ಗರ್ಭಿಣಿ ಮೇಲೆ ಅತ್ಯಾಚಾರ ಮಾಡಿದ ಸ್ವಾಮೀಜಿ ಅರೆಸ್ಟ್/ ಮನೆಯಲ್ಲಿ ಸಿಕ್ಕಿದ್ದು ಅಶ್ಲೀಲ ಚಿತ್ರಗಳ ಭಂಡಾರ/ ಗರ್ಭನಿರೋಧಕಕಗಳು ಕಾಂಡೋಮ್ ಪತ್ತೆ/ ಪೊಲೀಸರ ವಶದಲ್ಲಿರುವ ಜೈನ ಮುನಿ
ಜೋಧಪುರ(ಜೂ. 14) ಗರ್ಭಿಣಿ ಮೇಲೆ ಅತ್ಯಾಚಾರ ಮಾಡಿದ ಸನ್ಯಾಸಿ ಮನೆಯಿಂದ ಗರ್ಭನಿರೋಧಕಗಳು, ಪೆನ್ ಡ್ರೈವ್ ಗಳು, ಎರಡು ಲ್ಯಾಪ್ ಟಾಪ್ ಗಳನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧನಕ್ಕೊಳಗಾದ ಸನ್ಯಾಸಿ ಮನೆಯಿಂದ ದೊಡ್ಡ ಬ್ಯಾಗ್ ವಶಕ್ಕೆ ಪಡೆಯಲಾಗಿದೆ. ಗರ್ಭನಿರೋಧಕಗಳು ತುಂಬಿದ ಚೀಲ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಪೊರೆನ್ಸಿಕ್ ತಂಡ ಮತ್ತು ಜೈಪುರದ ಪೊಲೀಸರು ಆರೋಪಿದ ಜೈನ ಸನ್ಯಾಸಿ ವಾಸ ಮಾಡುತ್ತಿದ್ದ ಮನೆಗೆ ಸಾಕ್ಷ್ಯ ಸಂಗ್ರಹಣೆಗೆ ತೆರಳಿದೆ. ಈ ವೇಳೆ ಬ್ಯಾಗ್ ಸಿಕ್ಕಿದ್ದು ತೆರೆದು ನೋಡಿದ ಪೊಲೀಸರು ದಂಗಾಗಿ ಹೋಗಿದ್ದಾರೆ. 19 ಮೊಬೈಲ್ ಪೋನ್, 33 ಪೆನ್ ಡ್ರೈವ್. 4 ಹಾರ್ಡ್ ಡಿಸ್ಕ್, ಕಾಂಡೋಮ್ ಪ್ಯಾಕೇಟ್ ಗಳು ಸಿಕ್ಕಿವೆ. ಹಾರ್ಡ್ ಡಿಸ್ಕ್ ನಲ್ಲಿ ಅಶ್ಲೀಲ ಚಿತ್ರಗಳ ಭಂಡಾರವೇ ಇದೆ.
ಕಾಂಡೋಮ್ ಬಳಸು ಎಂದಿದ್ದಕ್ಕೆ ಹತ್ಯೆ ಮಾಡಿದ
ಮಹಿಳೆಯೊಬ್ಬರು ತಮ್ಮ ನಾದಿನಿಯೊಂದಿಗೆ ಗುರುವಾರ ಸನ್ಯಾಸಿ ಬಳಿ ಆಶೀರ್ವಾದ ಪಡೆಯಲು ತೆರಳಿದ್ದರು. ಈ ವೇಳೆ ನೀವು ಒಬ್ಬರೆ ಬಂದು ನನ್ನ ಭೇಟಿ ಮಾಡಿ ಮಾತನಾಡಬೇಕು ಎಂದಿದ್ದ ಸ್ವಾಮೀಜಿ ಮಹಿಳೆ ಮೇಲೆ ಬಲಾತ್ಕಾರ ಮಾಡಿದ್ದ.
ಆಚಾರ್ಯ ಸುಕುಮಲ್ ನಂದಿ(38) ಸನ್ಯಾಸಿ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದು ಆತನ ಬಂಧನವಾದ ನಂತರ ಸ್ಥಳೀಯ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಮಾಡಬೇಕಾಗಿ ಬಂದಿತು. ಜೋಧಪುರ ಮೂಲದ ಸ್ವಾಮೀಜಿ ಮೋಹನ್ ನಗರದ ಜೈನ್ ಶೆಲ್ಟರ್ ನಲ್ಲಿ ವಾಸ ಮಾಡುತ್ತಿದ್ದ.
ಗರ್ಭಿಣಿ ಮತ್ತು ಆಕೆಯ ನಾದಿನಿ ಸ್ವಾಮೀಜಿ ಬಳಿ ತೆರಳಿದ್ದಾರೆ. ಮೊದಲು ಸ್ವಾಮೀಜಿ ನಾದಿನಿಗೆ ಕೋಣೆಯೊಳಕ್ಕೆ ಬರಹೇಳಿದ್ದು ಬಲಾತ್ಕಾರದ ಯತ್ನ ಮಾಡಿದ್ದಾನೆ. ಆದರೆ ಆಕೆ ತಪ್ಪಿಸಿಕೊಂಡು ಓಡಿಬಂದಿದ್ದಾಳೆ. ಇದಾದ ಮೇಲೆ ಗರ್ಭಿಣಿ ಕೋಣೆಯೊಳಕ್ಕೆ ಹೋಗಿದ್ದು ಸ್ವಾ,ಮೀಜಿ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.