
ಅಹಮದಾಬಾದ್(ಸೆ. 16) ಇದೊಂದು ವಿಚಿತ್ರ ಪ್ರಕರಣ. ಸೆಕ್ಸ್ ಬೇಕೆಂದು ಕೇಳಿದ ಪತ್ನಿಯ ಮೇಲೆ ಈ ಪತಿರಾಯ ಮಾರಕ ಹಲ್ಲೆ ಮಾಡಿದ್ದಾನೆ. ತಾನು ಲೈಂಗಿಕ ಸುಖದಿಂದ ವಂಚಿನಾಗಿದ್ದೇನೆ. ಪತಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ಪೊಲೀಸರ ಮೊರೆ ಹೋಗಿದ್ದಾಳೆ.
ಗುಜರಾತ್ ನ ಅಹಮದಾಬಾದ್ ನಿಂದ ಪ್ರಕರಣ ವರದಿಯಾಗಿದೆ. ಈ ವರ್ಷದ ಆಗಸ್ಟ್ ನಿಂದ ಪತಿ ನನ್ನೊಂದಿಗೆ ಸೇರುತ್ತಿಲ್ಲ. ಸೆಕ್ಸ್ ಬೇಕು ಎಂದಾಗ ಎಲ್ಲ ಹಲ್ಲೆ ಮಾಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ವರ್ಷದ ಫೆಬ್ರವರಿ 27 ರಂದು ವಿವಾಹವಾಗಿತ್ತು. ಅಲ್ಲಿಂದಲೇ ವರದಕ್ಷಿಣೆ ಕಿರುಕುಳವೂ ಆರಂಭವಾಗಿತ್ತು. ಪತಿ ಮತ್ತು ಆತನ ಕುಟುಂಬದವರು ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದರುನ ಎಂದು ಪತ್ನಿ ಹೇಳಿದ್ದಾಳೆ.
ಮೂವತ್ತರ ನಂತರದ ಸೆಕ್ಸ್ ಲೈಫ್ ನಲ್ಲಿ ಏನೆಲ್ಲ ಬದಲಾವಣೆ
ಮದುವೆಯಾದ ನಂತರ ಹತ್ತು ದಿನಗಳ ಕಾಲ ಪತಿ-ಪತ್ನಿ ಸೇರಿದ್ದಾರೆ. ಗಂಡ ಇದ್ದಕ್ಕಿದ್ದಂತೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದ್ದಾನೆ. ಬೆಡ್ ರೂಂ ನಲ್ಲಿದ್ದಾಗ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾನೆ. ಸೆಕ್ಸ್ ಬೇಕೆಂದು ಕೇಳಿದರೆ ಥಳಿಸುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ನನ್ನ ಮೇಲೆ ಗಂಡನಿಗೆ ತಿರಸ್ಕಾರ ಹುಟ್ಟಿದ್ದು ಗಂಡ ಮತ್ತೊಂದು ಸಂಬಂಧ ಶುರು ಮಾಡಿಕೊಂಡಿದ್ದ ಎಂದಿರುವ ಮಹಿಳೆ ಆಗಸ್ಟ್ 1 ರಂದು ಮನೆ ಬಿಟ್ಟಿದ್ದಾರೆ. ನಂತರ ಕೆಲ ದಿನಗಳ ನಂತರ ವಾಪಸ್ ಹೋದರೂ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಇರಲಿಲ್ಲ. ಕೊನೆಗೆ ಆಗಸ್ಟ್ 8 ರಂದು ಮನೆ ಬಿಟ್ಟು ಪೊಲೀಸರಿಗೆ ದೂರು ನೀಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ