ಔರಂಗಜೇಬ್ ಉಂಗುರ ಇದೆ, ಶಿವಾಜಿ  ಓದಿದ್ದ ಪುಸ್ತಕವಿದೆ... ವಂಚಿಸಿದ್ದು ಕೋಟಿ ಕೋಟಿ ಲೆಕ್ಕ!

By Suvarna NewsFirst Published Sep 29, 2021, 9:40 PM IST
Highlights

* ಈತ ಸ್ವಯಂ ಘೋಷಿತ ಪುರಾತನ ವಸ್ತು ಮಾರಾಟಗಾರ
* ತನ್ನ ಬಳಿ ಟಿಪ್ಪು ಸುಲ್ತಾನ್ ಖಡ್ಗವಿದೆ
* ಕೇರಳ ಮೂಲದ ವ್ಯಕ್ತಿಯಿಂದ ಕೋಟಿ  ಕೋಟಿ ವಂಚನೆ

ಕೊಚ್ಚಿ(ಸೆ. 29)  ಇದೊಂದು ವಿಚಿತ್ರ ಅಪರಾಧ ಪ್ರಕರಣ. ಸ್ವಯಂಘೋಷಿತ ದೇವಮಾನವ ಎಂಬುದನ್ನು ಕೇಳಿದ್ದೇವೆ. ಈತ ಸ್ವಯಂ ಘೋಷಿತ ಪುರಾತನ ವಸ್ತುಗಳ ವ್ಯಾಪಾರಿ.  ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳ ಜತೆ ನನಗೆ ನಿಕಟ ಸಂಪರ್ಕ ಇದೆ ಎಂದು ನಂಬಿಸುತ್ತಿದ್ದ. ನಕಲಿ ಪುರಾತನ ವಸ್ತುಗಳನ್ನು ಮಾರಾಟ ಮಾಡಿ ಕೋಟಿಗಟ್ಟಲೇ ಹಣ ಸಂಪಾದನೆ ಮಾಡಿದ್ದ.

ಕೊನೆಗೂ ಈ ನಕಲಿ ವ್ಯಾಪಾರಿ ಸೆರೆ ಸಿಕ್ಕಿದ್ದಾನೆ . ಈತನ ಹೆಸರು ಮಾನ್ಸನ್ ಮಾವುಂಕಲ್ ಆರು ಜನರಿಗೆ ಹತ್ತು ಕೋಟಿ ರೂ. ವಂಚನೆ ಮಾಡಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಇದು 2017  ರ ಪ್ರಕರಣ.

ಯೂಟ್ಬರ್  ಆಗಿರುವ ಚೆರ್ತಲಾ ನಿವಾಸಿ ಮಾನ್ಸನ್ ಮಾವುಂಕಲ್ ಅವರನ್ನು ಕ್ರೈಂ ಬ್ರಾಂಚ್ ತಂಡ ಭಾನುವಾರ ಬಂಧಿಸಿದೆ. ಪೊಲೀಸರ ಪ್ರಕಾರ, 52 ವರ್ಷದ ಈಥ ಮಧ್ಯಪ್ರಾಚ್ಯದ ರಾಜಮನೆತನದ ಪುರಾತನ ವಸ್ತುಗಳು ಎಂದು ನಂಬಿಸಿ   24 ಕೋಟಿ ರೂ. ಗೆ ಮಾರಾಟ ಮಾಡಲು ಉದ್ದೇಶಿಸಿದ್ದ.  ಕೆಲ ಕಾನೂನು ತೊಡಕು ಇದ್ದು ಅದನ್ನು ನಿವಾರಣೆ ಮಾಡಲು ಮುಂಗಡ ನೀಡಿ ಎಂದು ಕೇಳಿಕೊಂಡಿದ್ದ. ಮ್ಯೂಸಿಯಂ ವ್ಯಕ್ತಿಗಳ ಜತೆ ತನಗೆ ಸಂಪರ್ಕ ಇದೆ ಎಂದು ನಂಬಿಸಿದ್ದ.

ಕಳುವಾಗಿದ್ದ ಎಲ್ಲ ಪುರಾತನ ವಸ್ತುಗಳು ಮರಳಿ ಭಾರತಕ್ಕೆ

ಹೀಗೆ ಒಂದಾದ ಮೇಲೆ ಒಂದು ಸುಳ್ಳು ನಂಬಿಕೆಗಳನ್ನು ಹುಟ್ಟು ಹಾಕುತ್ತಿದ್ದ, 93 ಪುರಾತನ ವಸ್ತುಗಳಿರುವ( antiques)  15,000 ಕೋಟಿ ಮೊತ್ತದ  antique museumನ್ನು ಕತಾರ್ ನಲ್ಲಿ (Qatar) ನಿರ್ಮಾಣ ಮಾಡುತ್ತಿದ್ದೇನೆ ಎಂದು ನಂಬಿಸಿದ್ದ.

ವಂಚನೆಗೆ ಒಳಗಾದ ವ್ಯಕ್ತಿಗಳು ನೇರವಾಗಿ ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದರು.  ಒಂದಾದ ಮೇಲೆ ಒಂದು ಮಾಹಿತಿ ಕಲೆಹಾಕಿದ ಪೊಲೀಸರು ಕೊನೆಗೂ ನಕಲಿ ವ್ಯಾಪಾರಿಯನ್ನು ಅರೆಸ್ಟ್ ಮಾಡಿದ್ದಾರೆ.

ತನ್ನ ಬಳಿ ಟಿಪ್ಪು ಸುಲ್ತಾನ್ ಖಡ್ಗವಿದೆ. ಛತ್ರಪತಿ ಶಿವಾಜಿಗೆ ಸೇರಿದ್ದ ಚಿನ್ನದ ಭಗವದ್ಗೀತೆ ಇದೆ. ಔರಂಗಜೇಬ್ ಗೆ ಸೇರಿದ ಉಂಗುರ ಇದೆ ಎಂದು ನಂಬಿಕೆ ಹುಟ್ಟಿಸುತ್ತಿದ್ದ. ವೇಷ ಹಾಕಿಕೊಳ್ಳುವುದರಲ್ಲೂ ಈತ ನಿಸ್ಸೀಮನಾಗಿದ್ದ. ವೈದ್ಯರ ರೀತಿ, ಫಿಲಾಸಫಿ ತಜ್ಞನ ರೀತಿ, ಪ್ರಮೋಟರ್ ರೀತಿ ಕಾಣಿಸಿಕೊಂಡು ತನ್ನ ಯೂ ಟ್ಯೂಬ್ ಖಾತೆಯ ಮೂಲಕವೂ ಒಳ್ಳೊಳ್ಳೆ ಕತೆ ಹೇಳುತ್ತಿದ್ದ.

click me!