
ಮುಂಬೈ (ಆ. 10): ಮಹಿಳೆ ತನ್ನ ಕುಟುಂಬದೊಂದಿಗೆ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ತೋರಿಸಿದ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ನಡೆದಿದೆ. 28 ವರ್ಷದ ಆರೋಪಿಯನ್ನು ಇದೀಗ ಕುರ್ಲಾ ಪೊಲೀಸರು ಬಂಧಿಸಿದ್ದಾರೆ. ಮಾನವ ಸಂಪನ್ಮೂಲ ಸಲಹೆಗಾರ್ತಿಯಾಗಿ (HR consultant) ಕೆಲಸ ಮಾಡುತ್ತಿರುವ ಮಹಿಳೆ ಆಗಸ್ಟ್ 7 ರಂದು ತನ್ನ ಸಹೋದರ, ಪತಿ ಮತ್ತು ಮಗುವಿನೊಂದಿಗೆ ದಾದರ್‌ಗೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಮನೆಗೆ ಹಿಂದಿರುಗುತ್ತಿದ್ದಾಗ, ಮಹಿಳೆ ಮತ್ತು ಅವರ ಕುಟುಂಬದವರು ಸಂಜೆ 6.32 ಕ್ಕೆ ಕಲ್ಯಾಣ್ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನ ಜನರಲ್ ಕಂಪಾರ್ಟ್‌ಮೆಂಟ್ ಜನರಿಂದ ತುಂಬಿತ್ತು. ಮಹಿಳೆಯ ಪತಿ ಮತ್ತು ಅವರ ಮಗಳು ಆಸನವನ್ನು ಕಂಡುಕೊಂಡರು, ಮಹಿಳೆ ಮತ್ತು ಸಹೋದರ ಅವರ ಹತ್ತಿರ ನಿಂತರು. ರೈಲು ಕಂಜುರ್ಮಾರ್ಗ್ ತಲುಪುತ್ತಿದ್ದಂತೆ ಮಹಿಳೆಗೆ ಹಿಂದೆ ನಿಂತಿರುವ ವ್ಯಕ್ತಿ ಖಾಸಗಿ ಅಂಗ ತೋರಿಸುತ್ತಿದ್ದಾನೆ ಎಂದು ಸಹ-ಪ್ರಯಾಣಿಕರೊಬ್ಬರು ತಿಳಿಸಿದರು ಎಂದು ವರದಿಗಳು ತಿಳಿಸಿವೆ.
ಬಳಿಕ ವ್ಯಕ್ತಿಗೆ ಮಹಿಳೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಪತಿ ಮತ್ತು ಇತರ ಸಹ ಪ್ರಯಾಣಿಕರಿಂದ ವ್ಯಕ್ತಿಯನ್ನು ಥಳಿಸಿದ್ದಾರೆ. ಆರೋಪಿಯನ್ನು ಎಎ ಅನ್ಸಾರಿ ಎಂದು ಗುರುತಿಸಲಾಗಿದ್ದು ಬೈಕುಲ್ಲಾ ನಿವಾಸಿ ಎನ್ನಲಾಗಿದೆ. ಘಟನೆ ಬಳಿಕ ಆರೋಪಿಯನ್ನು ಥಾಣೆಯಲ್ಲಿ ರೈಲಿನಿಂದ ಕೆಳಗಿಳಿಸಲಾಗಿದ್ದು ಪೊಲೀಸರು ವಶಕ್ಕೆ ಪಡೆದು ಐಪಿಸಿಯ ಕಿರುಕುಳದ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಮಹಿಳೆ ಮುಂದೆ ಅಸಭ್ಯ ವರ್ತನೆ ತೋರಿದ ಮಾನಸಿಕ ರೋಗಿ ಹಿಡಿದು ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ!
ಸೆಪ್ಟೆಂಬರ್ 2020 ರಂದು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಿಂದ ವರದಿಯಾದ ಇದೇ ರೀತಿಯ ಘಟನೆಯಲ್ಲಿ, ಅಪರಿಚಿತ ದುಷ್ಕರ್ಮಿಯೊಬ್ಬ ಮಹಿಳೆಗೆ ವೀಡಿಯೊ-ಕಾಲ್ ಮಾಡಿ ತನ್ನ ಖಾಸಗಿ ಅಂಗಗಳನ್ನು ತೋರಿಸಿದ್ದಾ. ಮಹಿಳೆಯ ಪತಿ ನೀಡಿದ ದೂರಿನಲ್ಲಿ ದುಷ್ಕರ್ಮಿ ತನ್ನ ಹೆಂಡತಿಯಿಂದ ಲೈಂಗಿಕ ಅನುಕೂಲಕ್ಕಾಗಿ ಒತ್ತಾಯಿಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಶಂಕಿತ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಪ್ರಕರಣವಗಳನ್ನು ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ