ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷ; ಮಹಿಳಾ ಟೆಕ್ಕಿಗೆ ಬರೋಬ್ಬರಿ 18ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು!

By Ravi JanekalFirst Published Feb 5, 2024, 8:08 AM IST
Highlights

ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷವೊಡ್ಡಿ ಸೈಬರ್ ವಂಚಕರು ಮಹಿಳಾ ಇಂಜಿನೀಯರ್‌ಗೆ ಲಕ್ಷ ಲಕ್ಷ ವಂಚನೆ ಮಾಡಿರುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಿಶಾ ಯಾದವ್(36) ವಂಚನೆಗೊಳಗಾದ ಮಹಿಳೆ. ಎಚ್‌ಎಎಲ್ ನಿವಾಸಿಯಾಗಿರುವ ಮಹಿಳೆ. ವಂಚಕರ ಮಾತುಗಳನ್ನು ನಂಬಿ 18 ಲಕ್ಷ ರೂ.ಕಳೆದುಕೊಂಡಿದ್ದಾರೆ

ಬೆಂಗಳೂರು (ಫೆ.5): ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷವೊಡ್ಡಿ ಸೈಬರ್ ವಂಚಕರು ಮಹಿಳಾ ಇಂಜಿನೀಯರ್‌ಗೆ ಲಕ್ಷ ಲಕ್ಷ ವಂಚನೆ ಮಾಡಿರುವ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿಶಾ ಯಾದವ್(36) ವಂಚನೆಗೊಳಗಾದ ಮಹಿಳೆ. ಎಚ್‌ಎಎಲ್ ನಿವಾಸಿಯಾಗಿರುವ ಮಹಿಳೆ. ವಂಚಕರ ಮಾತುಗಳನ್ನು ನಂಬಿ 18 ಲಕ್ಷ ರೂ.ಕಳೆದುಕೊಂಡಿದ್ದಾರೆ. ಸೈಬರ್ ಕಳ್ಳರು ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಬಗ್ಗೆ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ.

ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಜನರನ್ನು ನಂಬಿಸಿ ₹160 ಕೋಟಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ವಂಚನೆ ಮಾಡಿದ್ದು ಹೇಗೆ?

ಮಹಿಳೆ ಮೊಬೈಲ್ ನಂಬರ್ ಕಲೆಕ್ಟ್ ಮಾಡಿಕೊಂಡಿರುವ ಖದೀಮರು. ಮೊದಲಿಗೆ ವರ್ಕ್ ಫ್ರಂ ಹೋಮ್ ಕೆಲಸ ಇದೆ ಎಂದು ಸಂದೇಶ ಕಳಿಸಿದ್ದಾರೆ. ಬಳಿಕ ಟೆಲಿಗ್ರಾಾಂ ಲಿಂಕ್ ಕಳಿಸಿ ಇದರಲ್ಲಿ ಜಾಯಿನ್ ಆಗುವಂತೆ ಮಹಿಳೆಗೆ ತಿಳಿಸಿದ್ದಾರೆ. ವಂಚಕರ ತಿಳಿಸಿದಂತೆ ಜಾಯಿನ್ ಆಗಿದ್ದಾರೆ. ನಂತರ ಅಶ್ವಿನಿ ಎಂಬ ಹೆಸರಿನಲ್ಲಿ ನಿಶಾಗೆ ಒಂದು ಸಂದೇಶ ಬಂದಿದೆ. 17 ಉಚಿತ ಟಾಸ್ಕ್ ಹಾಗೂ 5 ಶುಲ್ಕ ಪಾವತಿಸುವ ಟಾಸ್ಕ್ ಇರುತ್ತದೆ. ಪ್ರತಿ ಟಾಸ್ಕ್ ಗೆ 50 ರೂ.ಶುಲ್ಕ ಇದೆ. ನೀವು ಟಾಸ್ಕ್ ಕಂಫ್ಲೀಟ್ ಮಾಡಲು ಹಣ ಕಳುಹಿಸಬೇಕಾಗುತ್ತದೆ ಎಂದು ನಂಬಿಸಿದ್ದಾರೆ. ಮಹಿಳೆ ವಂಚಕರ ಮಾತು ನಂಬಿ ಅದರಂತೆ ಮೊದಲಿಗೆ 7.82 ಲಕ್ಷ ರೂ. ಕಳಿಸಿರುವ ನಿಶಾ ಬಳಿಕ ಹಂತಹಂತವಾಗಿ 18 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.

ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!

ಹಣ ಪಡೆದ ಬಳಿಕ ಯಾವುದೇ ಕೆಲಸ ನೀಡಿಲ್ಲ ಇತ್ತ ಹಣವೂ ವಾಪಸ್ ಬಂದಿಲ್ಲ. ತಾವು ಸೈಬರ್ ವಂಚಕರಿಂದ ಮೋಸಹೋಗಿದ್ದೇನೆ ಎಂದು ತಿಳಿಯುತ್ತಿದ್ದಂತೆ ಶಾಕ್ ಆಗಿರುವ ಮಹಿಳೆ. ಸದ್ಯ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

click me!