ಗೃಹಿಣಿ ಮೇಲೆ ವ್ಯಾಮೋಹ: ನೋ ಎಂದಿದ್ದಕ್ಕೆ ಆಕೆಯ ಗಂಡನಿಗೆ ಮೂಹೂರ್ತವಿಟ್ಟ 21ರ ಯುವಕ

Published : Jul 24, 2025, 12:27 PM ISTUpdated : Jul 24, 2025, 12:32 PM IST
The dead body of the girl found in the drain

ಸಾರಾಂಶ

ಮುಂಬೈನಲ್ಲಿ 21 ವರ್ಷದ ಯುವಕನೊಬ್ಬ ತನ್ನ ಪ್ರೇಮ ನಿರಾಕರಣೆಗೆ ಪ್ರತೀಕಾರವಾಗಿ ಮಹಿಳೆಯ ಗಂಡನನ್ನು ಕೊಲೆಗೈದಿದ್ದಾನೆ. 

ಮುಂಬೈ: ವಿವಾಹಿತೆಯನ್ನು ಪ್ರೀತಿಸುತ್ತಿದ್ದ 21ರ ಹರೆಯದ ಯುವಕನೋರ್ವ ಆಕೆಯ 35 ವರ್ಷದ ಗಂಡನ ಪರಲೋಕಕ್ಕೆ ಕಳುಹಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ. ನವಿ ಮುಂಬೈನ ಯುವಕನೋರ್ವ 25ರ ಹರೆಯದ ವಿವಾಹಿತ ಮಹಿಳೆಯ ಹಿಂದೆ ಬಿದ್ದು, ವಿವಾಹವಾಗುವಂತೆ ಪೀಡಿಸಲು ಶುರು ಮಾಡಿದ್ದ. ಆದರೆ ಆಕೆ ಈ 21ರ ತರುಣನ ಪ್ರೇಮಕ್ಕೆ ಒಲ್ಲೆ ಎಂದಿದ್ದು, ಇದರಿಂದ ಕುಪಿತಗೊಂಡ ಆತ ತಾನು ಪ್ರೀತಿಸುತ್ತಿದ್ದ ಮಹಿಳೆಯ ಗಂಡನನ್ನೇ ಹತ್ಯೆ ಮಾಡಿದ್ದಾನೆ.

ಪ್ರೇಮಕ್ಕೆ ಒಲ್ಲೆ ಎಂದ ಮಹಿಳೆಯ ಗಂಡನಿಗೆ ಮುಹೂರ್ತ:

25ರ ಹರೆಯದ ಫಾತಿಮಾ ಮಂಡಲ್ ಹಾಗೂ ಆಕೆಯ ಪತಿ ಆಕೆಗಿಂತ 10 ವರ್ಷ ಹಿರಿಯವನಾದ ಅಬುಬಕ್ಕರ್ ಸುಹದ್ಲಿ ಮಂಡಲ್ ನವಿ ಮುಂಬೈನ ವಾಶಿಯಲ್ಲಿ ವಾಸ ಮಾಡುತ್ತಿದ್ದರು. ಆರೋಪಿ 21ರ ಪ್ರಾಯದ ಅಮಿನುಲ್ ಅಲಿ ಅಹ್ಮದ್, ಫಾತಿಮಾಳನ್ನು ಪ್ರೀತಿಸುತ್ತಿದ್ದು, ಆಕೆಗೆ ದಿನವೂ ತನ್ನನ್ನು ಮದುವೆಯಾಗುವಂತೆ ಅಮಿನುರ್ ಅಹ್ಮದ್ ಪೀಡಿಸುತ್ತಿದ್ದ. ಆದರೆ ಮದುವೆಯಾಗುವುದಕ್ಕೆ ಫಾತಿಮಾ ನಿರಾಕರಿಸಿದ್ದಾಳೆ.

ನಾಪತ್ತೆ ದೂರು ದಾಖಲಿಸಿದ ಪತ್ನಿ:

ಪರಿಣಾಮ ಸೋಮವಾರ ಕೆಲಸಕ್ಕೆ ಹೋದ ಫಾತಿಮಾ ಪತಿ ಅಬುಬಕ್ಕರ್ ವಾಪಸ್ ಮನೆಗೆ ಬಂದಿಲ್ಲ, ಈ ಹಿನ್ನೆಲೆಯಲ್ಲಿ ಫಾತಿಮಾ ಗಂಡ ಕಾಣೆಯಾದ ಬಗ್ಗೆ ನಾಪತ್ತೆ ದೂರು ದಾಖಲಿಸಿದ್ದಳು. ಅಲ್ಲದೇ ಅಮಿನುಲ್ ಅಲಿ ಅಹ್ಮದ್ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂಬುದನ್ನು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಅನುಮಾನದ ಮೇರೆಗೆ ಅಮಿನುಲ್‌ನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತನೇ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಆರೋಪಿ ಅಬುಬಕ್ಕರ್ ಅವರನ್ನು ಕೊಲೆ ಮಾಡಿ ಶವವನ್ನು ಚೀಲಕ್ಕೆ ತುಂಬಿ ವಾಶಿಯಲ್ಲಿ ಮೋರಿಗೆ ಎಸೆದಿದ್ದ. ಅಲ್ಲದೇ ಸಾಕ್ಷ್ಮಿ ನಾಶ ಮಾಡುವುದಕ್ಕಾಗಿ ಆರೋಪಿ ಅಮೀನುಲ್ ಕೊಲೆ ಮಾಡುವ ವೇಳೆ ತಾನು ಧರಿಸಿದ್ದ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಪನ್ವೆಲ್-ಸಿಯಾನ್ ರಸ್ತೆಯ ವಾಶಿ ಗ್ರಾಮದ ಅಂಡರ್‌ಪಾಸ್ ಬಳಿಯ ಚರಂಡಿಗೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯ ನಂತರ ಬುಧವಾರ ಬೆಳಗ್ಗೆ ವಾಶಿಯ ಹೊಳೆಯಲ್ಲಿ ಅಬೂಬಕರ್ ಅವರ ಮೃತದೇಹ ಪತ್ತೆಯಾಗಿದ್ದು, ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಅಮೀನುಲ್‌ನನ್ನು ಬಂಧಿಸಿ ಕೊಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಈ ಕೊಲೆ ಮಾಡಲು ಅವನಿಗೆ ಸಹಾಯ ಮಾಡಿದನೆಂದು ನಂಬಲಾದ ಆತನ ಸ್ನೇಹಿತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!