
ಕೊಡಗು (ನ.06): ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್‌ಗೆ ಹೋದ ಯುವಕ ಸಾವನಪ್ಪಿರುವ ಘಟನೆ ಕೊಡಗಿನ ಸುಂಟಿಕೊಪ್ಪದಲ್ಲಿ ನಡೆದಿದೆ. ವಿನೋದ್ (34) ಮೃತ ಯುವಕ. ಇಂದು ಸಂಜೆ ಐದು ಗಂಟೆಗೆ ವಿನೋದ್ ಸುಂಟಿಕೊಪ್ಪದಲ್ಲಿರುವ ಉಮಾ ಕ್ಲಿನಿಕ್‌ಗೆ ಸೊಂಟ ನೋವೆಂದು ಹೋಗಿದ್ದರು. ಈ ವೇಳೆ ಯುವಕನಿಗೆ ಎರಡು ಇಂಜೆಕ್ಷನ್ ಅನ್ನು ವೈದ್ಯರು ಕೊಟ್ಟಿದ್ದರು. ನಂತರ ಮನೆಗೆ ಹೋಗುತ್ತಿದ್ದಂತೆ ವಿನೋದ್ ಅಸ್ವಸ್ಥಗೊಂಡಿದ್ದರು.
ತಕ್ಷಣವೇ ಮನೆಯವರು ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ ಅಸ್ಪತ್ರೆಗೆ ಬರುವಷ್ಟರಲ್ಲಿ ಯುವಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಕೊಡಗು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಯುವಕನ ಮೃತದೇಹವನ್ನು ಇರಿಸಲಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಆಗಮಿಸಿದ್ದು, ವೈದ್ಯನ ವಿರುದ್ಧ ಸಂಬಂಧಿಕರ ಆಕ್ರೋಶ ವ್ಯಕ್ತವಾಗಿದೆ. ಇನ್ನು ವೈದ್ಯನ ನಿರ್ಲಕ್ಷ್ಯತನದಿಂದ ಚಿಕಿತ್ಸೆಯಲ್ಲಿ ವ್ಯತ್ಯಾಸವಾಗಿ ಯುವಕ ಮೃತಪಟ್ಟಿರುವ ಆರೋಪ ಕೇಳಿಬಂದಿದೆ.
ಹಳಿಯಾಳ ಪಟ್ಟಣದಲ್ಲಿರುವ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವೇ ಬ್ರಿಡ್ಜ್ ಹತ್ತಿರದ ಸಿಮೆಂಟ್ ರಸ್ತೆಯಲ್ಲಿ ನಡೆದ ಆಕಸ್ಮಿಕ ದುರ್ಘಟನೆಯೊಂದರಲ್ಲಿ ಲಾರಿ ಚಾಲಕನೊರ್ವ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಮೃತ ಲಾರಿ ಚಾಲಕ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಮಲ್ಲಿಕಾರ್ಜುನ ಪರಪ್ಪ ಮೆಣಸಿನಕಾಯಿ(26) ಎನ್ನಲಾಗಿದೆ. ಮೃತರು ಹೆಂಡತಿ ಹಾಗೂ ಚಿಕ್ಕ ಅವಳಿ ಮಕ್ಕಳನ್ನು ಅಗಲಿದ್ದಾರೆ. ಮಲ್ಲಿಕಾರ್ಜುನ ತನ್ನ ಲಾರಿಯ ಬಂಪರ್ ಒರೆಸುತ್ತಿದ್ದಾಗ ಮುಂದುಗಡೆಯಿದ್ದ ಲಾರಿಯೊಂದು ವೇಗವಾಗಿ ಹಿಂಬದಿಗೆ ರಿವರ್ಸ್ ಬಂದು ಡಿಕ್ಕಿ ಹೊಡೆದಿದ್ದರಿಂದ ಮಲ್ಲಿಕಾರ್ಜುನ ತಲೆಗೆ ಮಾರಣಾಂತಿಕ ಗಾಯವಾಗಿದ್ದರಿಂದ ತಕ್ಷಣ ಅವರನ್ನು ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.
ವೈದ್ಯಾಧಿಕಾರಿಗಳು ಬಂದು ತಪಾಸಣೆ ನಡೆಸಿದಾಗ ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸಕ್ಕರೆ ಕಾರ್ಖಾನೆಯ ಸೆಕ್ಯೂರಿಟಿ ಸಿಬ್ಬಂದಿ ವಿಠ್ಠಲ ತೇರಗಾಂವಕರ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರನ್ವಯ ಆರೋಪಿತ ಚಾಲಕ ಕಲಘಟಗಿ ತಾಲೂಕಿನ ಹಿರೆಹೊನ್ನಾಳಿಯ ನಿವಾಸಿ ಶಿವಲಿಂಗಪ್ಪ ಸಂಗಪ್ಪ ಎಮ್ಮೆಟ್ಟಿ (45) ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹಳಿಯಾಳ ಸಿಪಿಐ ಜಯಪಾಲ ಪಾಟೀಲ ಹಾಗೂ ಪಿಎಸ್‌ಐ ಬಸವರಾಜ ಮಬನೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ