
ಬೆಂಗಳೂರು (ಮಾ.6): ಇನ್ಸ್ ಟಾಗ್ರಾಂ ನಲ್ಲಿ ಅಪರಿಚಿತರ ಜೊತೆ ಸ್ನೇಹ ಬೆಳೆಸೋಕು ಮುನ್ನ ಎಚ್ಚರವಾಗಿರಿ. ನಂಬಿ ಸ್ನೇಹ ಮಾಡಿದ್ರೆ ಬ್ಲಾಕ್ ಮೇಲ್ ಗೆ ಒಳಗಾಗೋದು ಗ್ಯಾರಂಟಿ. ಇನ್ಸ್ ಟಾಗ್ರಾಂ ಗೆಳೆಯನ ನಂಬಿ ಭೇಟಿಯಾಗಿದ್ದ ಮಹಿಳೆಯೊಬ್ಬಳೂ ಬ್ಲಾಕ್ ಮೇಲ್ ಗೆ ಒಳಗಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ ಟಾಗ್ರಾಂ ನಲ್ಲಿ ಪರಿಚಯವಾದ ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ ಭೂಪನೊಬ್ಬ ಬರೋಬ್ಬರಿ 8 ಲಕ್ಷ ಹಣ, 240 ಗ್ರಾಂ ಚಿನ್ನಾಭರಣ ಪೀಕಿದ್ದಾನೆ.
ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸದ್ಯ ಬ್ಲಾಕ್ ಮೇಲ್ ಮಾಡಿ ಹಣ ಪೀಕಿದ್ದ ಆರೋಪಿ ಅನ್ಬು ಅಲಗನ್ ಎಂಬಾತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
200ಕ್ಕೂ ಹೆಚ್ಚು ಕೋವಿಡ್ ಲಸಿಕೆ ಹಾಕಿಸಿಕೊಂಡ ಜರ್ಮನ್ ವ್ಯಕ್ತಿ, ಅಡ್ಡಪರಿಣಾಮಗಳಿಲ್ಲ ಎಂದ ಅಧ್ಯಯನ
ಘಟನೆ ಹಿನ್ನೆಲೆ: ಇನ್ಸ್ ಟಾಗ್ರಾಂ ಮೂಲಕ 39 ವರ್ಷದ ಮಹಿಳೆಯೊಬ್ಬರಿಗೆ ಆರೋಪಿ ಅನ್ಬು ಅಲಗನ್ ಗಾಳ ಹಾಕಿದ್ದ. ಉತ್ತಮ ಸ್ನೇಹ ಬೆಳಸಿಕೊಂಡು ನಂತರ ಮಹಿಳೆಯನ್ನು ಭೇಟಿಯಾಗಿ ಜೊತೆಗೆ ಪೋಟೋ ತೆಗೆದುಕೊಂಡಿದ್ದ. ನಂತರ ಅದೇ ಪೊಟೋಗಳಿನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ.
ಹಣ ಕೊಡದಿದ್ದರೆ ಪೋಟೋಗಳನ್ನ ಕುಟುಂಬಸ್ಥರಿಗೆ ತೋರಿಸೋದಾಗಿ ಬೆದರಿಕೆ ಹಾಕಿದ್ದಾನೆ. ಇಷ್ಟು ಮಾತ್ರವಲ್ಲ ನಗ್ನ ವಿಡಿಯೋ ಕಾಲ್ ಹಾಗೂ ಪೋಟೋ ಕಳುಹಿಸುವಂತೆಯೂ ಒತ್ತಾಯ ಮಾಡಿ ಬೆದರಿಕೆ ಹಾಕಿದ್ದಾನೆ.
Breaking: ರಾಮೇಶ್ವರಂ ಕೆಫೆ ಬ್ಲಾಸ್ಟ್, ಬಾಂಬರ್‌ನ ಮಾಹಿತಿಗೆ ಭರ್ಜರಿ ಬಹುಮಾನ ಘೋಷಿಸಿದ ಎನ್‌ಐಎ!
ಇದೇ ರೀತಿ ಪೋಟಗಳನ್ನ ಇಟ್ಕೊಂಡು ಹಣ ಹಾಗೂ ಚಿನ್ನಾಭರಣ ವಸೂಲಿ ಮಾಡಿದ್ದಾನೆ. ಪದೇ ಪದೇ ಹಣ ಕೇಳುತ್ತಿದ್ದ ಹಿನ್ನೆಲೆ ಆತನ ಹಿಂಸೆಗೆ ಬೇಸತ್ತು ಮಹಿಳೆ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ದೂರು ಆದರಿಸಿ ಅನ್ಬು ಅಳಗನ್ ಪೊಲೀಸರು ಬಂಧಿಸಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ