23ರ ಯುವತಿಗೆ ಪ್ರೀತಿಯ ನಾಟಕವಾಡಿ ಆಕೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ ಭೀಕರ ಘಟನೆ ನಡೆದಿದೆ. ಯುವತಿಗೆ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಬಾಯಿಗೆ ಖಾರ ಪುಡಿ ತುರಕಿದ್ದಾನೆ. ಬಳಿಕ ತುಟಿಗಳನ್ನು ಫೆವಿಕ್ವಿಕ್ ಮೂಲಕ ಅಂಟಿಸಿ ಅತ್ಯಾಚಾರ ಎಸಗಿದ್ದಾನೆ.
ಇಂದೋರ್(ಏ.19) ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಪ್ರೀತಿ ನಿರಾಕರಿಸಿದ್ದ ಚಾಕು ಇರಿತ, ಬೇರೆ ಹೆಸರಿನಲ್ಲಿ ಪ್ರೀತಿಸಿ ಮತಾಂತರಕ್ಕೆ ಒತ್ತಾಯ ಸೇರಿದಂತೆ ಹಲವು ಘಟನೆಗಳು ವರದಿಯಾಗುತ್ತಿದೆ. ಇದೀಗ ಪ್ರೀತಿಯ ನಾಟಕವಾಡಿದ ಆರೋಪಿ ಆಯನ್ ಪಠಾಣ್, 23ರ ಯುವತಿಯನ್ನು ಕೊಠಡಿಯಲ್ಲಿ ಕೂಡಿಟ್ಟು ಆಕೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. ಯುವತಿಯ ಬಾಯಿಗೆ ಖಾರ ಪುಡಿ ತುರಿಕಿದ ಆರೋಪಿ, ತುಟಿಗಳಿಗೆ ಫೆವಿಕ್ವಿಕ್ ಗಮ್ ಅಂಟಿಸಿ ಅತ್ಯಾಚಾರ ಎಸಗಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆ ದಾಖಲಿಸಿದ್ದರೆ, ಆರೋಪಿ ಆಯನ್ ಪಠಾಣ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಯುವತಿಯ ಮನೆಯ ಪಕ್ಕದಲ್ಲೇ ಇದ್ದ ಆರೋಪಿ ಆಯನ್ ಪಠಾಣ್ ಪ್ರೀತಿಯ ನಾಟಕವಾಡಿದ್ದಾನೆ. ಮದುವೆಯಾಗುವುದಾಗಿ ನಂಬಿಸಿದ್ದಾನೆ.ಯುವತಿ ಪೋಷಕರು ಈ ಕುರಿತು ಮಗಳಿಗೆ ಎಚ್ಚರಿಕೆ ನೀಡಿದ್ದರು. ಇಷ್ಟೇ ಅಲ್ಲ ಆಯನ್ ಪಠಾಣ್ ಕಾಟ ವಿಪರೀತವಾಗುತ್ತಿದ್ದಂತೆ ಬೇರೆ ಗ್ರಾಮಕ್ಕೆ ತೆರಳಿದ್ದರು. ಆದರೆ ಪಠಾಣ್ ಬಣ್ಣದ ಮಾತಿಗೆ ಮರುಳಾದ ಯುವತಿ ಮತ್ತೆ ಗುನಾಗೆ ಆಗಮಿಸಿದ್ದಳು.
ಕಾರ್ಪೋರೇಟರ್ ಪುತ್ರಿ ಹತ್ಯೆ: ನ್ಯಾಯಾಂಗ ಬಂಧನದಲ್ಲಿರೋ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮುಸ್ಲಿಮರ ಪ್ರತಿಭಟನೆ
ಮಾತುಕತೆಗೆ ಕರೆಸಿಕೊಂಡ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಡುವಂತೆ ಒತ್ತಾಯಿಸಿದ್ದಾನೆ. ತಾನು ಮೋಸಹೋಗಿದ್ದೇನೆ ಎಂಬುದು ಅರಿವಾಗುತ್ತಿದ್ದಂತೆ ಯುವತಿ ವಿರೋಧಿಸಲು ಆರಂಭಿಸಿದ್ದಾಳೆ. ಆದರೆ ಕೊಠಡಿಯಲ್ಲಿ ಕೂಡಿ ಹಾಕದಿ ಆಯನ್ ಪಠಾಣ್, ಆಕೆಯ ಬಾಯಿಗೆ ಖಾರ ಪುಡಿ ಹಾಕಿ ತುಟಿಗಳನ್ನು ಗಮ್ ಹಾಕಿ ಅಂಟಿಸಿ ಅತ್ಯಾಚಾರ ಎಸಗಿದ್ದಾನೆ.
ಸ್ಥಳೀಯರ ನೆರವಿನಿಂದ ಪ್ರಕರಣ ಬೆಳಕಿಗೆ ಬಂದಿದೆ. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಆಯನ್ ಪಠಾಣ್ ಅರೆಸ್ಟ್ ಮಾಡಿದ್ದಾರೆ. ಇದೀಗ ಯುವಿತಿ ಕುಟುಂಬಸ್ಥರ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಇತ್ತ ಆಸ್ಪತ್ರೆ ದಾಖಲಾಗಿರುವ ಯುವತಿಗೆ ಚಿಕಿತ್ಸೆ ಮುಂದುವರಿದಿದೆ.
Gadag: ನಗರಸಭೆ ಮಾಜಿ ಉಪಾಧ್ಯಕ್ಷೆ ಮನೆಯಲ್ಲಿ ಮರ್ಡರ್: ಚಾಕುವಿನಿಂದ ಇರಿದು ಮಲಗಿದ್ದ ನಾಲ್ವರ ಹತ್ಯೆ!
ಆರೋಪಿ ಆಯನ್ ವಿರುದ್ದ ಪೊಲೀಸರು ಸೆಕ್ಷನ್376 ರೇಪ್ ಪ್ರಕರಣ, 294 ಅವಾಚ್ಯ ಶಬ್ದಗಳಿಂದ ಬೈಗುಳ, ಸೆಕ್ಷನ್ 323 ಹಲ್ಲೆ ಸೇರಿದಂತೆ ಕೆಲ ಪ್ರಕರಣಗಳನ್ನು ದಾಖಲಿಸಿದ್ದಾರೆ.