ಇಂಗ್ಲೆಂಡ್ ರಾಜಧಾನಿ ಲಂಡನ್‌ನಲ್ಲಿ ಒಂದು ವಾರದಲ್ಲಿ ಮೂವರು ಭಾರತೀಯರು ಹತ್ಯೆಗೀಡಾಗಿದ್ದಾರೆ. ಇದು ನಿಜಕ್ಕೂ ಆತಂಕ ಮೂಡಿಸುವ ವಿಚಾರವಾಗಿದೆ.
ಲಂಡನ್ (ಜೂನ್ 21, 2023): ವಿದೇಶದಲ್ಲಿ ಭಾರತ ಮೂಲದವರ ಹತ್ಯೆ ಪ್ರಕರಣಗಳು ಹೆಚ್ಚಾಗ್ತಾನೇ ಇದೆ. ಆಗಿದ್ದಾಂಗೆ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೇ ರೀತಿ, ಯುಕೆಯ ಲಂಡನ್‌ನಲ್ಲಿ ಇತ್ತೀಚೆಗೆ 38 ವರ್ಷದ ಭಾರತೀಯ ಮೂಲದ ಅರವಿಂದ್ ಶಶಿಕುಮಾರ್ ಅವರನ್ನು ಜೂನ್ 16 ರಂದು ಚೂರಿಯಿಂದ ಇರಿದು ಕೊಲ್ಲಲಾಗಿದೆ.
ಕೇವಲ 2 ದಿನಗಳ ಹಿಂದಷ್ಟೇ ಯುಕೆಯಲ್ಲಿ ಬ್ರಿಟಿಷ್ ಭಾರತೀಯ ಹದಿಹರೆಯದವರು ಮತ್ತು ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬರು ಚಾಕು ಇರಿತಕ್ಕೆ ಹತ್ಯೆಗೀಡಾಗಿದ್ದರು.
ಇದನ್ನು ಓದಿ: ಮಹಿಳಾ ಜೈಲಲ್ಲಿ ಭೀಕರ ಗಲಭೆ: 41 ಕೈದಿಗಳನ್ನು ಸುಟ್ಟು, ಶೂಟ್ ಮಾಡಿ ಕೊಂದ ಗ್ಯಾಂಗ್‌ಸ್ಟರ್‌ಗಳು
ಘಟನೆಯ ವಿವರ..
ಶುಕ್ರವಾರ ನಸುಕಿನ ವೇಳೆಯಲ್ಲಿ ಕೇರಳದ ಕೊಚ್ಚಿಯ ಅರವಿಂದ್ ಶಶಿಕುಮಾರ್ ಅವರು ಸೌತಾಂಪ್ಟನ್ ವೇ, ಕ್ಯಾಂಬರ್‌ವೆಲ್‌ನಲ್ಲಿರುವ ತನ್ನ ಮನೆಯಲ್ಲಿ ಚಾಕು ಇರಿದ ಗಾಯಗಳೊಂದಿಗೆ ಅವರ ಶವ ಪತ್ತೆಯಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ನಸುಕಿನ 1:31ಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದೂ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು, ಈ ಸಂಬಂಧ ಸೌತಾಂಪ್ಟನ್ ವೇಯಲ್ಲಿ ವಾಸವಾಗಿರುವ 25 ವರ್ಷದ ಯುವಕ ಸಲ್ಮಾನ್ ಸಲೀಂ ಆರೋಪಿ ಎಂದು ಶನಿವಾರ, ಜೂನ್ 17 ರಂದು ಕೊಲೆ ಆರೋಪ ಹೊರಿಸಲಾಗಿದೆ ಎಂದು ಹೇಳಿದರು. ಸುದ್ದಿ ವರದಿಗಳ ಪ್ರಕಾರ, ಇಬ್ಬರೂ ಒಂದೇ ಫ್ಲ್ಯಾಟ್‌ನಲ್ಲಿ ವಾಸ ಮಾಡುತ್ತಿದ್ದರು. ಇವರ ಜತೆಗೆ ಇತರೆ ಮೂವರು ಸಹ ವಾಸ ಮಾಡುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಶುಕ್ರವಾರ ಯಾವುದೋ ಕಾರಣಕ್ಕೆ ಇಬ್ಬರೂ ಜಗಳವಾಡಿದ ಬಳಿಕ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಾಲ್ವರು ಹಿಂದೂಗಳನ್ನೇ ಮದ್ವೆಯಾಗಿರೋ ಲವ್‌ಜಿಹಾದಿಯಿಂದ ಮತ್ತೊಬ್ಳು ಹಿಂದೂ ಯುವತಿ ಕಿಡ್ನ್ಯಾಪ್
ಅದೇ ದಿನ ಆರೋಪಿಯನ್ನು ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಜೂನ್ 20 ರಂದು ಓಲ್ಡ್ ಬೈಲಿಯಲ್ಲಿ ಹಾಜರಾಗಲು ಕಸ್ಟಡಿಗೆ ಒಪ್ಪಿಸಲಾಯಿತು. ಇನ್ನು, ಈ ಅಪರಾಧವನ್ನು ಕಂಡ ಇತರ ಇಬ್ಬರು ಮಲಯಾಳಿಗಳನ್ನು ತನಿಖೆಯ ಭಾಗವಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದೂ ತಿಳಿದುಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ ಸಲೀಂ ಮತ್ತು ಶಶಿಕುಮಾರ್ ಇಬ್ಬರೂ ಕೇರಳದವರು. ಕೊಚ್ಚಿಯ ಪನಂಪಲ್ಲಿ ನಗರ ಮೂಲದ ಶಶಿಕುಮಾರ್ ಹತ್ತು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದ ಮೇಲೆ ಲಂಡನ್‌ಗೆ ಬಂದಿದ್ದರು.
ಇದನ್ನೂ ಓದಿ: ಕೇರಳ ಯುವತಿ ನಾಪತ್ತೆ: ಬಲವಂತದ ಮತಾಂತರ, ಮದುವೆ ಮಾಡಿರೋ ಆತಂಕ ವ್ಯಕ್ತಪಡಿಸಿದ ತಂದೆ
ಶಶಿಕುಮಾರ್ ಕುಟುಂಬಕ್ಕೆ ಈ ಪ್ರಕರಣ ಸಂಬಂಧ ಮೆಟ್ ಸ್ಪೆಷಲಿಸ್ಟ್ ಕ್ರೈಮ್ ಕಮಾಂಡ್‌ನ ಪತ್ತೆದಾರರು ಬೆಂಬಲ ನೀಡುತ್ತಿದ್ದಾರೆ ಎಂದು ಈವ್ನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆ ಜೂನ್ 18 ರಂದು ವರದಿ ಮಾಡಿದೆ. ಎದೆಗೆ ಚೂರಿ ಇರಿತದ ಪರಿಣಾಮವಾಗಿ ಶಶಿಕುಮಾರ್ ಮೃತಟ್ಟಿದ್ದಾರೆ ಎಂದು ಶುಕ್ರವಾರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ವರದಿಯಲ್ಲಿ ಹೇಳಲಾಗಿದೆ.
ಒಂದು ವಾರದಲ್ಲಿ ಇಂತಹ ಮೂರನೇ ಘಟನೆ
ಒಂದು ವಾರದಲ್ಲಿ ಇದು ಮೂರನೇ ಘಟನೆ ಎಂಬುದೂ ಇಲ್ಲಿ ಗಮನಾರ್ಹವಾಗಿದೆ. ಮಂಗಳವಾರ ಮುಂಜಾನೆ, ಮಧ್ಯ ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್‌ನ ಬೀದಿಗಳಲ್ಲಿ ಸರಣಿ ಚಾಕು ದಾಳಿಗೆ ಬಲಿಯಾದ ಮೂವರಲ್ಲಿ ಭಾರತೀಯ ಹದಿಹರೆಯದ ಕ್ರಿಕೆಟ್ ಮತ್ತು ಹಾಕಿ ತಾರೆ ಗ್ರೇಸ್ ಓ'ಮಲ್ಲಿ ಕುಮಾರ್ ಸಹ ಸೇರಿದ್ದಾರೆ. ಮಂಗಳವಾರ ಮುಂಜಾನೆ ದಾಳಿಕೋರನು ಇಬ್ಬರನ್ನು ಮಾರಣಾಂತಿಕವಾಗಿ ಇರಿದಿದ್ದಾನೆ ಎಂದು ಹೇಳಲಾಗಿದ್ದು, ಈ ಪೈಕಿ ಗ್ರೇಸ್ ಓ'ಮಲ್ಲಿ ಕುಮಾರ್ ಒಬ್ಬರಾಗಿದ್ದು, ಇವರು ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ರಿಕೆಟಿಗ ಸ್ನೇಹಿತನೊಂದಿಗೆ ಇದ್ದರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್: 15 ದಿನದ ಹಿಂದೆಯೇ ಸ್ಕೆಚ್; ಕೊಲೆಗೆ ಕಾರಣ ಹೀಗಿದೆ.
ಮೂರನೇ ಪ್ರಕರಣದಲ್ಲಿ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಓದುತ್ತಿದ್ದ ಹೈದರಾಬಾದ್‌ನ 27 ವರ್ಷದ ಮಹಿಳೆಯನ್ನು ಈ ವಾರದ ಆರಂಭದಲ್ಲಿ ಲಂಡನ್‌ನಲ್ಲಿರುವ ತನ್ನ ವಸತಿಗೃಹದಲ್ಲಿ ಇರಿದು ಕೊಲ್ಲಲಾಯಿತು. ಹೈದರಾಬಾದ್‌ನ ನಿವಾಸಿ ಕೊಂಥಮ್ ತೇಜಸ್ವಿನಿ ಹತ್ಯೆಗೆ ಸಂಬಂಧಿಸಿದಂತೆ ಲಂಡನ್‌ನ ಆಕ್ಸ್‌ಬ್ರಿಡ್ಜ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಲು ಕೆವನ್ ಆಂಟೋನಿಯೊ ಲೌರೆಂಕೊ ಡಿ ಮೊರೈಸ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಲಂಡನ್‌ನ ವೆಂಬ್ಲಿಯ ನೀಲ್ಡ್ ಕ್ರೆಸೆಂಟ್‌ನಲ್ಲಿರುವ ವಸತಿ ಆಸ್ತಿಯಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೆಟ್ ಪೊಲೀಸರು ವರದಿ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್ ಕೇಸ್: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!