ಪ್ರೀತಿ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನಿಂದ ವಂಚನೆ

Published : Apr 16, 2024, 06:42 AM IST
ಪ್ರೀತಿ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ಪ್ರಿಯಕರನಿಂದ ವಂಚನೆ

ಸಾರಾಂಶ

 ಮದುವೆ ಆಗುವುದಾಗಿ ನಂಬಿಸಿ ಸಹಜೀವನ ನಡೆಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ವಿರುದ್ಧ ಮಹಿಳಾ ಟೆಕಿ ಬಂಡೇಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು (ಏ.16) :  ಮದುವೆ ಆಗುವುದಾಗಿ ನಂಬಿಸಿ ಸಹಜೀವನ ನಡೆಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ವಿರುದ್ಧ ಮಹಿಳಾ ಟೆಕಿ ಬಂಡೇಪಾಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಬೊಮ್ಮನಹಳ್ಳಿಯ ಹೊಸಪಾಳ್ಯ ನಿವಾಸಿ 27 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಉತ್ತರ ಪ್ರದೇಶ ಮೂಲದ ಆದಿತ್ಯನಾಥ್ ಸಿಂಗ್ (26) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಶ್ಲೀಲ ವಿಡಿಯೋ ರೀತಿ ಸೆಕ್ಸ್‌ ಬೇಕೆಂದು ಪತಿ ಕಿರುಕುಳ; ಕಾಲ್‌ ಗರ್ಲ್ ಮನೆಗೆ ಕರೆಸಿ ಪತ್ನಿ ಮುಂದೆಯೇ ಏನು ಮಾಡ್ತಿದ್ದ ನೋಡಿ!

ಪ್ರಕರಣದ ವಿವರ:

ಉತ್ತರ ಭಾರತ ಮೂಲದ ಸಂತ್ರಸ್ತೆ ಕೆಲ ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಆರೋಪಿ ಆದಿತ್ಯ ಸಿಂಗ್‌ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. 

ಈ ನಡುವೆ 2022ರ ಜುಲೈನಲ್ಲಿ ಜಿಮ್‌ವೊಂದರಲ್ಲಿ ಸಂತ್ರಸ್ತೆ ಮತ್ತು ಆದಿತ್ಯ ಸಿಂಗ್‌ ಪರಸ್ಪರ ಪರಿಚಿತರಾಗಿ ಬಳಿಕ ಸ್ನೇಹ ಬೆಳೆದು ಪ್ರೀತಿಸಲು ಆರಂಭಿಸಿದ್ದಾರೆ. ಈ ವೇಳೆ ಆರೋಪಿಯು ಮದುವೆ ಆಗುವುದಾಗಿ ನಂಬಿಸಿದ್ದಾನೆ. 2022ರ ನವೆಂಬರ್‌ನಿಂದ ಇಬ್ಬರೂ ಒಂದೇ ಮನೆಯಲ್ಲಿ ಸಹಜೀವನ ನಡೆಸಲು ಪ್ರಾರಂಭಿಸಿದ್ದಾರೆ. ನಂತರ ಆರೋಪಿಯು ಸಂತ್ರಸ್ತೆ ಜತೆಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. 2023ರ ಜುಲೈ ಬಳಿಕ ಆರೋಪಿಯು ವಿನಾಕಾರಣ ಸಂತ್ರಸ್ತೆಯಿಂದ ಅಂತರ ಕಾಯ್ದುಕೊಂಡಿದ್ದಾನೆ. ಸಂತ್ರಸ್ತೆ ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಸಿಕ್ಕಿಲ್ಲ.

2023ರ ಆಗಸ್ಟ್‌ನಲ್ಲಿ ಸಂತ್ರಸ್ತೆಗೆ ಸಿಕ್ಕಿದ ಆರೋಪಿ ಆದಿತ್ಯ ಸಿಂಗ್‌, ಕ್ಷುಲ್ಲಕ ಕಾರಣಗಳಿಗೆ ಸಂತ್ರಸ್ತೆ ಜತೆಗೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ದೈಹಿಕ ಹಲ್ಲೆ ಮಾಡಿದ್ದಾನೆ. ಕೆಲ ತಿಂಗಳ ಬಳಿಕ ಮತ್ತೆ ಸಂತ್ರಸ್ತೆಯನ್ನು ಸಂಪರ್ಕಿಸಿರುವ ಆರೋಪಿಯು ಹಿಂದಿನ ಘಟನೆಗಳನ್ನು ಮರೆಯುವಂತೆ ಹೇಳಿದ್ದಾನೆ. ಮದುವೆ ಆಗುವುದಾಗಿ ಮತ್ತೆ ನಂಬಿಸಿ ಸಂತ್ರಸ್ತೆ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇತ್ತೀಚೆಗೆ ಸಂತ್ರಸ್ತೆ ಮದುವೆ ಆಗುವಂತೆ ಒತ್ತಾಯಿಸಿದಾಗ ಮತ್ತೆ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾನೆ. ಇದನ್ನು ಪ್ರಶ್ನಿಸಿದ ಸಂತ್ರಸ್ತೆಯ ಮೇಲೆ ಹಲ್ಲೆಗೈದು ಚಾಕುವಿನಿಂದ ಕೊಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಿದ್ಯಾರ್ಥಿ ಜೊತೆ ಶಿಕ್ಷಕಿಯ ಸೆಕ್ಸ್, ಪೊಲೀಸ್ ರೇಡ್ ವೇಳೆ ಅಂಡರ್‌ವೇರ್‌ನಲ್ಲೇ ಒಡಿದ ಅಪ್ರಾಪ್ತ, ಟೀಚರ್ ಅರೆಸ್ಟ್!

ಸಂತ್ರಸ್ತೆಗೆ ಈ ಹಿಂದೆ ಬೇರೆ ವ್ಯಕ್ತಿಯ ಜತೆಗೆ ಮದುವೆಯಾಗಿದ್ದು, ಪತಿಯಿಂದ ದೂರವಾಗಿದ್ದಾರೆ. ಈ ವಿಚಾರ ಪ್ರಿಯಕರ ಆದಿತ್ಯ ಸಿಂಗ್‌ಗೆ ಗೊತ್ತಾಗಿ ಸಂತ್ರಸ್ತೆಯಿಂದ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!