ಈ ಸುಂದರ ಅಕೌಂಟ್‌ಗೆ ನೀವು ಫಾಲೋವರ್ ಇದ್ದೀರಾ, ಗಮನವಿಟ್ಟು ಈ ಸುದ್ದಿ ಓದಿ!

Published : Apr 22, 2020, 08:47 PM ISTUpdated : Apr 22, 2020, 08:57 PM IST
ಈ  ಸುಂದರ ಅಕೌಂಟ್‌ಗೆ ನೀವು ಫಾಲೋವರ್ ಇದ್ದೀರಾ, ಗಮನವಿಟ್ಟು ಈ ಸುದ್ದಿ ಓದಿ!

ಸಾರಾಂಶ

ಪಾಕಿಸ್ತಾನದ ಮಾಡೆಲ್ ಹೆಸರಿನಲ್ಲಿ ಫೇಕ್ ಅಕೌಂಟ್/ 8 ವರ್ಷಗಳಿಂದ ಖಾತೆ ಮೆಂಟೇನ್ ಮಾಡುತ್ತಿದ್ದವ ಪೊಲೀಸರ ಕೈಗೆ ಸಿಕ್ಕಿಬಿದ್ದ/ ಈಗ ಈತನ ಅವಸ್ಥೆ ನೋಡಬೇಕು/ ಖಾತೆಗೆ 10 ಸಾವಿರಕ್ಕೂ ಅಧಿಕ ಫಾಲೋವರ್ಸ್ 

ಛತ್ತೀಸ್ ಘಡ(ಏ. 22)  ಈತ ಅಂತಿಂಥ ಚಾಲಾಕಿ ವ್ಯಕ್ತಿ ಅಲ್ಲ. ಮಹಿಳೆ ಹೆಸರಲ್ಲಿ ಫೇಕ್ ಫೇಸ್ ಬುಕ್ ಖಾತೆ ತೆರೆದಿದ್ದ. ಖಾತೆ ತೆರೆದಿದ್ದು ಮಾತ್ರ ಅಲ್ಲ ಅಶ್ಲೀಲ ಕಮೆಂಟ್ ಗಳನ್ನು ಸಿಕ್ಕಾಪಟ್ಟೆ ಹಾಕುತ್ತಿದ್ದ. ಸಾಮಾಜಿಕ ಸ್ವಾಸ್ಥ್ಯ ಕದಡುವ ಕಮೆಂಟ್ ಗಳು ಇರ್ತಿದ್ದವು.  ಈಗ ಪೊಲೀಸರಿಂದಲೂ ಸಿಕ್ಕಾಪಟ್ಟೆ ಟ್ರೀಟ್ ಮೆಂಟ್ ಪಡೆದುಕೊಂಡಿದ್ದಾನೆ.

ಮಹಿಳೆ ಹೆಸರಲ್ಲಿ ಫೇಕ್ ಅಕೌಂಟ್  ಕ್ರಿಯೇಟ್ ಮಾಡಿದ್ದ 31 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಛತ್ತೀಸಘಡ ಪೊಲೀಸರು ಬಂಧಿಸಿದ್ದಾರೆ.  ನಿಶಾ ಜಿಂದಾಲ್ ಎಂಬ ಹೆಸರಿನಲ್ಲಿ ಖಾತೆ ಮಾಡಿದ್ದು 4000 ಫ್ರೆಂಡ್ಸ್ ಮತ್ತು 10 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿತ್ತು. ಉದ್ಯಮಿಗಳು ಮತ್ತು ಪತ್ರಕರ್ತರು ಸಹ ಫಾಲೋವರ್ಸ್ ಆಗಿದ್ದರು.

ಪಾದರಾಯನಪುರ ಪುಂಡರು ಒಬ್ಬೊಬ್ಬರಾಗಿ ಬರ್ತಿದ್ದಾರೆ ನೋಡಿ

ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಆರೋಪಿಯ ಹೆಸರು ರವಿ ಪೂಜಾರ್. ಕಬೀರ್ ನಗರ್ ಏರಿಯಾದಲ್ಲಿ ಆತನನ್ನು ಬಂಧಿಸಲಾಗಿದೆ.  ಬಿಜಿನಸ್ ಮೆನ್ ಗಳ ಜತೆ  ಮಹಿಳೆ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ. 

ಈ ಬಗ್ಗೆ ದೂರುಗಳು ಕೇಳಿಬಂದ ನಂತರ ಪೊಲೀಸರೇ ಒಬ್ಬರ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಚಾಟ್ ಮಾಡಿಸುತ್ತಾರೆ. ಸಕಲ ಮಾಃಇತಿ ಕಲೆಹಾಕಿ ಆರೋಪಿಯನ್ನು ಬಂಧಿಸಲಾಗುತ್ತದೆ.

ಇದಾದ ಮೇಲೆ ಅಕೌಂಟ್ ಕೈಗೆ ತೆಗೆದುಕೊಂಡ ಪೊಲೀಸರು ಆರೋಪಿಯ ಪೋಟೋ ಹಾಕಿ ನಾನು ನಿಶಾ ಜಿಂದಾಲ್ ಎಂದು ಪೋಸ್ಟ್ ಮಾಡಿಸುತ್ತಾರೆ.

ಆರೋಪಿ ಪಾಕಿಸ್ತಾನದ ಮಾಡೆಲ್ ಒಬ್ಬರ ಪೋಟೋ ಬಳಸಿ ನಕಲಿ ಖಾತೆ ಕ್ರಿಯೇಟ್ ಮಾಡಿಕೊಂಡಿದ್ದ. ಇದೇ ಬಗೆಯಲ್ಲಿ ಒಟ್ಟು 5ನಕಲಿ ಖಾತೆ ಹ್ಯಾಂಡಲ್ ಮಾಡುತ್ತಿದೆ. ಮತ್ತೊಂದು ಮಜಾ ಎಂದರೆ ಆರೋಪಿಯದ್ದು ಯಾವುದೇ ಅಸಲಿ ಸೋಶಿಯಲ್ ಮೀಡಿಯಾ ಖಾತೆಯೇ ಇಲ್ಲ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!