ಕಾರವಾರ ಶಾಸಕ ಅಸ್ನೋಟಿಕರ್‌ ಹತ್ಯೆ ಪ್ರಕರಣ: ಶಾರ್ಪ್‌ ಶೂಟರ್ ಹಂತಕನಿಗೆ ಜೀವಾವಧಿ ಶಿಕ್ಷೆ ಖಾಯಂ

By Suvarna News  |  First Published Apr 19, 2024, 2:29 PM IST

ಕಾರವಾರ ಶಾಸಕರಾಗಿದ್ದ ವಸಂತ್ ಅಸ್ನೋಟಿಕರ್ ಶೂಟೌಟ್ ಪ್ರಕರಣ . ವಿಚಾರಣಾ ಕೋರ್ಟ್‌ ತೀರ್ಪು ಎತ್ತಿ ಹಿಡಿದ ಹೈಕೋರ್ಟ್‌. 2000ನೇ ಇಸವಿಯಲ್ಲಿ ನಡೆದಿತ್ತು ಭೀಕರ ಕೊಲೆ


ಬೆಂಗಳೂರು (ಏ.19): ಕಾರವಾರ ಶಾಸಕರಾಗಿದ್ದ ವಸಂತ್ ಅಸ್ನೋಟಿಕರ್ ಶೂಟೌಟ್ ಪ್ರಕರಣದ ಆರೋಪಿ ಶಾರ್ಪ್‌ ಶೂಟರ್ ರಾಜನ್ ಅಲಿಯಾಸ್ ಸಂಜಯ್ ಕಿಶನ್ ಮೊಹಿತೆಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಪ್ರಕರಣದ ಆರನೇ ಆರೋಪಿಯಾದ ಮುಂಬೈ ಪಶ್ಚಿಮದ ಅಂಧೇರಿಯ ಮೂಲದ ಸಂಜಯ್ ಕಿಶನ್‌ ಮೊಹಿತೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

Tap to resize

Latest Videos

undefined

ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಬೆಂಗಳೂರು ಉದ್ಯಮಿ ಜೊತೆಗೆ 1.5ಕೋಟಿ ಡೀಲ್‌ ಮಾಡಿದ್ದ ಗ್ಯಾಂಗ್ ಅರೆಸ್ಟ್!

ಪ್ರಕರಣದ ಹಲವು ಪ್ರತ್ಯಕ್ಷ ಸಾಕ್ಷಿಗಳು ಮೇಲ್ಮನವಿದಾರರ ಕೃತ್ಯ ಎಸಗಿರುವುದನ್ನು ಗುರುತಿಸಿ ಸಾಕ್ಷ್ಯ ನುಡಿದಿದ್ದಾರೆ. ಸಂಜಯ್‌ ಕೃತ್ಯ ಎಸಗಿರುವುದನ್ನು ಸಾಬೀತುಪಡಿಸುವ ಪೂರಕ ಸಾಕ್ಷ್ಯಗಳಿವೆ. ಅದನ್ನು ನ್ಯಾಯಾಲಯ ನಂಬಬೇಕಿದೆ. ಗುಂಡಿನ ದಾಳಿ ಅಸಾಮಾನ್ಯವಾಗಿತ್ತು. ಕಾರವಾರದಂತಹ ನಗರದಲ್ಲಿ ಈ ರೀತಿಯ ಚಲನಚಿತ್ರಗಳಲ್ಲಿಯೂ ಕಾಣದಂತಹ ಘಟನೆಯಾಗಿ ನಡೆದಿದೆ. ಇದರಿಂದಲೇ ಪ್ರತ್ಯಕ್ಷ ಸಾಕ್ಷಿಗಳ ನೆನಪಿನಲ್ಲಿ ಘಟನೆ ಉಳಿಯುವಂತಾಗಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ತೀರ್ಪು ಸೂಕ್ತವಾಗಿದ್ದು, ಮೇಲ್ಮನವಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ.

ಕಾರ್ಪೋರೇಟರ್‌ ಪುತ್ರಿ ಹತ್ಯೆ: ನ್ಯಾಯಾಂಗ ಬಂಧನದಲ್ಲಿರೋ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮುಸ್ಲಿಮರ ಪ್ರತಿಭಟನೆ

ಪ್ರಕರಣದ ಹಿನ್ನೆಲೆ: ವಸಂತ್ ಅಸ್ನೋಟಿಕರ್ ಅವರು 2000ರ ಫೆ.19ರಂದು ಕಾರವಾರದ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ಮಗಳ ವಿವಾಹದ ಆರತಕ್ಷತೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೇಲ್ಮನವಿದಾರ ಹಾಗೂ ಇತರೆ ಆರೋಪಿಗಳು ಅಸ್ನೋಟಿಕರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾರೂ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದರು.

ಪ್ರಕರಣದ ಮೊದಲ ಆರೋಪಿ ದಿಲೀಪ್ ಅರ್ಜುನ್ ನಾಯ್ಕ್, ಇತರೆ ಆರೋಪಿಗಳಾದ ಆಂಟೋನಿ ಅಲಿಯಾಸ್ ಟೋನಿ ರೊಜಾರಿಯೋ ಮತ್ತು ಓಂ ಪ್ರಕಾಶ್ ಗಿರಿ ಅಲಿಯಾಸ್ ಬಾಬು ಎಂಬುವರು ವಿಚಾರಣೆ ಹಂತದಲ್ಲಿಯೇ ಮೃತಪಟ್ಟಿದ್ದು, ಅವರ ಮೇಲಿನ ಆರೋಪಗಳನ್ನು ಕೈಬಿಡಲಾಗಿತ್ತು. ಕೊಲೆ, ಕೊಲೆ ಯತ್ನ, ಪಿತೂರಿ, ಸಾಕ್ಷ್ಯನಾಶ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಉಲ್ಲಂಘನೆ ಆರೋಪದಲ್ಲಿ ಸಂಜಯ್ ಮೊಹಿತೆಗೆ ಜೀವಾವಧಿ ಶಿಕ್ಷೆ ಮತ್ತು 68 ಸಾವಿರ ರು. ದಂಡ ವಿಧಿಸಿ 2021ರ ಏ.20ರಂದು ಉತ್ತರ ಕನ್ನಡ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸಂಜಯ್‌ ಕಿಶನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

click me!