News Hour: ಒಂದು ಮರ್ಡರ್, 15 ಸಾಕ್ಷ್ಯ; ಡಿಗ್ಯಾಂಗ್​ಗೆ ಶಿಕ್ಷೆ ಪಕ್ಕಾನಾ?


ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಸೇರಿದಂತೆ ನಾಲ್ಕು ಮಂದಿಯನ್ನು ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ. ಇನ್ನೊಂದೆಡೆ ಎ1 ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
 

First Published Jun 20, 2024, 11:50 PM IST | Last Updated Jun 20, 2024, 11:50 PM IST

ಬೆಂಗಳೂರು (ಜೂ.20): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತೆ ಎರಡು ದಿನ ದರ್ಶನ್‌ರನ್ನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಈ ನಡುವೆ ರೇಣುಕಾಸ್ವಾಮಿಗೆ ಕೊಲೆಗೆ ಈವರೆಗೂ ಒಟ್ಟು 15 ಸಾಕ್ಷಿ ಸಿಕ್ಕಿವೆ ಎನ್ನಲಾಗಿದೆ.

ನಟ ದರ್ಶನ್‌ ಗ್ಯಾಂಗ್ ವಿರುದ್ಧ ಒಟ್ಟು 15 ಪ್ರಬಲ ಸಾಕ್ಷ್ಯ ಸಿಕ್ಕಿವೆ. ಡಿಗ್ಯಾಂಗ್​​ನಿಂದ ಕೊಲೆ ಎಂದು FSL ವರದಿಯಲ್ಲಿ ಸಾಕ್ಷ್ಯ ಸಿಕ್ಕಿದೆ. ಈ ಸಾಕ್ಷ್ಯಗಳಿಂದ್ಲೇ ದರ್ಶನ್​ಗೆ ಜೈಲೂಟ ಫಿಕ್ಸ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್ ಸೇರ್ಪಡೆ ಮಾಡಿದ ಪೊಲೀಸರು; ಜೈಲೂಟ ಫಿಕ್ಸ್!

ಕೊಲೆ ಆರೋಪಿಗಳ ಚಲನವಲನದ ಸಂಪೂರ್ಣ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಕೊಲೆಯಾದ ರೇಣುಕಾಸ್ವಾಮಿ ರಕ್ತದ ಮಾದರಿ, ಕೂದಲು ಮಾದರಿ ಸಂಗ್ರಹ ಮಾಡಲಾಗಿದೆ. ಎಲ್ಲ ಆರೋಪಿಗಳ ಡಿಎನ್​​​ಎ ಸಹಿತ ರಕ್ತದ ಮಾದರಿ, FSLಗೆ ರವಾನಿಸಲಾಗಿದೆ. ಹಲ್ಲೆಯ ನಡೆಸಿದ ವೇಳೆ ನಟ ದರ್ಶನ್ ಬಟ್ಟೆ ಮೇಲೆ ರಕ್ತದ ಕಲೆಗಳು ಕೂಡ ತಾಳೆಯಾಗಿದೆ ಎನ್ನಲಾಗಿದೆ.