
ಬೆಳಗಾವಿ (ಸೆ.25): ಕಪಿಲೇಶ್ವರ ದೇವಸ್ಥಾನದವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ನೊಂದು ಅರ್ಚಕರೊಬ್ಬರ ಮಗ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಪಿಲೇಶ್ವರ ರಸ್ತೆಯಲ್ಲಿ ನಡೆದಿದೆ.
ಸಿದ್ದಾಂತ ಪೂಜಾರಿ (27) ಆತ್ಮ೧ಹತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ವಿಚಿತ್ರವಾಗಿ ಡೆತ್‌ನೋಟ್ ಬರೆದಿಟ್ಟಿದ್ದಾನೆ. ಮೂರು ವರ್ಷದ ಹಿಂದೆ ರೇಪ್ ಕೇಸ್ ಹಾಕಿ ದೇವಸ್ಥಾನದಿಂದ ನನ್ನನ್ನು ಹೊರ ಹಾಕಿದರು. ಅಲ್ಲಿಂದ ನನ್ನ ಜೀವನ ಹಾಳಾಗುತ್ತ ಹೋಯಿತು. ಸತ್ತು ನಾನು ಮೇಲೆ ಹೋದಾಗ ದೇವರು ಸಿಕ್ಕರೆ ನನಗೆ ಕಿರುಕುಳ ಕೊಟ್ಟವರನ್ನು ಹೊಡೆಯಲು ಹೇಳುತ್ತೇನೆ. ದೇವರ ಕಡೆಯಿಂದ ಅವರಿಗೆ ಹೊಡೆಸುತ್ತೇನೆ. ಅಜ್ಜಿ ಸತ್ತಾಗ ಮಟನ್ ಮಾಡಿದ್ದಿರಿ. ಈಗ ನನ್ನ ತಿಥಿ ವೇಳೆ ಮಟನ್ ಮಾಡಬೇಡಿ. ಅದನ್ನು ಬಿಟ್ಟು ಏನು ಬೇಕಾದರೂ ತಿನ್ನಲು ಮಾಡಿ. ಯಾರು ಅಳುವುದು ಬೇಡ. ನೀವು ಅತ್ತರೆ ನನ್ನ ಆತ್ಮಕ್ಕೆ ತ್ರಾಸಾಗುತ್ತದೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ: sahyog portal: ಸಾಮಾಜಿಕ ಜಾಲತಾಣಗಳಿಗೆ ಅನಿಯಂತ್ರಿತ ಸ್ವಾತಂತ್ರ್ಯ ಕೊಟ್ಟರೆ ಅರಾಜಕತೆ- ಹೈಕೋರ್ಟ್
ನಾನು ಹುಡುಗಿಗಾಗಿ ಸಾಯುತ್ತಿಲ್ಲ. ಅದ್ದೂರಿ ಜೀವನ ಮಾಡಲು ಆಗದೆ ಸಾಯುತ್ತಿದ್ದೇನೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಆತ್ಮ೧ಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೆ, ಜೋರಾಗಿ ಗಣಪತಿ ಹಬ್ಬ ಮಾಡಿ ಸಾಯಬೇಕು ಎಂದು ಮುಂದೂಡಿದ್ದೆ ಎಂದು ಉಲ್ಲೇಖಿಸಿದ್ದಾನೆ.
ತಾಯಿಗೆ ತೊಂದರೆ ಕೊಡದಂತೆ ತಂದೆಗೆ ಹೇಳಿ. ಕಪಿಲೇಶ್ವರ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದೆ. ಮೂರು ವರ್ಷದ ಹಿಂದೆ ರೇಪ್ ಕೇಸ್ ಹಾಕಿ ದೇವಸ್ಥಾನದಿಂದ ನನಗೆ ಹೊರ ಹಾಕಿದರು. ಅಲ್ಲಿಂದ ನನ್ನ ಜೀವನ ಹಾಳಾಗುತ್ತ ಹೋಯಿತು. ಇದೆಲ್ಲಾ ನಾನೇ ಬಾಯಲ್ಲಿ ಹೇಳಬೇಕಿತ್ತು. ಆದರೆ ಸತ್ತಿದ್ದೇನೆ ನೀವೇ ಓದಿಕೊಳ್ಳಿ ಎಂದು ಡೆತ್ ನೋಟ್ ಬರೆದು ಸಾಯುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ. ಸ್ಥಳಕ್ಕೆ ಖಡೇಬಜಾರ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ