ಜಾರಕಿಹೊಳಿ ಸಿ.ಡಿ ಲೇಡಿಯ ಪರ ವಕೀಲನಿಗೆ ಬಂತು ಕುತ್ತು!

By Suvarna NewsFirst Published Apr 3, 2021, 5:48 PM IST
Highlights

ರಾಜ್ಯ ವಕೀಲರ ಪರಿಷತ್ತಿನ (ಬಾರ್​ ಕೌನ್ಸೆಲ್​) ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿ.ಡಿ. ಲೇಡಿ ಪರ ವಕೀಲ ತಮ್ಮ ವಕೀಲಿವೃತ್ತಿಗೆ ಕುತ್ತು ತಂದುಕೊಂಡಿದ್ದಾರೆ.

ಬೆಂಗಳೂರು, (ಏ.03): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಸಂತ್ರಸ್ತೆ ಯುವತಿಯಿಂದ ಸ್ಥಳ ಮಹಜರು ನಡೆಸುತ್ತಿದ್ದಾರೆ.

ಇದರ ಮಧ್ಯೆ ಸಿ.ಡಿ. ಪ್ರಕರಣದಲ್ಲಿ ಸಂತ್ರಸ್ತೆ ಯುವತಿಯ ಪರವಾಗಿ ವಕಾಲತು ವಹಿಸಿದ್ದ ವಕೀಲ ಮಂಜುನಾಥ. ಆರ್‌. ಎನ್ನುವರನ್ನು ಕರ್ನಾಟಕ ಬಾರ್ ಕೌನ್ಸಿಲ್‌ನಿಂದ ಅಮಾನತು ಮಾಡಲಾಗಿದೆ.

ಜಗದೀಶ್​ ಅವರ ಸ್ನೇಹಿತ ಮಂಜುನಾಥ್​ ಅವರು ಸಿಡಿ ಲೇಡಿಯ ಪರವಾಗಿ ನಿಂತಿದ್ದಾರೆ. ಅಲ್ಲದೇ ಫೇಸ್‌ಬುಕ್ ಲೈವ್‌ನಲ್ಲಿ ಜಗದೀಶ್ ಮತ್ತು ಮಂಜುನಾಥ್ ಅವರು ಒಟ್ಟಿಗೆ ಸೇರಿ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ವಿಚಾರಣೆಗೆ ಬರದ ರಮೇಶ್, ಜತೆಗಿದ್ದವರ ಬಗ್ಗೆ ಯುವತಿ ಕೊಟ್ಟ ಮಾಹಿತಿ!

ಆದರೆ ಇದೀಗ ವಕೀಲರ ಪರಿಷತ್ತಿನ ವಿರುದ್ಧ ಕೆಲವು ಆರೋಪ ಮಾಡಿರುವ ಜಗದೀಶ್​ ಅವರು, ವಕೀಲರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ವೆಲ್​ಫೇರ್​ ಸ್ಟ್ಯಾಂಪ್​ಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥ್ ಅವರನ್ನ ರಾಜ್ಯ ಬಾರ್ ಕೌನ್ಸಿಲ್‌, ಸಸ್ಪೆಂಡ್ ಮಾಡಿದೆ.

ಯಾವುದೇ ವಕೀಲ ಒಂದು ಕೇಸ್​ನಲ್ಲಿ ವಕಾಲತ್ತು ವಹಿಸುವಾಗ ವೆಲ್​ಫೇರ್​ ಫಂಡ್​ ಸ್ಟ್ಯಾಂಪ್​ ಆ ವಕಾಲತ್ತಿಗೆ ಅಂಟಿಸುವುದು ಕಡ್ಡಾಯವಾಗಿದೆ. ಈ ಸ್ಟ್ಯಾಂಪ್​ ಹಣದ ರೂಪದಲ್ಲಿ ಅಥವಾ ಡಿಮಾಂಡ್​ಡ್ರಾಫ್ಟ್​ ರೂಪದಲ್ಲಿ ಇರಬಹುದು. ಇದು ವಕೀಲರ ಕ್ಷೇಮಾಭ್ಯುಯದ ದೃಷ್ಟಿಯಿಂದ ಇದನ್ನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಮಂಜುನಾಥ್​ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ವಕೀಲ ಸ್ಟ್ಯಾಂಪ್ ನಿಂದ ಸಂಗ್ರಹಿಸಿದ್ದ ಹಣದಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ವಕೀಲರ ಪರಿಷತ್ತು ತನ್ನ ಸಭೆಯಲ್ಲಿ ಮಂಜುನಾಥ್​ ಅವರಿಗೆ ನೋಟಿಸ್​ ನೀಡಿದ್ದು, ಮುಂದಿನ ಆದೇಶದವರೆಗೆ ಸನ್ನದನ್ನು ಅಮಾನತುಗೊಳಿಸಿದೆ. ಯಾವುದೇ ವಕೀಲ ವಕೀಲಿವೃತ್ತಿ ನಡೆಸಲು ಅಥವಾ ಯಾವುದೇ ಕೇಸ್​ನಲ್ಲಿ ವಾದ ಮಂಡಿಸಲು ಈ ಸನ್ನದು ಅನುಮತಿಯ ಪತ್ರವಿದ್ದಂತೆ. ಇದು ಇಲ್ಲದಿದ್ದರೆ ವಕೀಲಿವೃತ್ತಿಯನ್ನು ನಡೆಸಲು ಆಗುವುದಿಲ್ಲ.

10 ದಿನಗಳ ಒಳಗೆ ಉತ್ತರಿಸುವಂತೆ ಮಂಜುನಾಥ್​ ಅವರಿಗೆ ನೋಟಿಸ್​ ನೀಡಿರುವ ವಕೀಲರ ಪರಿಷತ್ತು ತನಿಖೆ ಮುಗಿಯವವರೆಗೆ ಮಂಜುನಾಥ್​ ಅವರು ವಕೀಲಿವೃತ್ತಿ ನಡೆಸದಂತೆ ಅಮಾನತು ಮಾಡಿದೆ.

click me!