
ಅಹಮದಾಬಾದ್(ಫೆ. 19) ಇದೊಂದು ವಿಚಿತ್ರ ಪ್ರಕರಣ. ಎರಡು ಜೋಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮದೇ ನವಜಾತ ಶಿಶುವನ್ನು ಅರ್ಧದಲ್ಲಿ ಬಿಟ್ಟುಹೋದ ಆರೋಪ ಇವರ ಮೇಲೆ ಇದೆ.
ವೆಜಲ್‌ಪುರ ಮತ್ತು ಜುಹುಪುರದ ಎರಡು ಜೋಡಿಗಳ ಮೇಲೆ ಪ್ರಕರಣ ದಾಖಲಾಗಿದೆ. ಮದುವೆಗೂ ಮುನ್ನ ಸಂಬಂಧ ಇಟ್ಟುಕೊಂಡ ಕಾರಣ ಜನಿಸಿದ್ದ ಮಗುವನ್ನು ಏನು ಮಾಡಬೇಕೆಂದು ತೋಚದೆ ಅನಾಥವಾಗಿ ಬಿಟ್ಟಿದ್ದರು.
ಆಟೋ ಚಾಲಕನೊಬ್ಬನನ್ನು ತನ್ನದೇ ಮಗುವಿನ ನಕಲಿ ಸಂರಕ್ಷಕನಾಗಿದ್ದ. ಕಾಲುವೆ ಬಳಿ ಮಗುವೊಂದು ಸಿಕ್ಕಿದೆ ಎಂದು ಆತ ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ಆತನ ವಿಚಾರಣೆ ಮಾಡಿದಾಗ ಒಂದಕ್ಕೊಂದು ಸಂಬಂಧ ಇಲ್ಲದ ಉತ್ತರ ನೀಡಿದ್ದಾನೆ.
ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಗರ್ಭಿಣಿ ಪತ್ನಿಯನ್ನು ಹತ್ಯೆ ಮಾಡಿದ
ಆಟೋ ಚಾಲಕ ಸಫ್ರುದ್ದೀನ್ ಶೇಖ್ ಒಂದು ವರ್ಷದ ಹಿಂದೆ ಇನ್ನೊಂದು ಮದುವೆಯಾಗಿದ್ದ ಸಂಗತಿಯೂ ಬಯಲಾಗಿದೆ. ಎರಡನೇ ಹೆಂಡತಿಯಿಂದ ಪಡೆದ ಮಗುವನ್ನು ಅನಾಥ ಮಾಡಿದ್ದ ಎಂಬ ಆತಂಕಕಾರಿ ಅಂಶವೂ ಬಯಲಾಗಿದೆ.
ತನ್ನ ಮೊದಲ ಹೆಂಡತಿ ಬಳಿ ಎರಡನೇ ಹೆಂಡತಿಯ ಹೆಣ್ಣು ಮಗುವನ್ನು ತೆಗೆದುಕೊಂಡು ಹೋಗಿ ಬೀದಿ ನಾಯಿಗಳಿಂದ ಮಗು ರಕ್ಷಣೆ ಮಾಡಿ ತಂದಿದ್ದೇನೆ ಎಂದಿದ್ದಾನೆ. ನಂತರ ದಂಪತಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಆದರೆ ಆಟೋ ಚಾಲಕನ ಎಲ್ಲ ಆಟ ತನಿಖೆಯಲ್ಲಿ ಬಯಲಾಗಿದೆ.
ಇನ್ನೊಂದು ಪ್ರಕರಣದಲ್ಲ ವೆಜಲ್‌ಪುರದ ಶ್ಯಾಮಸುಂದರ್ ಸೊಸೈಟಿ ಬಳಿ ಕಾರೊಂದರ ಕೆಳಗೆ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಮಗುವನ್ನು ಬಿಟ್ಟು ಹೋಗುತ್ತಿರುವ ಮಹಿಳೆಯೊಬ್ಬಳ ಗುರುತು ಪತ್ತೆಯಾಗಿದೆ. 27 ವರ್ಷದ ಕುಸುಮ್ ಬೀಲ್ ಎಂಬಾಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮೂರು ಮಕ್ಕಳ ತಾಯಿಯಾಗಿರುವ ಈಕೆ ತನ್ನ ಗೆಳೆಯನ ಕಾರಣಕ್ಕೆ ಮತ್ತೆ ಗರ್ಭಿಣಿಯಾಗಿ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಳು.
ಒಂದು ವರ್ಷದ ಹಿಂದೆ ಗಂಡನಿಂದ ಬೇರೆಯಾಗಿದ್ದು ಗಂಡ ವಾಪಸ್ ಬರುತ್ತಾನೆ ಎಂದು ನಂಬಿಕೊಂಡಿದ್ದಳು. ಆದರೆ ಈ ನಡುವೆ ಗೆಳೆಯನಿಂದ ಮಗುವೊಂದಕ್ಕೆ ಜನ್ಮ ನೀಡಿ ಏನು ಮಾಡಬೇಕು ಎಂದು ತೋಚದೆ ಒದ್ದಾಡುತ್ತಿದ್ದಳು. ಈಕೆ ಮತ್ತು ಗೆಳೆಯ ಚೇತನ್ ಕೋಲಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ