ಲೆಫ್ಟಿನೆಂಟ್ ಕರ್ನಲ್ ರ್ಯಾಂಕಿಂಗ್ ಯೂನಿಫಾರ್ಮ್ ಧರಿಸಿಕೊಂಡು ಅಡ್ಡಾಡುತ್ತಾ ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಲಾಗಿದೆ.
ಉತ್ತರ ಕನ್ನಡ (ನ.4): ಲೆಫ್ಟಿನೆಂಟ್ ಕರ್ನಲ್ ರ್ಯಾಂಕಿಂಗ್ ಯೂನಿಫಾರ್ಮ್ ಧರಿಸಿಕೊಂಡು ಅಡ್ಡಾಡುತ್ತಾ ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಲಾಗಿದೆ. ಉತ್ತರಕನ್ನಡ ಜಿಲ್ಲಾ ಕಾರವಾರ ಸಿದ್ಧರ ನಿವಾಸಿ ವಿನಾಯಕ ಮಹಾಲೆ ಎಂಬಾತನೇ ಬಂಧಿತ ಫೇಕ್ ಆರ್ಮಿ ಪರ್ಸನ್. ಪ್ರತೀ ದಿನ ಆರ್ಮಿ ಯೂನಿಫಾರ್ಮ್ ಧರಿಸಿಕೊಂಡು ಬೈಕ್‌ನಲ್ಲೇ ಕಾರವಾರ, ಸೌತ್ ಗೋವಾ ಓಡಾಡುತ್ತಿದ್ದ ಈ ಫೇಕ್ ಆರ್ಮಿ ಪರ್ಸನ್, ಆರ್ಮಿಯಲ್ಲಿ ಕೆಲಸ ಕೊಡಿಸೋದಾಗಿ ಹಲವರಿಂದ ಹಣ ಪಡೆದು ಮೋಸ ಮಾಡಿದ್ದಾನೆ. ಒಬ್ಬರಿಂದ 66,000ರೂ., ಇನ್ನೊಬ್ಬರಿಂದ 35,000ರೂ. ಸೇರಿದಂತೆ ಹಲವರಿಂದ ಹಣ ಪಡೆದು ಪಂಗನಾಮ ಹಾಕಿರುವ ಈ ಭೂಪ, ಒಬ್ಬರಿಂದಂತೂ 4 ಲಕ್ಷ ರೂ. ಪಡೆದು ಕೊನೆಗೂ ವಾಪಾಸ್ ನೀಡಿದ್ದ. ಕಾರವಾರ ಕಡವಾಡ ಮಾರುತಿ ನಗರದ ಹೇಮಲತಾ ಎಂಬವರ ಪುತ್ರ ಪ್ರಸಾದ್ ಎಂಬಾತನಿಗೆ ನೇವಿಯಲ್ಲಿ ಪಿಯೋನ್ ಕೆಲಸ ಕೊಡಿಸುವುದಾಗಿ 35,000ರೂ. ಪಡೆದಿದ್ದ ವಿನಾಯಕ ಮಹಾಲೆ, ಅವರಿಗೂ ಮೋಸ ಮಾಡಿದ್ದ.
ಈತನ ಚಟುವಟಿಕೆಯನ್ನು ಗಮನಿಸುತ್ತಿದ್ದ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು, ಕಳೆದ ಒಂದೆರಡು ವಾರಗಳಿಂದ ಈತನ ಮೇಲೆ ನಿಗಾಯಿರಿಸಿದ್ದರು. ಬಳಿಕ ಗ್ರೌಂಡ್ ವರ್ಕ್ ಮಾಡಿದಾಗಿ ಈತನ ಅಸಲೀಯತ್ತು ಬಯಲಾಗಿದ್ದು, ಕೂಡಲೇ ಜಂಟಿ ಕಾರ್ಯಾಚರಣೆ ನಡೆಸಿದ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯ ಮನೆಯನ್ನು ಹುಡುಕಾಡಿದಾಗ 66,000ರೂ.ನಗದು ಹಣ ಲಭ್ಯವಾಗಿದ್ದು, ಆರೋಪಿ ವಿರುದ್ಧ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
undefined
Umesh Reddy: ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಅಲ್ಲದೇ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಂದಹಾಗೆ, ಆರೋಪಿ ಆರ್ಮಿ ಹೆಸರಿನಲ್ಲಿ ಭಾರೀ ಹಣ ಮಾಡಲು ಮಾಸ್ಟರ್ ಪ್ಲ್ಯಾನ್ ಹಾಕಿಕೊಂಡಿದ್ದ. ಈ ಹಿಂದೆ ಆರೋಪಿ ಬೆಳಗಾವಿ ಕಮಾಂಡೋ ಟ್ರೈನಿಂಗ್ ಸ್ಕೂಲ್‌ನಲ್ಲಿ ಚಿಕ್ಕಪುಟ್ಟ ಕೆಲಸಕ್ಕೆ ಸೇರಿಕೊಂಡಿದ್ದ. ಮರಾಠಾ ಲೈಟ್ ಇನ್‌ಫೆಂಟ್ರಿ ವಿಭಾಗದಡಿ ಹೆಲ್ಪಿಂಗ್ ಬಾಯ್ ಆಗಿ ಸ್ವೀಪಿಂಗ್ ಮುಂತಾದ ಕೆಲಸ ಮಾಡ್ತಿದ್ದ ಈ ಭೂಪ ಅಲ್ಲೇ ಅಧಿಕಾರಿಗಳ ರ್ಯಾಂಕಿಂಗ್, ಅವರ ಯೂನಿಫಾರ್ಮ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದ.
ನಡೆದುಕೊಂಡು ಹೋಗುವಾಗ ಕ್ರೇನ್ ಹರಿದು ವಿದ್ಯಾರ್ಥಿನಿ ದಾರುಣ ಸಾವು, ಸ್ಥಳೀಯರ ಪ್ರತಿಭಟನೆ
ಬಳಿಕ ಆ ಕೆಲಸವನ್ನು ಬಿಟ್ಟು 2015-16ರ ವೇಳೆ ಆರ್ಮಿ ಆಫಿಸರ್ ಯೂನಿಫಾರ್ಮ್ ಖರೀದಿಸಿದ್ದ ಆರೋಪಿ, 2020ರಿಂದ ತಾನು ಅಧಿಕಾರಿಯೆಂದು ತೋರಿಸಿಕೊಳ್ಳುತ್ತಾ ಎಲ್ಲೆಡೆ ಅಡ್ಡಾಡ್ತಿದ್ದ. ಕಾರವಾರ ಹಾಗೂ ಗೋವಾ ಭಾಗದಲ್ಲಿ ಹಲವರಿಗೆ ಮೋಸ ಮಾಡಿರುವ ಈತನನ್ನು ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಕೊನೆಗೂ ಜಾಲ ಬೀಸಿ ಹೆಡೆಮುರಿ ಕಟ್ಟಿದ್ದಾರೆ.