ಜಮೀನು ವಿವಾದಕ್ಕೆ 84 ತೆಂಗಿನ ಸಸಿಗಳ ಮಾರಣಹೋಮ ಮಾಡಿರುವ ಘಟನೆ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಅಣೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ತುಮಕೂರು (ಜ.22) : ಜಮೀನು ವಿವಾದಕ್ಕೆ 84 ತೆಂಗಿನ ಸಸಿಗಳ ಮಾರಣಹೋಮ ಮಾಡಿರುವ ಘಟನೆ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಅಣೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಎರೆಹಳ್ಖಿ ಸರ್ವೆನಂಬರ್ 21ರ ಸಾಗುವಳಿ ಜಮೀನಿನಲ್ಲಿ ಬೆಳೆದಿದ್ದ 84 ತೆಂಗಿನ ಸಸಿಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಅಣೆಕಟ್ಟೆ ಗ್ರಾಮದ ವೃದ್ಧೆ ಶಿವಮ್ಮ ಅವರಿಗೆ ಸೇರಿದ ಜಮೀನಿನ ನಡೆದಿರುವ ಘಟನೆ ಈ ವಿವಾದ ಸದ್ಯ ಕೋರ್ಟ್ ಮೆಟ್ಟಿಲೇರಿತ್ತು. ಇದೇ ದ್ವೇಷಕ್ಕೆ ವೃದ್ಧೆ ಶಿವಮ್ಮಳ ಜಮೀನನಲ್ಲಿದ್ದ ತೆಂಗಿನಸಸಿಗಳನ್ನ ನಾಶ ಮಾಡಿದ್ದಾರೆ. ಘಟನೆ ಸಂಬಂಧ ವಿಶ್ವನಾಥ ಮತ್ತು ಕುಮಾರ್ ಎನ್.ಎಸ್ ಎಂಬುವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಕಂಡವರ ಜಮೀನಿಗೆ ಹೋದ್ರೆ ಹೀಗೆ ಮಾಡ್ತಿವಿ ಮುಂದೆಯೂ ಹೀಗೆ ಮಾಡ್ತಿವಿ ಎಂದು ಫೇಸ್‌ಬುಕ್ ಬರೆದುಕೊಂಡಿರುವ ಆರೋಪಿ ಕುಮಾರ. ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ.
ತುಮಕೂರು: ರಾಜಕೀಯ ದ್ವೇಷ, ಕೆರೆಗೆ ವಿಷ ಹಾಕಿ ಲಕ್ಷಾಂತರ ಮೀನುಗಳ ಮಾರಣಹೋಮ
ಮನೆಯಲ್ಲಿ ವಿದ್ಯುತ್ ಅವಘಡ: ಮಕ್ಕಳು ಪಾರು :
ಕೋಲಾರ: ನಗರದ ಎಎಸ್‌ಐ ಒಬ್ಬರ ಮನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಇಲ್ಲಿನ ಗಾಂಧಿನಗರದ ಎಎಸ್‌ಐ ಬಿ.ರವಿಕುಮಾರ್ ಮನೆಯನ್ನು ಬಾಡಿಗೆಗೆ ನೀಡಿದ್ದರು. ಪೊಷಕರು ಮಕ್ಕಳು ಮಾತ್ರ ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆಯ ದ್ವಾರ ಬಾಗಿಲ ಬಳಿಯೇ ಇರುವ ಎಂಸಿಬಿ ಬಾಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಉರಿಯಲು ಆರಂಭಿಸಿದೆ. ಬೆಂಕಿ ಅಂಟಿದ ಕ್ಷಣ ಮಾತ್ರದಲ್ಲೇ ಬೆಂಕಿ ಪಕ್ಕದ ಬಾಗಿಲು ಕಿಟಕಿಗೆ ತಾಕಿ ಧಗಧಗ ಉರಿಯಲು ಪ್ರಾರಂಬಿಸಿದೆ.
ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಬಳಿಕ ಕೊಠಡಿಯಲ್ಲಿ ಮಲಗಿದ್ದ ಮಕ್ಕಳನ್ನು ಕಿಟಕಿ ಗಾಜು ಒಡೆದು ರಕ್ಷಿಸಿದ್ದಾರೆ. ಬಳಿಕ ಮನೆ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಅವಗಡದಿಂದ ಸುಮಾರು ಒಂದೊವರೆ ಲಕ್ಷ Ãರು.ಗಳ ಮೌಲ್ಯದ ವಸ್ತುಗಳು ನಷ್ಟವಾಗಿದೆ.