ಬೆಂಗಳೂರು: ದೇಶ ವಿರೋಧಿ ಪೋಸ್ಟ್ ಮಾಡಿದ ಕಾಶ್ಮೀರ ಮೂಲದ ವ್ಯಕ್ತಿ ಬಂಧನ

By Kannadaprabha News  |  First Published Jun 21, 2024, 4:48 AM IST

ಫಾಹಿಮ್ ಫಿರ್ ದೋಸ್ ಖುರೇಷಿ ಬಂಧಿತ ವ್ಯಕ್ತಿ. ಇತ ಬೆಂಗಳೂರಿನಲ್ಲಿಯೇ ವ್ಯಾಸಂಗ ಮಾಡಿ, ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ (ಬಿಐಇಸಿ)ನಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.
 


ಪೀಣ್ಯ ದಾಸರಹಳ್ಳಿ(ಜೂ.21): ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಾಶ್ಮೀರ ಮೂಲದ ವ್ಯಕ್ತಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಫಾಹಿಮ್ ಫಿರ್ ದೋಸ್ ಖುರೇಷಿ ಬಂಧಿತ ವ್ಯಕ್ತಿ. ಇತ ಬೆಂಗಳೂರಿನಲ್ಲಿಯೇ ವ್ಯಾಸಂಗ ಮಾಡಿ, ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ (ಬಿಐಇಸಿ)ನಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.

ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಹಾಗೂ ಸಾಮಾಜಿಕ ನೆಮ್ಮದಿ ಹಾಳು ಮಾಡುವ ವಿಕೃತಿ ಹೊಂದಿದ್ದ ಫಾಹಿಮ್ ಫಿರ್ ದೋಸ್ ಖುರೇಷಿ, ಸಾಮಾಜಿಕ ಜಾಲತಾಣವಾದ ‘ಎಕ್ಸ್​’ ನಲ್ಲಿ ಹಲವಾರು ದೇಶ ವಿರೋಧಿ ಪೋಸ್ಟ್ ಹಾಕಿದ್ದ. ಅದರಲ್ಲೂ ‘When “I” is replaced by “We” India becomes wendia, Meaning we will end India’ ಎಂದು ಟ್ವೀಟ್ ಮಾಡಿದ್ದ. ಇದನ್ನೂ ಕೆಲ ದೇಶವಿರೋಧಿಗಳು ಶ್ಲಾಘಿಸಿದ್ದರು. ಈ ಹಿನ್ನೆಲೆಯಲ್ಲಿ ದೇಶದ್ರೋಹಿ ಕೃತ್ಯವೆಸಗಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Latest Videos

undefined

News Hour: ಒಂದು ಮರ್ಡರ್, 15 ಸಾಕ್ಷ್ಯ; ಡಿಗ್ಯಾಂಗ್​ಗೆ ಶಿಕ್ಷೆ ಪಕ್ಕಾನಾ?

ಲ್ಯಾಪ್‌ಟಾಪ್, ಬೈಕ್, ಮೊಬೈಲ್ ಜಪ್ತಿ: ಇನ್ನು ಇತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು, ಆತ ವಾಸವಿದ್ದ ಪೀಣ್ಯಾ ಪ್ಲಾಟಿನಮ್ ಸಿಟಿ ಅಪಾರ್ಟ್ಮೆಂಟ್ ಹಾಗೂ ಬಿಐಇಸಿನಲ್ಲಿ ಸ್ಥಳ ಮಹಜರು ಮಾಡುತ್ತಿದ್ದಾರೆ. ಜೊತೆಗೆ ಖುರೇಷಿ ಉಪಯೋಗಿಸುತ್ತಿದ್ದ ಲ್ಯಾಪ್‌ಟಾಪ್, ಬೈಕ್ ಹಾಗೂ ಮೊಬೈಲನ್ನು ಜಪ್ತಿ ಮಾಡಿ, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ 1860-505(1)ಬಿ,153ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

click me!