
ಕೇರಳ ಅಪರಾಧ: ಕನ್ಯಾಕುಮಾರಿ ಪೊಲೀಸರು ಪೆಂಟೆಕೊಸ್ಟಲ್ ಚರ್ಚ್‌ನ ಪಾದ್ರಿಯೊಬ್ಬರನ್ನು ಬಂಧಿಸಿದ್ದಾರೆ. ವಿವಾಹಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪ ಹೊತ್ತಿದ್ದಾನೆ. ಮಹಿಳೆಯ ಅನಾರೋಗ್ಯವನ್ನು ಗುಣಪಡಿಸುವುದಾಗಿ ಹೇಳಿ ಆಕೆಯ ಜೊತೆ ಸಂಬಂಧ ಹೊಂದಲು ಯತ್ನಿಸಿದ್ದಾನೆ.
ಪಾದ್ರಿ ಆಕೆಗೆ, 'ನಿನ್ನ ಆರೋಗ್ಯ ಸಮಸ್ಯೆಗಳು ನಿನ್ನ ಗಂಡನ ಜೊತೆಗಿನ ನಿನ್ನ ಸಂಬಂಧದಿಂದಾಗಿವೆ. ನಿನ್ನ ಗಂಡನ ವೀರ್ಯದಲ್ಲಿ ವಿಷ ಇದೆ. ನನ್ನ ಜೊತೆ ಮಲಗು. ನೀನು ನನ್ನಂಥ ಪಾದ್ರಿಯ ಜೊತೆ ಮಲಗಿದರೆ ಗುಣಮುಖಳಾಗುತ್ತೀಯ" ಎಂದು ಹೇಳಿದ್ದಾನೆ.
ಮಹಿಳೆಯನ್ನು ಖಾಸಗಿ ಪ್ರಾರ್ಥನೆಗೆ ಕರೆದಿದ್ದ ಪಾದ್ರಿ:
ಸಂತ್ರಸ್ತ ಯುವತಿ ಕೆಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಚಿಕಿತ್ಸೆಯ ನಿರೀಕ್ಷೆಯಲ್ಲಿ ಮೆಕ್ಕಮಂಡಪಂ ಪ್ರದೇಶದ ಫುಲ್ ಗಾಸ್ಪೆಲ್ ಪೆಂಟೆಕೊಸ್ಟಲ್ ಚರ್ಚ್‌ಗೆ ಹೋಗಿದ್ದಳು. ಅಲ್ಲಿನ ಪಾದ್ರಿ ರೆಜಿಮೋನ್ ಖಾಸಗಿ ಪ್ರಾರ್ಥನೆಯ ಮೂಲಕ ಆಕೆಯನ್ನು ಗುಣಪಡಿಸಬಲ್ಲೆ ಎಂದು ನಂಬಿಸಿದ್ದ. ಅದರಂತೆ ಪ್ರಾರ್ಥನೆಗೆ ಹೆಸರಲ್ಲಿ ಬಲವಂತ ಮಾಡಲು ಶುರು ಮಾಡಿದ್ದ ಪಾದ್ರಿ. ಪ್ರಾರ್ಥನೆ ಹೆಸರಿನಲ್ಲಿ ಪಾದ್ರಿ ಆಕೆಯನ್ನು ಅಪ್ಪಿಕೊಂಡು ಬಲವಂತ ಮಾಡಲು ಯತ್ನಿಸಿದ. ಆದರೆ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಬಳಿಕ ತುಕ್ಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಮೇರೆಗೆ ಪೊಲೀಸರು ಪಾದ್ರಿ ರೆಜಿಮೋನ್‌ನನ್ನು ಜೂನ್ 26, 2025 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಸಂತ್ರಸ್ತೆ ಕುಟುಂಬದ ಪ್ರಕಾರ, ಮಹಿಳೆಗೆ ಮದುವೆಯಾಗಿ 2 ವರ್ಷಗಳಾಗಿವೆ. ಆರೋಗ್ಯ ಸಮಸ್ಯೆಗಳು ಮತ್ತು ಇತರ ವೈಯಕ್ತಿಕ ಸಮಸ್ಯೆಗಳಿಂದಾಗಿ ಆಕೆ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದಳು. ಸಂಬಂಧಿಕರು ಆಧ್ಯಾತ್ಮಿಕ ಚಿಕಿತ್ಸೆಯ ನಿರೀಕ್ಷೆಯಲ್ಲಿ ಆಕೆಯನ್ನು ಮೆಕ್ಕಮಂಡಪಂನ ಪಾಂಡೀವಿಲೈನಲ್ಲಿರುವ ಪಾದ್ರಿ ರೆಜಿಮೋನ್‌ನ ಚರ್ಚ್‌ಗೆ ಕರೆದೊಯ್ದಿದ್ದರು. ರೆಜಿಮೋನ್ ಆಕೆಗೆ ತನ್ನ ಆದಾಯದ 10% ಚರ್ಚ್‌ಗೆ ದಾನ ಮಾಡಿದರೆ ಆಕೆಯ ದೈಹಿಕ ಕಾಯಿಲೆಗಳು ಗುಣಮುಖವಾಗುತ್ತವೆ ಎಂದು ಹೇಳಿದ್ದನಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ