ಬಸ್‌ನಲ್ಲಿ ಯುವತಿಗೆ ಇರಿದು ತನ್ನ ಕತ್ತು ಕುಯ್ದುಕೊಂಡ ಯುವಕ

Published : May 05, 2023, 01:36 PM IST
ಬಸ್‌ನಲ್ಲಿ ಯುವತಿಗೆ ಇರಿದು ತನ್ನ ಕತ್ತು ಕುಯ್ದುಕೊಂಡ ಯುವಕ

ಸಾರಾಂಶ

 ಯುವತಿಗೆ ಇರಿದ ಯುವಕನೋರ್ವ ಬಳಿಕ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಘಾತಕಾರಿ ಘಟನೆ ಕೇರಳದ ಮಲಪ್ಪುರಂನ ತಿರುರಂಗಡಿ ಎಂಬಲ್ಲಿ ನಡೆದಿದೆ.  

ಮಲಪ್ಪುರಂ:  ಯುವತಿಗೆ ಇರಿದ ಯುವಕನೋರ್ವ ಬಳಿಕ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಘಾತಕಾರಿ ಘಟನೆ ಕೇರಳದ ಮಲಪ್ಪುರಂನ ತಿರುರಂಗಡಿ ಎಂಬಲ್ಲಿ ನಡೆದಿದೆ.  ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ನಲ್ಲಿ ಈ ಘಟನೆ ನಡೆದಿದೆ.  ಈ ಬಸ್‌ ಕೇರಳದ ಮುನ್ನಾರ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು.  ಕೃತ್ಯವೆಸಗಿದ ಯುವಕನನ್ನು 25 ವರ್ಷದ ಸನಿಲ್ ಎಂದು ಗುರುತಿಸಲಾಗಿದ್ದು, ಈತ  ವಯನಾಡ್‌ ಮೂಲದವನಾಗಿದ್ದು, ಗೂಡ್ಲುರ್‌ ಮೂಲದ ಸೀತಾ ಎಂಬಾಕೆಗೆ ಚಾಕುವಿನಿಂದ ಇರಿದಿದ್ದಾನೆ. 

ಈ ಇಬ್ಬರೂ ಹಿಂದಿನಿಂದಲೂ ಪರಿಚಯಸ್ಥರಾಗಿದ್ದಾರೆ.  ಇನ್ನು ಇವರಿಬ್ಬರು ಬೇರೆ ಬೇರೆ ಕಡೆಗಳಿಂದ ಬಸ್ ಏರಿದ್ದಾರೆ. ಹುಡುಗ ಇಡಪಲ್‌ನಿಂದ (Edapal) ಬಸ್ ಹತ್ತಿದ್ದರೆ ಹುಡುಗಿ ಅಂಗಮಲೈನಿಂದ (Angamaly) ಬಸ್ ಏರಿದ್ದಾಳೆ.  ಮೊದಲಿಗೆ ಇಬ್ಬರು ಬಸ್‌ನಲ್ಲಿ ಮಧ್ಯದ ಸೀಟ್‌ನಲ್ಲಿ ಜೊತೆಯಲ್ಲೇ ಕುಳಿತಿದ್ದರು.  ಆದರೆ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಕೊಟ್ಟಕ್ಕಲ್ (Kottakkall) ಬಳಿ ಬಸ್ ತಲುಪಿದಾಗ ಇಬ್ಬರೂ  ಇಬ್ಬರೂ ಬಸ್‌ನ ಹಿಂಭಾಗದ ಸೀಟಿಗೆ ಶಿಫ್ಟ್ ಆಗಿದ್ದಾರೆ ಎಂದು ಬಸ್‌ನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. 

ಸುರತ್ಕಲ್: ಚೂರಿ ಇರಿತಕ್ಕೊಳಗಾಗಿದ್ದ ಜಲೀಲ್ ಸಾವು

ನಂತರ ಬಸ್‌ನ ಲೈಟ್ ಆಫ್ ಆದ ನಂತರ ಈ ಚೂರಿ ಇರಿತ ಪ್ರಕರಣ ನಡೆದಿದೆ. ಹುಡುಗಿಗೆ ಒಂದಕ್ಕಿಂತ ಹೆಚ್ಚು ಬಾರಿ ಎದೆಗೆ ಇರಿದ ಯುವಕ ನಂತರ ತನ್ನ ಕತ್ತನ್ನು ಅದೇ ಚಾಕುವಿನಿಂದ ಕುಯ್ದುಕೊಂಡಿದ್ದಾನೆ. ಇದಾದ ಬಳಿಕ ಚಾಕನ್ನು ಬಸ್‌ನಿಂದ ಹೊರಗೆ ಎಸೆಯಲಾಗಿದೆ. ಕೂಡಲೇ ಬಸ್‌ನ ಸಿಬ್ಬಂದಿ ಯುವತಿ ಹಾಗೂ ಯುವಕ ಇಬ್ಬರನ್ನು  ತಿರುರಂಗಡಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ರಾತ್ರಿಯೇ ಕೋಯಿಕೋಡ್‌ನ ಮೆಡಿಕಲ್ ಕಾಲೇಜು (Kozhikode Medical College Hospital) ಆಸ್ಪತ್ರೆಗೆ ದಾಖಲಿಸಲಾಗಿದೆ. ಸನಿಲ್ ಕೊಟ್ಟಾಯಂನಲ್ಲಿ ಹೊಟೇಲ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ. 

ಕುಡಿದ ಮತ್ತಲ್ಲಿ ಮೂವರ ಮೇಲೆ ಹಲ್ಲೆ; ಬುದ್ಧಿ ಹೇಳಿದ್ದಕ್ಕೆ ಚಾಕು ಇರಿತ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!