ಕ್ಷುಲ್ಲಕ ಕಾರಣ ಕ್ಕಾಗಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ಘಟನೆಯಿಂದ ಕಡೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಪಟ್ಟಣದ ಸಿಪಿಶಿ ಕಾಲೋನಿಯ ಮಂಜುನಾಥ್‌ರವರ ಪುತ್ರ ವಿಘ್ನೇಶ್ ಎಂಬುವರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಯುವಕ ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುದ್ದಾರೆ.
ಕಡೂರು (ಜು.6) : ಕ್ಷುಲ್ಲಕ ಕಾರಣ ಕ್ಕಾಗಿ ಯುವಕನೋರ್ವನಿಗೆ ಚಾಕುವಿನಿಂದ ಇರಿದ ಘಟನೆಯಿಂದ ಕಡೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಪಟ್ಟಣದ ಸಿಪಿಶಿ ಕಾಲೋನಿಯ ಮಂಜುನಾಥ್‌ರವರ ಪುತ್ರ ವಿಘ್ನೇಶ್ ಎಂಬುವರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಯುವಕ ಕಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುದ್ದಾರೆ.
ಘಟನೆಯ ಹಿನ್ನೆಲೆ:
undefined
ಕಳೆದ ಮಂಗಳವಾರ ಸಂಜೆ ಸುಮಾರು 7.30ರ ಸಮಯದಲ್ಲಿ ಕಡೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಮೊಬೈಲ್ ಟವರ್‌ನÜ ಮುಂಭಾಗದಲ್ಲಿ ಮಳೆಯಲ್ಲಿಯೇ ತನ್ನ ಬೈಕಿನಲ್ಲಿ ವಿಘ್ನೇಶ್ ಮನೆಗೆ ಹೋಗುತ್ತಿರುವಾಗ ಮುಂಭಾಗದಲ್ಲಿ ಹೋಗುತ್ತಿದ್ದ ರಿಯಾಜ್ ಎಂಬುವರ ತಳ್ಳುಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ವಿಘ್ನೇಶನ ಫೋನ್ ಒಡೆದು ಹೋಗಿದ್ದು, ಅಲ್ಲಿ ನೆರೆದಿದ್ದ ಎರಡು ಕೋಮಿನ ಜನರು ಸೇರಿ ಇಬ್ಬರಿಗೂ ಸಮಾಧಾನಪಡಿಸಿ ಕಳುಹಿಸಿ ಕೊಟ್ಟರು ಎನ್ನಲಾಗಿದೆ.
Karnataka Crimes: ಮನೆ ಮೇಲೆ ಆಟ ಆಡುವಾಗ ಜಗಳ; ಚಾಕು ಇರಿತಕ್ಕೆ ಬಾಲಕ ಸಾವು!
ಆದರೆ ರಾತ್ರಿ 9 ಗಂಟೆ ಸುಮಾರಿಗೆ ಫಾಜಿಲ್, ನವಾಜ್, ಸೈಯ್ಯದ್, ರುಮಾನ್, ಸುಹೀಲ್ ಸೇರಿದಂತೆ ಅನೇಕರು ಗುಂಪು ಸೇರಿ ಮತ್ತೆ ಮನೆ ಹತ್ತಿರ ಹೋಗಿ ಗಲಾಟೆ ನಡೆಸಿದ್ದು, ಫಾಜಿಲ್‌ಎಂಬುವನು ವಿಘ್ನೇಶ್‌ಗೆ ಚಾಕು ಹಾಕಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸಾಕಷ್ಟುಜನ ಸೇರುವ ಮೂಲಕ ಗಂಭೀರ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಚಾಕುವಿನಿಂದ ಇರಿದಿರುವ ಫಾಜಿಲ್ ಎಂಬುವನು ಶಿವಮೊಗ್ಗದವನಾಗಿದ್ದು, ಅಜ್ಜಂಪುರದಲ್ಲಿ ಡ್ರೈವರ್ ಕೆಲಸ ಮಾಡುತ್ತಿರುವ ಆತನು ಕಡೂರು ಪಟ್ಟಣದಲ್ಲಿ ತನ್ನ ಅಜ್ಜಿಯ ಮನೆಯಲ್ಲಿ ಇದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಉಮಾಪ್ರಶಾಂತ್ ತಿಳಿಸಿದರು.
ಪ್ರಕರಣ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ರಾತ್ರಿ ಸುಮಾರು 3 ಗಂಟೆವರೆಗೂ ಇದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಂಡಿದ್ದಾರೆ. ಈ ಕುರಿತು ಕ್ರಮ ವಹಿಸುವಂತೆಯೂ ಪೊಲೀಸರಿಗೆ ಸೂಚನೆ ನೀಡಿದರು ಎಂದು ಬುಧವಾರ ಬೆಳಿಗ್ಗೆ ಜಿಲ್ಲಾ ಸಹಾಯಕ ರಕ್ಷಣಾಧಿಕಾರಿ ಜಿ. ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.
ಇರಿತಕ್ಕೆ ಒಳಗಾಗಿರುವ ವಿಘ್ನೇಶ್ ದೂರು ನೀಡಿದ್ದು, ಕೃತ್ಯದಲ್ಲಿ ಭಾಗಿಯಾದ ಆರು ಜನ ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ತಲೆಮರಿಸಿಕೊಂಡ ಉಳಿದ ಇಬ್ಬರಿಗಾಗಿ ಶೋಧ ನಡೆದಿದೆ. ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ಕಡೂರು ಪಟ್ಟಣದಾದ್ಯಂತ ಹಾಗೂ ಸೂಕ್ಷ್ಮ$ಪ್ರದೇಶಗಳಲ್ಲಿ ಬಿಗಿ ಬಂದೋಬಸ್‌್ತ ಮಾಡಿ ಯಾವುದೇ ಅಹಿತಕರ ಘಟನೆ ಆಗದಂತೆ ವೃತ್ತ ನಿರೀಕ್ಷಕ ಶಿವಕುಮಾರ್, ಪಿಎಸೈ ಧನಂಜ¿å ಕ್ರಮ ವಹಿಸಿದ್ದಾರೆ.
ಬುಧವಾರ ಬೆಳಿಗ್ಗೆ ಸದರಿ ಪ್ರಕರಣದ ವಿಷಯ ತಿಳಿಯುತ್ತಿದ್ದಂತೆ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಕಡೂರು ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದರು. ಘಟನೆ ಕುರಿತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಸಂಘಟನೆ ಮುಖಂಡರಾದ ಮಹೇಶ್ ಒಡೆಯರ್, ಮಂಜುನಾಥ ಜೈನ್, ಸಿದ್ದಪ್ಪ, ನಾಗೇಂದ್ರ ಅಗ್ನಿ, ಕೆ. ಯತಿರಾಜ್, ಶಶಾಂಕ್, ಅರುಣ್ ಸೇರಿದಂತೆ ಮತ್ತಿತರರನ್ನು ಎಎಸ್ಪಿ ಕೃಷ್ಣಮೂರ್ತಿ ಕರೆಸಿ ಮಾತನಾಡಿದ್ದು, ಮುಖಂಡರ ಮಾತುಗಳನ್ನು ಆಲಿಸಿದ ನಂತರ ಕಳೆದ ರಾತ್ರಿಯೇ ಸದರಿ ಘಟನೆಗೆ ಸಂಭಂದಿಸಿದಂತೆ ನಾಲ್ವರನ್ನು ಬಂಧಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಉಳಿದವರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ವರಿಷ್ಠಾಧಿಕಾರಿಗಳ ಮಾರ್ಗದರ್ಶದಂತೆ ಇಲಾಖೆ ಎಲ್ಲ ರೀತಿಯ ಕ್ರಮ ವಹಿಸಲಿದೆ. ಇದಕ್ಕೆ ಯಾವುದೇ ರೀತಿಯ ಬಣ್ಣ ಬೇಡ. ಚಾಕು ಇರಿತದ ಘಟನೆಯಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ಪ್ರಕರಣದ ಎರಡೂ ಗುಂಪಿನವರಿಗೂ ವಿಚಾರಣೆ ನಡೆಸಿ, ಎಲ್ಲ ರೀತಿಯ ವೈಜ್ಞಾನಿಕ ಪರೀಕ್ಷೆ ಮಾಡಿಸಲಾಗುವುದು. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸುತ್ತೇವೆ. ಇದರಲ್ಲಿ ಯಾವ ಮರ್ಜಿಯೂ ಇಲ್ಲ, ಜನರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.
ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ: ಅನ್ಯ ಕೋಮಿನ ಯುವಕರಿಂದ ದಾಳಿ, ಓರ್ವನಿಗೆ ಚಾಕು ಇರಿತ
ಸರ್ಕಾರಗಳು ಪದೇ ಪದೇ ಬದಲಾದಾಗ ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ಹಿಂದೂ ಸಮಾಜಕ್ಕೆ ಎಚ್ಚರಿಕೆಯೇ. ಇದರ ಹಿಂದೆ ಯಾವ ಶಕ್ತಿ ಕೆಲಸ ಮಾಡುತ್ತಿವೆ ಎಂಬುದು ತಿಳಿಬೇಕಾಗಿದೆ. ಘಟನೆ ಸಂಬಂಧ, ಕೃತ್ಯದಲ್ಲಿ ಭಾಗಿಯಾದ ಎಲ್ಲರ ಮೇಲೂ ಕ್ರಮ ಕೈಗೊಂಡು ಶಿಕ್ಷೆ ನೀಡಬೇಕು. ಇಲ್ಲದೇ ಹೋದಲ್ಲಿ ಹಿಂದೂಪರ ಸಂಘಟನೆಗಳಿಂದ ಉಗ್ರ ಹೋರಾಟ ಮಾಡಲಾಗುವುದು
-ಅಭಿಷೇಕ್, ಭಜರಂಗದಳದ ತಾಲೂಕು ಸಂಚಾಲಕ
-ಮಂಜುನಾಥ ಜೈನ್ ವಿ.ಹಿಂ.ಪ ಮುಖಂಡ
ಪಟ್ಟಣದಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್‌್ತ ಕೈಗೊಳ್ಳಲಾಗಿದೆ.
-ಜಿ. ನಾಗರಾಜು, ಡಿವೈಎಸ್ಪಿ ತರೀಕೆರೆ.