ಕಾನೂನುಬಾಹಿರವಾಗಿ ವಿಶಿಷ್ಟ ಪ್ರಭೇದದ ಪಟ್ಟೆ-ತಲೆ ಹೆಬ್ಬಾತು (ಬಾರ್ಹೆಡೆಡ್ ಗೂಸ್) ಸಾಕಿದ ಪ್ರಕರಣದಲ್ಲಿ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಮೈಸೂರು (ಜೂ.19): ಕಾನೂನುಬಾಹಿರವಾಗಿ ವಿಶಿಷ್ಟ ಪ್ರಭೇದದ ಪಟ್ಟೆ-ತಲೆ ಹೆಬ್ಬಾತು (ಬಾರ್ಹೆಡೆಡ್ ಗೂಸ್) ಸಾಕಿದ ಪ್ರಕರಣದಲ್ಲಿ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮೈಸೂರು ಹೊರವಲಯದ ತನ್ನ ತೋಟದಲ್ಲಿ ಕಾನೂನುಬಾಹಿರವಾಗಿ ವಿಶಿಷ್ಟ ಪ್ರಭೇದದ ಬಾತುಕೋಳಿ ಸಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ ಎದುರಾಗಿದೆ. ಪ್ರಕರಣ ಸಂಬಂಧ 2 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಎ1, ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ಎ2 ಹಾಗೂ ನಟ ದರ್ಶನ್ ಎ3 ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿ ಐದು ನೋಟಿಸ್ ನೀಡಿದರೂ ನಟ ದರ್ಶನ್ ವಿಚಾರಣೆಗೆ ಹಾಜರಾಗಿರಲಿಲ್ಲ. ಜೊತೆಗೆ, ಪ್ರಕರಣ ಸಂಬಂಧ ದರ್ಶನ್ ರನ್ನು ಬಂಧಿಸಿಯೂ ಇರಲಿಲ್ಲ. ನಿಯಮಗಳ ಪ್ರಕಾರ ಬಾರ್ ಹೆಡೆಡ್ ಗೂಸ್ ಸಾಕುವುದು ಕಾನೂನುಬಾಹಿರ. ಇನ್ನು ದರ್ಶನ್ ಸೆಲೆಬ್ರಿಟಿಯಾಗಿದ್ದರಿಂದ ವಿಚಾರಣೆಗೆ ಅವಕಾಶ ನೀಡಲಾಗಿತ್ತು. ತಲೆಮರೆಸಿಕೊಳ್ಳದ ಕಾರಣ ಬಲವಂತವಾಗಿ ಅರಣ್ಯ ಇಲಾಖೆ ದರ್ಶನ್ ಅವರನ್ನು ಬಂಧಿಸಿಲ್ಲ. ಈಗ ಪ್ರಕರಣ ಚುರುಕುಗೊಳಿಸಿರುವ ಅರಣ್ಯ ಇಲಾಖೆ ಚಾರ್ಜ್‌ಶೀಟ್ ಸಲ್ಲಿಕೆಗೆ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.
undefined
ಹೊಸ ಬಟ್ಟೆ ಖರೀದಿಸಿದ್ದ ಆರೋಪಿಗಳು: ರೇಣುಕಾಸ್ವಾಮಿ ಕೊಲೆ ಬಳಿಕ ಆರೋಪಿಗಳಾದ ಲಕ್ಷ್ಮಣ್ ಮತ್ತು ಪವನ್ ಶೋರೂಮ್‌ಗೆ ತೆರಳಿ ಹೊಸ ಬಟ್ಟೆ ಖರೀದಿಸಿದ್ದ ವಿಚಾರ ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಜೂ.8ರ ರಾತ್ರಿ ರೇಣುಕಾಸ್ವಾಮಿ ಕೊಲೆ ಬಳಿಕ ಈ ಇಬ್ಬರು ಆರೋಪಿಗಳು ರಾಜರಾಜೇಶ್ವರಿ ನಗರದ ಟ್ರೆಂಡ್ಸ್ ಶೋರೂಮ್‌ಗೆ ತೆರಳಿ ಎರಡು ಜತೆ ಹೊಸ ಬಟ್ಟೆ ಖರೀದಿಸಿದ್ದರು. ಬಳಿಕ ತಮ್ಮ ಹಳೇ ಬಟ್ಟೆ ಕಳಚಿಟ್ಟು ಹೊಸಬಟ್ಟೆ ಧರಿಸಿದ್ದರು. ಬಳಿಕ ನೇರ ರಾಜರಾಜೇಶ್ವರಿನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದು ದೇವರಿಗೆ ಕೈ ಮುಗಿದಿದ್ದರು ಎಂಬ ವಿಚಾರ ವಿಚಾರಣೆ ವೇಳೆ ತಿಳಿದು ಬಂದಿದೆ.
ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದರೆ ದರ್ಶನ್ ಮನೆ ತೆರವು: ಡಿಕೆಶಿ
ಈ ಹಿನ್ನೆಲೆಯಲ್ಲಿ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಟ್ರೆಂಡ್ಸ್ ಷೋ ರೂಮ್ ಮತ್ತು ದೇವಸ್ಥಾನಕ್ಕೆ ಕರೆದೊಯ್ದು ಸೋಮವಾರ ಸ್ಥಳ ಮಹಜರು ನಡೆಸಿದರು. ಇದೇ ವೇಳೆ ಎರಡೂ ಕಡೆಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಡಿಲೀಟ್ ಮಾಡಿದ್ದ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ. ಆದರೆ, ಇಷ್ಟು ದಿನ ವಿಜಯಲಕ್ಷ್ಮೀ ಅವರು ಮಾಡಿದ್ದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.