ಮೂಲಗಳ ಪ್ರಕಾರ, ಪೊಲೀಸ್ ಅಧಿಕಾರಿ ಮೋದಿ ಸಿಂಗ್ ಅವರು ವಾಹನ ತಪಾಸಣೆ ನಡೆಸುತ್ತಿದ್ದಾಗ ಲೈನ್‌ಮ್ಯಾನ್ ಭಗವಾನ್ ಸ್ವರೂಪ್ ಅವರ ಬೈಕನ್ನು ನಿಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದ್ದರು.
ಬರೇಲಿ (ಜೂ. 13): ಲೈನ್‌ಮ್ಯಾನ್‌ವೊಬ್ಬರಿಗೆ ದಂಡ ವಿಧಿಸಿದ ಕಾರಣಕ್ಕೆ ಪೊಲೀಸ್ ಠಾಣೆಯ ವಿದ್ಯುತನ್ನೇ ಕಡಿತಗೊಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿರುವ ಹರ್ದಾಸ್‌ಪುರ ಪೊಲೀಸ್ ಠಾಣೆಯ ವಿದ್ಯುತ್ತನ್ನು ಲೈನ್‌ಮ್ಯಾನ್ ಸ್ಥಗಿತಗೊಳಿಸಿದ್ದಾರೆ. ಶನಿವಾರ ರಾತ್ರಿಯೇ ಪೊಲೀಸ್ ಠಾಣೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಘಟನೆಯ ಬಗ್ಗೆ ವಿದ್ಯುತ್ ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದಾರೆ ಎಂದು ಟೈಮ್ಸ್‌ನೌ ವರದಿ ಮಾಡಿದೆ. ಮೂಲಗಳ ಪ್ರಕಾರ, ಪೊಲೀಸ್ ಅಧಿಕಾರಿ ಮೋದಿ ಸಿಂಗ್ ಅವರು ವಾಹನ ತಪಾಸಣೆ ನಡೆಸುತ್ತಿದ್ದಾಗ ಲೈನ್‌ಮ್ಯಾನ್ ಭಗವಾನ್ ಸ್ವರೂಪ್ ಅವರ ಬೈಕ್ ನಿಲ್ಲಿಸಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಪೊಲೀಸರ ಮೇಲೆ ಎರಗಿ ಬಿದ್ದ ಯುವತಿಯರು: ಪ್ರಪೋಸ್ ಮಾಡುವಾಗ ರಿಂಗ್ ಕಸಿದು ಓಡಿದ ಯುವಕ
ಸ್ವರೂಪ್ ತನ್ನ ಬಳಿ ಕಾಗದಪತ್ರಗಳಿಲ್ಲ ಮತ್ತು ಮನೆಗೆ ಹೋಗಿ ಅವುಗಳನ್ನು ತರುತ್ತನೆ ಎಂದು ಹೇಳಿದ್ದಾರೆ. ಆದರೆ ಇದಕ್ಕೊಪ್ಪದ ಇನ್ಸ್‌ಪೆಕ್ಟರ್ ರೂ 500 ದಂಡ ವಿಧಿಸಿದ್ದಾರೆ. ಈ ಘಟನೆಯಿಂದ ಸ್ವರೂಪ್ ಕೋಪಗೊಂಡಿದ್ದು, ಇಂಧನ ಇಲಾಖೆಯ ತನ್ನ ಸಹೋದ್ಯೋಗಿಗಳನ್ನು ಸಂಪರ್ಕಿಸಿ ಪೊಲೀಸ್ ಠಾಣೆಯ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದಾರೆ. ಪೊಲೀಸ್ ಠಾಣೆಯ ವಿದ್ಯುತ್ ಪೂರೈಕೆಯಲ್ಲಿ ಮೀಟರ್ ಇರಲಿಲ್ಲ, ಹೀಗಾಗಿ ಇದು ಕಾನೂನುಬಾಹಿರವಾಗಿದೆ ಎಂದು ಸ್ವರೂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.