
ಆನೇಕಲ್ (ಏ.23) : ಕುಡಿದ ನಶೆಯಲ್ಲಿ ಆಸಾಮಿಯೊಬ್ಬ ಸ್ನೇಹಿತನಿಗೇ ಬೆಂಕಿಯಿಟ್ಟ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ಪಟ್ಟಣದ ಸಂಜಯ್ ಬಾರ್‌ನಲ್ಲಿ ನಡೆದಿದೆ.
ಮುತ್ತಗಟ್ಟಿ ಗ್ರಾಮದ ನಿವಾಸಿ ನಾಗೇಶ್ ದಾಳಿಗೊಳಗಾದ ವ್ಯಕ್ತಿ, ವೆಂಕಟಸ್ವಾಮಿ ಎಂಬುವವನೇ ಎಣ್ಣೆ ಏಟಿನಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ ಕಿರಾತಕ. ಮದ್ಯ ಸೇವಿಸಲು ಸಂಜಯ್ ಬಾರ್‌ಗೆ ಹೋಗಿದ್ದ ಮೂವರು ಸ್ನೇಹಿತರು. ಮದ್ಯ ಸೇವಿಸುತ್ತಿರುವಾಗಲೇ ನಾಗೇಶ್ ಮತ್ತು ವೆಂಕಟಸ್ವಾಮಿ ನಡುವೆ ಕಿರಿಕ್ ಆಗಿದೆ. ಅಷ್ಟಕ್ಕೇ ಕುಡಿಯುತ್ತಿದ್ದ ಮದ್ಯವನ್ನು ನಾಗೇಶ್ ಮೇಲೆ ಎರಚಿದ ವೆಂಕಟಸ್ವಾಮಿ ಕೂಡಲೇ ಬೆಂಕಿ ಹಚ್ಚಿರುವ ಕಿರಾತಕ.
ಮೈಮೇಲೆ ಮದ್ಯ ಎರಚಿದ್ದರಿಂದ ಬೆಂಕಿಹೊತ್ತಿಕೊಂಡು ದೇಹದ ಚರ್ಮ ಸುಟ್ಟಿದೆ ಕೂಡಲೇ ಗಾಯಾಳುವನ್ನ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆಂಕಿಯಿಂದ ಶೇ.30ರಷ್ಟು ದೇಹದ ಭಾಗ ಸುಟ್ಟುಹೋಗಿದೆ. ಹೆಚ್ಚಿನ ಚಿಕಿತ್ಸೆಗೆ ನಗರದ ವಿಕ್ಟೋರಿಯಾ ಆಸ್ಪತ್ರೆ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಕುಡಿದ ಮತ್ತಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ, ಓರ್ವ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ