ಪ್ರಾಣಾಪಾಯದಿಂದ ಪಾರಾದ ಮಹಿಳೆ| ನಿತ್ಯವೂ ಪತಿ-ಪತ್ನಿ ಮಧ್ಯೆ ನಡೆಯುತ್ತಿದ್ದ ಜಗಳ| ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ| ಈ ಸಂಬಂಧ ಕುರಿತು ಕೊಪ್ಪಳದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು|
ಕೊಪ್ಪಳ(ಏ.12): ನಗರದ ದೇವರಾಜ ಅರಸು ಕಾಲನಿಯಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಹಿಳೆ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರೋಪಿ ಮದ್ಯವ್ಯಸನಿ. ಹೀಗಾಗಿ ಮನೆಯಲ್ಲಿ ನಿತ್ಯವೂ ಜಗಳ ನಡೆಯುತ್ತಿತ್ತು. ಶನಿವಾರ ತಡರಾತ್ರಿ ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಪತಿ ಬುಡ್ಡಪ್ಪ ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ಗಾಯಗೊಂಡಿದ್ದ ಚೆನ್ನಮ್ಮ ಅವರನ್ನು ಪುತ್ರಿ ದೀಪಾ ಸೇರಿ ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ.
ತಂದೆಗೆ ಚಾಡಿ ಹೇಳ್ತಾಳೆ ಅಂತ ಮೂರು ವರ್ಷದ ಮಗಳನ್ನೇ ಕೊಂದ ಕಿರಾತಕ ತಾಯಿ..!
ಮಹಿಳೆಯ ಎದೆ, ಕುತ್ತಿಗೆ ಹಾಗೂ ಕೈ ಸುಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.