ಭಾವಿ ಪತಿ ಜೊತೆ ಚೆಂದದ ಪೋಸ್​ ಕೊಟ್ಟು, ಅವನ ಮುಗಿಸಲು ಸುಪಾರಿನೂ ಕೊಟ್ಟಳು!

Published : Apr 24, 2025, 06:07 PM ISTUpdated : Apr 25, 2025, 09:54 AM IST
 ಭಾವಿ ಪತಿ ಜೊತೆ ಚೆಂದದ ಪೋಸ್​ ಕೊಟ್ಟು, ಅವನ ಮುಗಿಸಲು ಸುಪಾರಿನೂ ಕೊಟ್ಟಳು!

ಸಾರಾಂಶ

28 ವರ್ಷದ ಮಯೂರಿ, ನಿಶ್ಚಿತಾರ್ಥವಾದ ಸಾಗರ್‌ನನ್ನು ಕೊ* ಮಾ ಐವರಿಗೆ ಒಂದೂವರೆ ಲಕ್ಷ ರೂಪಾಯಿ ಸುಪಾರಿ ಕೊಟ್ಟಳು. ಮದುವೆ ಇಷ್ಟವಿಲ್ಲದ್ದರಿಂದ ಈ ಕೃತ್ಯ ಎಸಗಿದಳು. ದಾಳಿಯಿಂದ ಸಾಗರ್ ಪಾರಾದ. ಐವರು ಆರೋಪಿಗಳು ಬಂಧಿತರಾಗಿದ್ದು, ಪರಾರಿಯಾಗಿರುವ ಮಯೂರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಿಂದಲೇ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಪ್ರಿಯಕರನ ಜೊತೆಗೂಡಿ ಪತಿಯ ಕೊಲೆ ಮಾಡುವುದು, ಮಕ್ಕಳು ಇದ್ದರೂ ಕೆಲಸದವನೋ ಇನ್ನಾರದ್ದೋ ಜೊತೆ ಓಡಿ ಹೋಗುವುದು, ತನಗಿಂದ ತೀರಾ ಚಿಕ್ಕ ಹುಡುಗನ ಜೊತೆ ಪರಾರಿಯಾಗುವುದು ಇದೇ  ರೀತಿಯ ಘಟನೆಗಳು ಪದೇ ಪದೇ ವರದಿಯಾಗುತ್ತಿರುವ ನಡುವೆಯೇ ಇದೀಗ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಮಹಿಳೆಯೊಬ್ಬಳ ಭಯಾನಕ ಘಟನೆ ಬೆಳಕಿದೆ ಬಂದಿದೆ. ಆ ವ್ಯಕ್ತಿಯನ್ನು ಮದುವೆಯಾಗಲು ಇಷ್ಟವಿಲ್ಲ ಎನ್ನುವ ಕಾರಣಕ್ಕೆ ನಿಶ್ಚಿತಾರ್ಥದ ಬಳಿಕ ಆತನನ್ನು ಮುಗಿಸಲು ಐದು ಮಂದಿಗೆ ಒಂದೂವರೆ ಲಕ್ಷ ರೂಪಾಯಿ ಹಣ ಕೊಟ್ಟಿದ್ದಾಳೆ ಈ ಮಹಿಳೆ! 

ಇದು ಮನೆಯವರು ನೋಡಿ ಮಾಡುತ್ತಿದ್ದ ಮದುವೆ, ಅಂದ್ರೆ ಅರೇಂಜ್ಡ್​ ಮ್ಯಾರೇಜ್​. ಆರಂಭದಲ್ಲಿ ಭಾವಿ ಪತಿಯ ಜೊತೆ ಒಳ್ಳೊಳ್ಳೆ ಫೋಟೋ ಕೂಡ ತೆಗೆಸಿಕೊಂಡಿದ್ದಾಳೆ ಈಕೆ. ಕೊನೆಗೆ ಎಂಗೇಜ್​ಮೆಂಟ್​ ಕೂಡ ಆಗಿದೆ. ಆಮೇಲೆ ಅದೇನಾಯ್ತೋ ಗೊತ್ತಿಲ್ಲ. ಆತನ ಜೊತೆ  ಮದುವೆ ಬೇಡ ಎನ್ನಿಸಿದೆ. ಅದನ್ನು ಮನೆಯಲ್ಲಿ ಹೇಳಿದ್ದಳೋ ಇಲ್ಲವೋ ಗೊತ್ತಿಲ್ಲ. ಅಥವಾ ಆತನಿಗೆ ಈ ವಿಷಯ ತಿಳಿಸಿ ಅದಕ್ಕೆ ಆತ ಒಪ್ಪಲಿಲ್ಲವೋ ಅದೂ ಗೊತ್ತಿಲ್ಲ. ಅವೆಲ್ಲಾ ಇನ್ನಷ್ಟೇ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಆದರೆ ಆತನನ್ನು ಮುಗಿಸುವ ಮಟ್ಟಕ್ಕೆ ಹೋಗಿದ್ದಾಳೆ ಎಂದರೆ ಹೆಣ್ಣೊಬ್ಬಳ ಮನಸ್ಥಿತಿಯ ಬಗ್ಗೆ ಆತಂಕ ಮೂಡಿಸುವಂತಿದೆ. ಐದು ಮಂದಿಗೆ ಸುಪಾರಿ ಕೊಟ್ಟು ಭಾವಿ ಪತಿಯನ್ನು ಮುಗಿಸಲು ಸಂಚು ಹೂಡಿದ್ದಳು. ಆದರೆ  ಆತನ ಅದೃಷ್ಟ ಚೆನ್ನಾಗಿತ್ತು. ಈಕೆ ಅರೆಸ್ಟ್​ ಆಗಿದ್ದಾಳೆ, ಆತ ಬಚಾವ್​ ಆಗಿದ್ದಾನೆ.

ಪತಿಯಂದಿರೇ ಹುಷಾರ್​! ಗಂಡ ಹೆಂಡಿರ ಜಗಳ ನಾಲಿಗೆ ಕಚ್ಚಿ ತುಂಡು ಮಾಡುವ ತನಕ...

ಇನ್ನು ವಿಷಯಕ್ಕೆ ಬರುವುದಾದರೆ, ಈಕೆಯ ಹೆಸರು ಮಯೂರಿ ಸುನಿಲ್ ದಂಗ್ಡೆ. ವಯಸ್ಸು 28. ಈಕೆಯ ನಿಶ್ಚಿತಾರ್ಥ ಕರ್ಜತ್ ತಾಲ್ಲೂಕಿನ ಮಹಿ ಜಲಗಾಂವ್‌ನ ಸಾಗರ್ ಜಯಸಿಂಗ್ ಕದಮ್ ಜೊತೆ ನೆರವೇರಿತ್ತು. ಮೊದಲಿಗೆ ಖುಷಿಯಾಗಿಯೇ ಇದ್ದಳು ಮಯೂರಿ. ಒಳ್ಳೊಳ್ಳೆ ಫೋಟೋಗಳನ್ನೂ  ತೆಗೆಸಿಕೊಂಡಿದ್ದಳು. ಆದರೆ,  ನಿಶ್ಚಿತಾರ್ಥದ ನಂತರ ಮನಸ್ಸು ಬದಲಾಯಿಸಿದಳು. ನಂತರ ಹೋಟೆಲ್‌ನಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿರುವವನ ಜೊತೆಗೂಡಿ  ದುಡ್ಡು ಕೊಟ್ಟಿದ್ದಾಳೆ.  ಐದು ಜನರಿಗೆ "ಸುಪಾರಿ" ನೀಡಿರುವುದು ಪೊಲೀಸ್​ ತನಿಖೆಯಿಂದ ತಿಳಿದು ಬಂದಿದೆ.  

ಫೆಬ್ರವರಿ 27 ರಂದು ಪುಣೆ-ಸೋಲಾಪುರ ಹೆದ್ದಾರಿಯ ದೌಂಡ್ ಬಳಿ ಭಾವಿ ಪತಿಯ ಮೇಲೆ ಐವರು  ದಾಳಿ ನಡೆಸಿದರು. ಆದರೆ ಸ್ವಲ್ಪದಲ್ಲಿಯೇ ಸಾಗರ್ ಜಯಸಿಂಗ್ ಕದಮ್ ಪಾರಾದರು. ಬಳಿಕ ಕೊಲೆ ಯತ್ನದ ಬಗ್ಗೆ ದೂರು ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದರು. ತನಿಖೆ ಕೈಗೊಂಡ ಪೊಲೀಸರು, ದಾಳಿ ನಡೆಸಿದ  ​​ಆದಿತ್ಯ ಶಂಕರ್ ದಂಗ್ಡೆ, ಸಂದೀಪ್ ದಾದಾ ಗಾವ್ಡೆ, ಶಿವಾಜಿ ರಾಮದಾಸ್ ಜರೆ, ಸೂರಜ್ ದಿಗಂಬರ್ ಜಾಧವ್ ಮತ್ತು ಇಂದ್ರಭಾನ್ ಸಖಾರಾಮ್ ಕೋಲ್ಪೆ ಅವರನ್ನು ಬಂಧಿಸಿದರು, ಇವರೆಲ್ಲರೂ ಅಹಲ್ಯಾನಗರ ಜಿಲ್ಲೆಯ ನಿವಾಸಿಗಳು. ಪೊಲೀಸರು ತಮ್ಮದೇ ಆದ ರೀತಿಯಲ್ಲಿ ತನಿಖೆ ಮಾಡಿದಾಗ, ಮಯೂರಿಯ ಸಂಚು ಬಯಸಲಾಗಿದೆ. ಸುಪಾರಿ ನೀಡಿರುವುದು ತಿಳಿದಿದೆ. ಇದು ತಿಳಿಯುತ್ತಲೇ ಆಕೆ  ಪರಾರಿಯಾಗಿದ್ದಾಳೆ ಮತ್ತು ಅವಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

'ಕೊನೆಯ ಅಡುಗೆ ಮಾಡಿದ್ದೇನೆ, ಊಟ ಮಾಡಿ, ಜೀವನ ಸಾಕಾಗಿದೆ' ಎಂದು ಪತಿಗೆ ಹೇಳಿ ಜೀವಕ್ಕೆ ವಿದಾಯ ಹೇಳಿದ ಶಿಕ್ಷಕಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ