ರಾಮನಗರ: ಪ್ರೀತಿ ನಿರಾಕರಣೆ: ಯುವತಿಗೆ ಚಾಕು ಇರಿದು ಆತ್ಮಹತ್ಯೆಗೆ ಯತ್ನ

By Manjunath Nayak  |  First Published Sep 13, 2022, 4:02 PM IST

Ramanagara News: ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿಗೆ ಚಾಕುವಿನಿಂದ ಇರಿದ ಭಗ್ನಪ್ರೇಮಿ ತಾನು ಕುತ್ತಿಗೆ ಕೊಯ್ದುಕೊಂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರದಲ್ಲಿ ನಡೆದಿದೆ


ರಾಮನಗರ (ಸೆ. 13): ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿಗೆ ಚಾಕುವಿನಿಂದ ಇರಿದ ಭಗ್ನಪ್ರೇಮಿ ತಾನು ಕುತ್ತಿಗೆ ಕೊಯ್ದುಕೊಂಡ ಆತ್ಮಹತ್ಯೆಗೆ (Suicide) ಯತ್ನಿಸಿದ ಘಟನೆ ರಾಮನಗರದ ಚನ್ನಪಟ್ಟಣದಲ್ಲಿ ನಡೆದಿದೆ.  ಮೇಘನಾ ಎಂಬಾಕೆ ಚಾಕು ಇರಿತಕ್ಕೊಳಗಾದ ಯುವತಿ.  ಮೊಬೈಲ್ ಶೋರೂಂವೊಂದರಲ್ಲಿ ಕೆಲಸ ಮಾಡುವ ವೇಳೆ, ಚನ್ನಪಟ್ಟಣದ ವರದರಾಜ ಸ್ವಾಮಿ ದೇವಸ್ಥಾನದ ರಸ್ತೆಯ ಯುವತಿ ಮೇಘನಾಗೆ ರಾಮನಗರದ ಯುವಕ ವೆಂಕಟೇಶ್ ಜೊತೆ ಪರಿಚಯ ಆಗಿತ್ತು. ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಈ ಹಿಂದೆ ಹಲವು ಬಾರಿ ಯುವತಿಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದ. 

ಆದರೆ ಜಾತಿ ಬೇರೆಯಾದ ಕಾರಣ ಯುವತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದೀಗ ಯುವಕ ಯುವತಿಯ ಮನೆಗೆ ತೆರಳಿ ಪ್ರೀತಿಯನ್ನು ಒಪ್ಪಿಕೊಳ್ಳಲು ಮನವಿ ಮಾಡಿ ಒಪ್ಪದ ಕಾರಣ ಯುವತಿಯ ಹೊಟ್ಟೆಗೆ ಚಾಕುವಿನಿಂದ ಇರಿದು ತಾನು ಸಹ ಕುತ್ತಿಗೆಗೆ ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಈಗ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಇಬ್ಬರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಡ್ಯದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Tap to resize

Latest Videos

ಚಿಕ್ಕಮಗಳೂರು: ಪ್ರೀತಿಸಿದ ಹುಡುಗಿ ಮದುವೆ ನಿರಾಕರಣೆ: ಪ್ರಿಯಕರ ಆತ್ಮಹತ್ಯೆ

ಚನ್ನಪಟ್ಟಣ: ರೇಷ್ಮೆ ಉದ್ಯಮಿ ಕುತ್ತಿಗೆಗೆ ಚಾಕು ಇರಿತ: ರೇಷ್ಮೆ ಉದ್ಯಮಿಯೊಬ್ಬರ ಮನೆಗೆ ನುಗ್ಗಿರುವ ಮುಸುಕುಧಾರಿಗಳು ಅವರ ಕುತ್ತಿಗೆಗೆ ಚಾಕುವಿನಿಂದ ನಾಲ್ಕೈದು ಭಾರಿ ಇರಿದು ಪರಾರಿಯಾಗಿರುವ ಘಟನೆ ಪಟ್ಟಣದ ಕೋದಂಡರಾಮ ಬಡಾವಣೆಯ 3ನೇ ಕ್ರಾಸ್‌ನಲ್ಲಿ ನಡೆದಿದೆ.

ಪಟ್ಟಣದ ನವ್ಯ ಸಿಲ್ಕ್ ಸ್ಯಾರಿ ಸೆಂಟರ್‌ನ ಮಾಲೀಕ ಹಾಗೂ ರೇಷ್ಮೆ ಉದ್ಯಮಿ ಲಕ್ಷ್ಮೇನಾರಾಯಣ ಚಾಕು ಇರಿತಕ್ಕೆ ಒಳಗಾದವರು. ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಇವರ ಮನೆಗೆ ಸಂಜೆ ವೇಳೆ ಬಂದ ಮುಸುಕುಧಾರಿಗಳು ಚಾಕುವಿನಿಂದ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಲಕ್ಷ್ಮೇನಾರಾಯಣ ಅವರನ್ನು ನೆರೆಹೊರೆಯವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ.

ಕುಟುಂಬದ ಮೇಲೆ 3ನೇ ಯತ್ನ: ಲಕ್ಷ್ಮೇನಾರಾಯಣ ಅವರು ರಾಮನಗರ-ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ದಿ. ಎಲ್‌. ಮಂಚಿಲಿಂಗಯ್ಯ ಅವರ ಅಣ್ಣನ ಮಗ. ಇವರು ಪಟ್ಟಣದಲ್ಲಿ ರೇಷ್ಮೆಸೀರೆ ಮಳಿಗೆ ಇಟ್ಟುಕೊಂಡಿದ್ದರು. ಯಾವುದೇ ಜಗಳಕ್ಕೆ ಹೋಗದ ಸರಳ ವ್ಯಕ್ತಿತ್ವದ ಇವರ ಕುಟುಂಬದವರ ಮೇಲೆ ಮೂರನೇ ಬಾರಿ ಕೊಲೆ ಯತ್ನ ಮಾಡಲಾಗಿದೆ ಎನ್ನಲಾಗಿದೆ.

ಸಂಬಂಧ ಮುಂದುವರಿಸಲು ನಿರಾಕರಣೆ: ಗೋವಾ ಬೀಚ್‌ನಲ್ಲಿ ಚಾಕುವಿನಿಂದ ಇರಿದು ಯುವತಿಯ ಹತ್ಯೆ

ಈ ಹಿಂದೆ ಮಂಡ್ಯದಿಂದ ಬರುವ ವೇಳೆ ಇವರ ಮೇಲೆ ಕೊಲೆ ಯತ್ನ ನಡೆದಿತ್ತು. ಕೆಲ ವರ್ಷಗಳ ಹಿಂದೆ ಮನೆಗೆ ನುಗ್ಗಿದ್ದ ಮುಸುಕುಧಾರಿಗಳು ಇವರ ಪತ್ನಿ ಕೊಲೆಗೆ ಯತ್ನಿಸಿದ್ದರು. ಇದೀಗ 3ನೇ ಬಾರಿಗೆ ಲಕ್ಷ್ಮೇನಾರಾಯಣ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ಮಾಡಲಾಗಿದ್ದ, ಕೊಲೆ ಯತ್ನದ ಕಾರಣ ನಿಗೂಢವಾಗಿದೆ.

click me!