ಹೆಲ್ಮೆಟ್ ಹಾಕದ್ದಕ್ಕೆ ವಕೀಲನ ಮೇಲೆ ಪೊಲೀಸರು ಮನಸೋ ಇಚ್ಛೆ ಥಳಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ವಕೀಲ ಪ್ರೀತಮ್, ಹೆಲ್ಮೆಟ್ ಹಾಕದ್ದಕ್ಕೆ ಪೊಲೀಸರಿಂದ ಹಲ್ಲೆಗೊಳಗಾದ ವ್ಯಕ್ತಿ. ಚಿಕ್ಕಮಗಳೂರು ನಗರ ಠಾಣೆಯ ಪೋಲಿಸರಾದ ಶಶಿಕುಮಾರ್, ಗುರುಪ್ರಸಾದ್ ಹಲ್ಲೆ ನಡೆಸಿದ ಸಿಬ್ಬಂದಿ
ಚಿಕ್ಕಮಗಳೂರು (ನ.1) ಹೆಲ್ಮೆಟ್ ಹಾಕದ್ದಕ್ಕೆ ವಕೀಲನ ಮೇಲೆ ಪೊಲೀಸರು ಮನಸೋ ಇಚ್ಛೆ ಥಳಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ವಕೀಲ ಪ್ರೀತಮ್, ಹೆಲ್ಮೆಟ್ ಹಾಕದ್ದಕ್ಕೆ ಪೊಲೀಸರಿಂದ ಹಲ್ಲೆಗೊಳಗಾದ ವ್ಯಕ್ತಿ. ಚಿಕ್ಕಮಗಳೂರು ನಗರ ಠಾಣೆಯ ಪೋಲಿಸರಾದ ಶಶಿಕುಮಾರ್, ಗುರುಪ್ರಸಾದ್ ಹಲ್ಲೆ ನಡೆಸಿದವರು.
ಹೆಲ್ಮೆಟ್ ಹಾಕದೇ ಬೈಕ್ ರೈಡ್ ಮಾಡುತ್ತಿದ್ದಾಗ ಹಿಡಿದಿದ್ದ ಪೊಲೀಸರು. ಈ ವೇಳೆ ಫೈನ್ ಕಟ್ಟುವುದಾಗಿ ಹೇಳಿದ್ರೂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಪೊಲೀಸರು. ಫೈನ್ ಕಟ್ಟುತ್ತೇನೆಂದ್ರೂ ಬೈಕ್ ಕೀ ಕಿತ್ತುಕೊಂಡು ಠಾಣೆಗೆ ಕರೆದೊಯ್ದಿದ್ದ ಪೊಲೀಸರು. ಬೈಕ್ ಕೀ ಕಿತ್ತುಕೊಂಡ ಬಗ್ಗೆ ಪ್ರಶ್ನಿಸಿದ್ದ ವಕೀಲ ಪ್ರೀತಮ್. ಪ್ರಶ್ನಿಸಿದ್ದಕ್ಕೆ ವಕೀಲ ಪ್ರೀತಮ್ ಬೆನ್ನು, ಎದೆ, ಕೈಯಲ್ಲಿ ರಕ್ತ ಬರುವಂತೆ ಅಮಾನುಷವಾಗಿ ಥಳಿಸಿರುವ ಪೊಲೀಸರು. ತೀವ್ರ ಗಾಯಗೊಂಡ ಹಿನ್ನೆಲೆ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಪ್ರೀತಮ್ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
undefined
ಚಿಕ್ಕಮಗಳೂರು: ಸಿಬ್ಬಂದಿಯಿಂದಲೇ ಬ್ಯಾಂಕ್‌ಗೆ ದೋಖಾ, ಚಿನ್ನ, ಎಫ್‌ಡಿ ಇಟ್ಟ ಗ್ರಾಹಕರಿಗೆ ಶಾಕ್..!
ಆರೋಪಿಗಳ ಬಂಧನಕ್ಕೆ ವಕೀಲರ ಸಂಘ ಆಗ್ರಹ:
ಪ್ರೀತಮ್ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ಸರ್ಕಾರಿ ಆಸ್ಪತ್ರೆ ಬಳಿ ಜಮಾಯಿಸಿದ ವಕೀಲರು. ವಕೀಲರ ಮೇಲೆ ಹಲ್ಲೆಗೈದವರ ಬಂಧನಕ್ಕೆ ಆಗ್ರಹಿಸಿದ್ದಾರೆ. ಶಶಿಕುಮಾರ್, ಗುರುಪ್ರಸಾದ್ ಎಂಬ ಪೊಲೀಸರು ಮತ್ತು ಇತರೆ ಸಿಬ್ಬಂದಿ ಮೇಲೆ ಐಪಿಸಿ ಸೆಕ್ಷನ್ 307 ಪ್ರಕರಣ ದಾಖಲು ಮಾಡಿದ ವಕೀಲರು. ಇಬ್ಬರು ಪೊಲೀಸರು ಠಾಣೆಯಲ್ಲೇ ಇದ್ದರೂ ಬಂಧಿಸದಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಕೀಲರ ಸಂಘ. ಪೊಲೀಸರನ್ನು ಮೊದಲು ಬಂಧಿಸಿ ಬಂಧನ ಮಾಡದೆ ತನಿಖೆ ಮಾಡ್ತೀವಿ ಎಂದ ಪೊಲೀಸ್ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಕೀಲರು. ಆರೋಪಿಗಳನ್ನು ಬಂಧಿಸೋವರೆಗೆ ಹೋರಾಟ ಮಾಡೋದಾಗಿ ವಕೀಲರ ಸಂಘ ಎಚ್ಚರಿಕೆ ನೀಡಿದೆ. 6 ಜನರ ಬಂಧನವಾಗೋವರೆಗೂ ಹೋರಾಟ ಮುಂದುವರಿಸೋದಾಗಿ ವಕೀಲರ ಸಂಘ ತೀರ್ಮಾನಿಸಿದೆ. ಪಿ ಎಸ್ ಐ ಮಹೇಶ್ ಪೂಜಾರಿ, ರಾಮಪ್ಪ, ಗುರುಪ್ರಸಾದ್ ,ಯುವರಾಜ್, ಶಶಿ, ಮಹೇಶ್ ಬಂಧಿಸುವಂತೆ ಹೋರಾಟದ ನಡೆಸುವ ಎಚ್ಚರಿಕೆ ನೀಡಿದ ವಕೀಲರು.
ಚಿಕ್ಕಮಗಳೂರು: ಅಡಿಕೆ ಬೆಳೆಗಾರರ ಗಾಯದ ಮೇಲೆ ಬರೆ ಎಳೆಯಲು ಮುಂದಾದ ಸರ್ಕಾರ..!
ಅರು ಮಂದಿ ಪೊಲೀಸರ ಅಮಾನತ್ತು:
ಘಟನೆಯಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿದ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯ ಪಿಎಸ್ಐ , ಎಎಸ್ಐ, ಹೆಡ್ ಕಾನ್ಸಟೇಬಲ್ ಸೇರಿದಂತೆ ಮೂವರು ಪೇದೆಗಳು ಅಮಾನತು ಮಾಡಿದ್ದಾರೆ.