
ಹೈದರಾಬಾದ್(ನ. 10) ಬಸ್ ಸ್ಟ್ಯಾಂಡ್ ನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ 28 ವರ್ಷದ ಸಾಫ್ಟವೇರ್ ಇಂಜಿನಿಯರ್ ನನ್ನು ಬಂಧಿಸಲಾಗಿದೆ.
ಅಮರ್‌ಪೇಟೆಯ ಕೆಎಂಎಲ್ ಬಸ್ ಸ್ಟಾಪ್ ನಲ್ಲಿ ಘಟನೆ ನಡೆದಿದೆ. ಮಹಿಳೆಯನ್ನು ರಕ್ಷಣೆ ಮಾಡಲು ಬಂದ ಪೊಲೀಸ್ ಅಧಿಕಾರಿಯ ಮೇಲೆಯೂ ಟೆಕ್ಕಿ ದಾಳಿ ಮಾಡಲು ಮುಂದಾಗಿದ್ದಾನೆ.
ಅಮೀರ್ ಪುತ್ರಿಗೆ ಹದಿನಾಲ್ಕು ವರ್ಷವಿದ್ದಾಗಲೆ ದೌರ್ಜನ್ಯ ಎಸಗಿದ್ದರಂತೆ!
28 ವರ್ಷದ ಮಹಿಳೆ ಬಸ್ ಗಾಗಿ ಕಾದು ಕುಳಿತಿದ್ದರು. ವೆಸ್ಟ್ ಗೋದಾವರಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಮಾಹಿತಿಗಾಗಿ ಆರೋಪಿ ಮಹೇಶ್ ಬಳಿ ಮಾತನಾಡಿದ್ದಾರೆ. ಕೈ ಹಿಡಿದುಕೊಂಡ ಮಹೇಶ್ ಆಕೆಯ ಶರ್ಟ್ ಕಾಲರ್ ಗೂ ಕೈ ಹಾಕಿದ್ದಾನೆ. ಮಹಿಳೆಯ ಕುತ್ತಿಗೆ ಹಿಡಿಯಲು ಯತ್ನ ಮಾಡಿದ್ದಾನೆ.
ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದಾನೆ ಎಂಬುದನ್ನು ಅವರಿತ ಪಂಜಗುಟ್ಟ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಬಂದು ಪ್ರಶ್ನೆ ಮಾಡಿದ ಪೊಲೀಸ್ ಅಧಿಕಾರಿಯ ಮೇಲೆಯೂ ಹಲ್ಲೆಗೆ ಮಹೇಶ್ ಮುಂದಾಗಿದ್ದಾನೆ. ಉಳಿದ ಅಧಿಕಾರಿಗಳ ನೆರವಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನಶೆಯಲ್ಲಿ ಇದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ