಅಲ್ಲೆ ಶಿಕ್ಷೆ ನೀಡುವ ಈ ಸಭೆ ಇದೀಗ ಪಶ್ಚಿಮ ಬಂಗಾಳ ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳಿಸಿದೆ.

 

This is the ugly face of Mamata Banerjee’s rule in West Bengal.

The guy in the video, who is beating up a woman mercilessly, is Tajemul (popular as JCB in the area). He is famous for giving quick justice through his ‘insaf’ sabha and is a close associate of Chopra MLA Hamidur… pic.twitter.com/fuQ8dVO5Mr

— Amit Malviya (@amitmalviya)

 

ಸ್ಥಳೀಯ ಮಾಧ್ಯಮಗಳ ಮಾಹಿತಿ ಪ್ರಕಾರ, ಮಹಿಳೆಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಇದೆ ಅನ್ನೋ ಆರೋಪಕ್ಕೆ ಈ ರೀತಿ ಥಳಿಸಲಾಗಿದೆ ಎಂದು ವರದಿಯಾಗಿದೆ. ಈ ವಿಡಿಯೋಗೆ ಭಾರಿ ಆಕ್ರೋಶ ಕೇಳಿ ಬರುತ್ತಿದೆ. ವಿಡಿಯೋ ವೈರಲ್ ಆದ ಬಳಿಕ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವು ನಾಯಕರು ಟಿಎಂಸಿ ವಿರುದ್ದ ಆಕ್ರೋಶ ಹೊರಹಾಕಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಪಶ್ಚಿಮ ಬಂಗಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜಭವನದಲ್ಲಿ ಪೊಲೀಸರಿಂದಲೇ ಕಂಟಕ? ನನಗೆ ಅಭದ್ರತೆ ಕಾಡುತ್ತಿದೆ ಎಂದ ಪಶ್ಚಿಮ ಬಂಗಾಳ ರಾಜ್ಯಪಾಲ!

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾರ್ಜಿ ಷರಿಯಾ ನ್ಯಾಯಾಲಯ ನಡೆಸುತ್ತಿದ್ದಾರೆ. ಇದರ ಪರಿಣಾಮ ಗೂಂಡಾಗಳು ತಾಲಿಬಾನ್ ರೀತಿ ಶಿಕ್ಷೆ ವಿಧಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. 
 

click me!