ಕೋಲಾರ; ಬಸ್-ಟಾಟಾ ಏಸ್ ನಡುವೆ ಸಿಕ್ಕಿ ಬೈಕ್ ಅಪ್ಪಚ್ಚಿ, ತಂದೆ-ಮಗಳ ದುರ್ಮರಣ

By Suvarna News  |  First Published Sep 16, 2021, 4:37 PM IST

* ಕೋಲಾರ - ಚಿಂತಾಮಣಿ ರಸ್ತೆಯಲ್ಲಿ ಭೀಕರ ಅಪಘಾತ.

* ಕೋಲಾರ ತಾಲೂಕಿನ ಮದ್ದನಹಳ್ಳಿ ಬಳಿಯ ಮುರಾರ್ಜಿ ಶಾಲೆಯ ಮುಂಭಾಗ ಅಪಘಾತ.

* KSRTC ಬಸ್ ,ಟಾಟಾ ಎಸಿ ಹಾಗೂ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ

* ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವು.


ಕೋಲಾರ ( ಸೆ.16)  ಕೋಲಾರ - ಚಿಂತಾಮಣಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಕೋಲಾರ ತಾಲೂಕಿನ ಮದ್ದನಹಳ್ಳಿ ಬಳಿಯ ಮುರಾರ್ಜಿ ಶಾಲೆಯ ಮುಂಭಾಗ ಅಪಘಾತ ಸಂಭವಿಸಿದೆ. KSRTC ಬಸ್ ,ಟಾಟಾ ಎಸ್ ಹಾಗೂ ದ್ವಿಚಕ್ರ ವಾಹನಗಳ ಸರಣಿ ಅಪಘಾತವಾಗಿದೆ.

Tap to resize

Latest Videos

ಪೆಟ್ರೋಲ್ ಖಾಲಿ ಎಂದು ಬೈಕ್ ನಿಲ್ಲಿಸಿದ್ದವರಿಗೆ ಬಂದು ಅಪ್ಪಳಿಸಿದ ಯಮ 'ಕಾರು'

ಸಾವನ್ನಪ್ಪಿರುವ  ತಂದೆ ಹಾಗೂ ಮಗಳ ವಿಳಾಸ ತಿಳಿದುಬಂದಿಲ್ಲ. ಬಸ್ ಹಾಗೂ ಟಾಟಾ ಎಸಿ ನಡುವೆ ಸಿಲುಕಿಕೊಂಡ ದ್ವಿಚಕ್ರ ವಾಹನದಲ್ಲಿದ್ದವರು ಸಿಲುಕಿಕೊಂಡಿದ್ದಾರೆ. ಕೋಲಾರದಿಂದ ಚಿಂತಾಮಣಿ ಕಡೆಗೆ ಹೋಗುತ್ತಿದ್ದ KSRTC ಬಸ್  ಚಾಲಕನದ್ದೇ ತಪ್ಪಿದೆ ಎಂದು ಮೇಲು ನೋಟಕ್ಕೆ ಹೇಳಲಾಗಿದೆ. 

ಬೆಂಗಳೂರಿನಲ್ಲಿಯೂ ಕಳೆದ ಒಂದೆರಡು ವಾರದಲ್ಲಿ ಭೀಕರ ಅಪಘಾತಕ್ಕೆ ಪ್ರಾಣ ಹಾನಿಯಾಗಿದೆ. ಕೋರಮಂಗಲದ ಆಡಿ ಕಾರಿನ ದುರಂತ, ಎಲೆಕ್ಟ್ರಾನಿಕ್ ಸಿಟಿ ಫ್ಲೈ ಒಔರ್ ದುರಂತ ದ ಜತೆಗೆ ಮದ್ಯದ ನಶೆಯಲ್ಲಿದ್ದ ಟಿಟಿ ಚಾಲಕ ಜನರ ಮೇಲೆ ವಾಹನ ಹಾಯಿಸಿದ್ದ. 

 

click me!