ಭೀಮಾ ತೀರದ SBI ಬ್ಯಾಂಕ್ ದರೋಡೆ:ತಾವು ಕದ್ದಿದ ಚಿನ್ನ-ನಗದು ವಾಪಸ್ ಮಾಡ್ತಿರೋ ಗ್ರಾಮಸ್ಥರು!

Published : Sep 19, 2025, 11:23 PM IST
Karnataka SBI robbery

ಸಾರಾಂಶ

ವಿಜಯಪುರ ಜಿಲ್ಲೆಯ ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ, ದರೋಡೆಕೋರನೊಬ್ಬ ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಪಾಳು ಮನೆಯ ಮೇಲ್ಚಾವಣಿಯಲ್ಲಿ ಬಚ್ಚಿಟ್ಟಿದ್ದ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿ 6.64 ಕೆಜಿ ಚಿನ್ನಾಭರಣ ಮತ್ತು 41 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ವಿಜಯಪುರ (ಸೆ.19) : ರಾಜ್ಯವೇ ಬೆಚ್ಚಿ ಬೀಳಿಸೋವಂತ ಬ್ಯಾಂಕ್ ದರೋಡೆ ಕಳೆದ ಸಪ್ಟೆಂಬರ್ 16 ರ ಸಾಯಂಕಾಲ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಚಡಚಣ ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಲ್ಲಿ ಮೂವರು ದರೋಡೆಕೋರರ ತಂಡ 1.5 ಕೋಟಿ ನಗದು 20 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ಇದೀಗ ದರೋಡೆಕೋರನೋರ್ವ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ದರೋಡೆಗೆ ಬಳಕೆ ಮಾಡಿದ್ದ ಇಕೋ ವಾಹನ ಬಿಟ್ಟು ಪರಾರಿಯಾಗಿದ್ದ. ಅದೇ ಗ್ರಾಮದ ಮನೆ ಮೇಲ್ಚಾವಣಿ ಮೇಲೆ ಇಟ್ಟು ಹೋಗಿದ್ದ ಚಿನ್ನಾಭರಣ ನಗದು ಇದ್ದ ಬ್ಯಾಗ್ ಪತ್ತೆಯಾಗಿದೆ.

ದರೋಡೆಗೆ ಬಳಸಿದ್ದ ಕಾರ್ ಸಿಕ್ಕಿದ್ದ ಊರಲ್ಲೆ ಚಿನ್ನ-ನಗದು ತುಂಬಿದ ಬ್ಯಾಗ್ ಪತ್ತೆ

ಕಳೆದ ಸಪ್ಟೆಂಬರ್ 16 ರಂದು ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಲ್ಲಿ ಐವರು ದರೋಡೆಕೋರರ ಗ್ಯಾಂಗ್ ದರೊಡೆ ಮಾಡಿತ್ತು. 1.5 ಕೊಟಿ ನಗದು 20 ಕೆಜಿ ಚಿನ್ನಾಭರಣ ದರೋಡೆ ಮಾಡಿದ್ದು. ಬ್ಯಾಂಕ್ ಅಧಿಕಾರಿಗಳ ಸಿಬ್ಬಂದಿಗಳ ನಿರ್ಲಕ್ಷ್ಯ ದರೋಡೆ ಮಾಡಲು ಕಾರಣವೂ ಆಗಿತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು 8 ತಂಡಗೊಳೊಂದಿಗೆ ತನಿಖೆಯನ್ನು ತ್ವರಿತವಾಗಿ ಮಾಡುತ್ತಿದ್ದಾರೆ. ಘಟನೆ ನಡೆದ ದಿನ ಓರ್ ದರೋಡೆಕೋರ ಇಕೋ ವಾಹನದಲ್ಲಿ ಚಿನ್ನಾಭರಣ ನಗದಿನೊಂದಿಗೆ ಇಕೋ ವಾಹನದಲ್ಲಿ ಪರಾರಿಯಾಗಿದ್ದ. ಈ ವಾಹನ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ವೇಗವಾಗಿ ತೆರಳಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆಸಿದ್ದ. ಇದನ್ನು ಪ್ರಶ್ನೆ ಮಾಡಿದಾಗ ನೆರದ ಜನರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಎರಡು ಬ್ಯಾಗ್ ಗಳೊಂದಿಗೆ ಪರಾರಿಯಾಗಿದ್ದ. ಕಾರಿನಲ್ಲಿ ಸ್ವಲ್ಪ ಪ್ರಮಾಣದ ನಗದು ಚಿನ್ನಾಭರಣಗಳು ಬಿದ್ದಿದ್ದವು. ಇಷ್ಟರ ಮದ್ಯೆ ನಿನ್ನೆ ಹುಲಜಂತಿ ಗ್ರಾಮದ ಪಾಳು ಮನೆಯ ಮೇಲ್ಚಾವಣಿ ಮೇಲೆ ಒಂದು ಬ್ಯಾಗ್ ಪತ್ತೆಯಾಗಿದೆ. ಗ್ರಾಮದ ಜನರು ಮಂಗಳವೇಡೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಕೊಡಗಿನಲ್ಲಿ ವೇಶ್ಯಾವಾಟಿಕೆ ದಂಧೆ, ಇಬ್ಬರ ಬಂಧನ, ನಾಲ್ವರು ಮಹಿಳೆಯರ ರಕ್ಷಣೆ

ಕೆ.ಜಿ ಗಟ್ಟಲೇ ಚಿನ್ನ, ಲಕ್ಷಾಂತರ ರೂಪಾಯಿ ಹಣ ಪತ್ತೆ!

ವಿಜಯಪುರ ಪೊಲೀಸರೊಂದಿಗೆ ಪರಿಶೀಲನೆ ಮಾಡಲಾಗಿ ಬ್ಯಾಗ್ ನಲ್ಲಿ 6.64 ಕೆಜಿ ಚಿನ್ನಾಭರಣ 41 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಇಕೋ ವಾಹನದಲ್ಲಿ ಪರಾರಿಯಾಗಿ ಕಾರು ಬಿಟ್ಟು ಹೋದ ದರೋಡೆಕೋರ ಇದನ್ನು ಪರಾರಿಯಾಗೋವಾಗ ಕತ್ತಲಲ್ಲಿ ಪಾಳು ಮನೆಯ ಮೇಲ್ಚಾವಣಿ ಮೇಲೆ ಬಚ್ಚಿಟ್ಟಿರೋ ಸಂಶಯ ಉಂಟಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಕಾರಲ್ಲಿ ಸಿಕ್ಕ ಚಿನ್ನ-ನಗದು ಮನೆಗೆ ಓಯ್ದಿರೊ ಕೆಲ ಗ್ರಾಮಸ್ಥರು!

ಇದು ಬ್ಯಾಗ್ ಸಿಕ್ಕ ಕಥೆ ಒಂದೆಡೆಯಾದರೆ ಅತ್ತ ಹುಲಜಂತಿ ಗ್ರಾಮದಲ್ಲಿನ ಕಥೆ ಬೇರೆಯೇ ಆಗಿದೆ. ಇಕೋ ವಾಹನ ಬಿಟ್ಟು ಪರಾರಿಯಾಗಿದ್ದ ದರೋಡೆಕೋರ ಕಾರಿನಲ್ಲಿ ಸ್ವಲ್ಪ ಚಿನ್ನಾಭರಣ ನಗದು ಬಿಟ್ಟು ಹೋಗಿದ್ದ. ಅವುಗಳನ್ನು ಗ್ರಾಮದ ಕೆಲ ಜನರು ಆಸೆಯಿಂದ ತೆಗೆದುಕೊಂಡಿದ್ದರು. ನಗದು ಚಿನ್ನಾಭರಣ ಎಸ್ ಬಿ ಐ ಬ್ಯಾಂಕ್ ನಲ್ಲಿ ದರೋಡೆಗೆ ಮಾಡಿದ್ದು ಎಂಬುದು ಅವರಿಗೆ ಗೊತ್ತಿರಲಿಲ್ಲಾ. ಈ ವಿಚಾರದಲ್ಲಿ ಮಹಾರಾಷ್ಟ್ರದ ಮಂಗಳವೇಡ ಪೊಲೀಸರು ವಿಜಯಪುರ ಜಿಲ್ಲಾ ಪೊಲೀಸರು ಯಾರಾದರೂ ಚಿನ್ನಾಭರಣ ನಗದು ತೆಗೆದುಕೊಂಡಿದ್ದರೆ ಗ್ರಾಮದ ಮುಖಂಡರ ಮೂಲಕ ಕೊಡಿ ಇಲ್ಲವಾದರೆ ಮುಂದೆ ತನಿಖೆ ಮಾಡಬೇಕಾಗುತ್ತದೆ ಎಂದು ಹೇಳಿದ್ದರು.

ಪೊಲೀಸರಿಗೆ ಚಿನ್ನ ಹಣ ವಾಪಸ್ ಮಾಡ್ತಿರೋ ಗ್ರಾಮಸ್ಥರು!

ಎಚ್ಚೆತ್ತ ಹುಲಜಂಗಿ ಗ್ರಾಮದ ಇಬ್ಬರು ತಾವು ತೆಗೆದುಕೊಂಡಿದ್ದ 2.50 ಲಕ್ಷ ರೂಪಾಯಿ ಒಂದು ಚಿನ್ನದ ಲಾಕೆಟ್ ಸರ್ ಗ್ರಾಮದ ನಾಗೇಶ ಹಾಗೂ ಗೋವಿಂದ ಅವರ ಬಳಿ ನೀಡಿದ್ದಾರೆ. ಮತ್ತಷ್ಟು ಜನರು ತೆಗೆದುಕೊಂಡಿರೋ ಚಿನ್ನಾಭರಣ ನಗದು ವಾಪಸ್ ನೀಡುತ್ತಾರೆ. ಇಲ್ಲವಾದರೆ ಪೊಲೀಸರು ತನಿಖೆ ಮಾಡಲು ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ. ಇನ್ನು ಮೂರು ದಿನಗಳಿಂದ ನಡುರಾತ್ರಿ ಕೆಲ ಅಪರಿಚಿತರು ಗ್ರಾಮದಲ್ಲಿ ಓಡಾಡುತ್ತಿದ್ದಾರೆ. ಚಿನ್ನಾಭರಣ ನಗದು ಬ್ಯಾಗ್ ಮನೆಯ ಮೇಲೆ ಇಟ್ಟು ಹೋದವರೇ ಇರಬೇಕು ಅದಕ್ಕಾಗಿ ಬರುತ್ತಿದ್ದಾರೆ. ಗ್ರಾಮದಲ್ಲಿ ಭಯ ಆವರಿಸಿದೆ. ಸಾಯಂಕಾಲದ ಬಳಿಕ ಜನರು ಮನೆಯಾಚೆ ಬರುತ್ತಿಲ್ಲಾ. ರಾತ್ರಿ ಓಡಾಡುತ್ತಿಲ್ಲಾ ಎಂದು ಆತಂಕ ಹೇಳಿದ್ದಾರೆ. ಪೊಲೀಸರು ಗ್ರಾಮದಲ್ಲಿ ಹೆಚ್ಚಿನ ಪಹರೆ ನಿಯೋಜಿಸಬೇಕೆಂದು ಮನವಿ ಮಾಡಿದ್ದಾರೆ.

ದರೋಡೆಕೋರರ ಬಂಧನಕ್ಕೆ ಆಗ್ರಹ‌‌!

ಒಂದು ದರೋಡೆಕೋರ್ವ ಮನೆ ಮೇಲೆ ಇಟ್ಟಿದ್ದ ಬ್ಯಾಗ್ ಪತ್ತೆಯಾಗಿದೆ. ಇನ್ನು ಮುಂದದೆ ಭಾರೀ ಸವಾಲು ಪರಾರಿಯಾಗಿರೋ ಮೂವರು ದರೋಡೆಕೋರರ ಪತ್ತೆ ಹಾಗೂ ದರೋಡೆ ಮಾಡಿರೋ ಚಿನ್ನಾಭರಣ ಹಾಗೂ ನಗದು ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಬೇಕಿದೆ. ಗ್ರಾಹಕರಿಗೆ ನ್ಯಾಯ ನೀಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ..

ಇದನ್ನೂ ಓದಿ: ಕಾಕನೂರು ಎಸ್‌ಬಿಐ ಬ್ಯಾಂಕ್ ದರೋಡೆ: ಸಿನಿಮೀಯ ರೀತಿಯಲ್ಲಿ 10 ಲಕ್ಷಕ್ಕೂ ಅಧಿಕ ಹಣ ದೋಚಿ ಕಳ್ಳರು ಪರಾರಿ!

SBI ಅಧಿಕಾರಿಗಳಿಂದ ಗ್ರಾಹಕರ ಸಭೆ!

ಚಡಚಣ ಪಟ್ಟಣದಲ್ಲಿ ಎಸ್‌ಬಿಐ ಚಡಚಣ ಶಾಖೆಯ ನೇತೃತ್ವದಲ್ಲಿ ಗ್ರಾಹಕರ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಎಸ್ ಬಿ ಐ ಕಲಬುರ್ಗಿ ವಲಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಚಿನ್ನ ಕಳುವಾಗಿದ್ದು, ವಾಪಸ್ ಸಿಗುತ್ತಾ ಎನ್ನುವ ಆತಂಕದಲ್ಲಿ ಗ್ರಾಹಕರಿದ್ದು, ಅವರ ಆತಂಕ ದೂರ ಮಾಡಲು ಎಸ್‌ಬಿಐ ಗ್ರಾಹಕರ ತುರ್ತು ಸಭೆ ನಡೆಸಿದೆ. ಈ ವೇಳೆ ಮಾತನಾಡಿದ ಎ.ಎಸ್ಪಿ ರಾಮನಗೌಡ ಹಟ್ಟಿ ಗ್ರಾಹಕರು ಪದೇ ಪದೇ ಎಸ್‌ಬಿಐ ಬ್ಯಾಂಕ್‌ಗೆ ಹೋಗಿ ಸಿಬ್ಬಂದಿಗಳಿಗೆ ತೊಂದರೆ ನೀಡಬೇಡಿ. ಇದೀಗ ನಾವು ದರೋಡೆಕೋರರನ್ನ ಹಿಡಿಯಲು ಟೀಂ ರಚನೆ ಮಾಡಿದ್ದೇವೆ. ದರೋಡೆಕೋರರ ಹಿಡಿಯುವ ಜವಾಬ್ದಾರಿ ನಮ್ದು ಇದೆ. ಅದಕ್ಕಾಗಿ ನಿಮ್ಮ ಹಣ, ಚಿನ್ನವನ್ನು ನೂರಕ್ಕೆ ನೂರರಷ್ಟು ಮರಳಿ ತರುತ್ತೇವೆ ಎಂದು ಎಸ್‌ಬಿಐ ಗ್ರಾಹಕರಿಗೆ ಭರವಸೆ ನೀಡಿದರು. ಇತ್ತ ಗ್ರಾಹಕರು ಸಹ ತಮ್ಮ ಅಳಲನ್ನು ಪೊಲೀಸರ ಎದುರು ಹೇಳಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ