Chikkaballapur: ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದು ವಿಡಿಯೋ ಮಾಡಿಸಿದ ಪತಿ!

By Kannadaprabha News  |  First Published Jun 26, 2023, 6:02 AM IST

ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕಾಗಿ ಆಕ್ರೋಶಗೊಂಡ ವ್ಯಕ್ತಿಯೊಬ್ಬ, ಪ್ರಿಯಕರನ ಕತ್ತು ಸೀಳಿ, ಆ ರಕ್ತವನ್ನೇ ಕುಡಿದಿದ್ದಾನೆ. ಅಲ್ಲದೆ, ಈ ಭೀಕರ ದೃಶ್ಯವನ್ನು ತನ್ನ ಸ್ನೇಹಿತನಿಂದ ಮೊಬೈಲ್‌ನಲ್ಲಿ ವಿಡಿಯೋ ಮಾಡಿಸಿದ್ದಾನೆ. 


ಚಿಕ್ಕಬಳ್ಳಾಪುರ (ಜೂ.26): ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕಾಗಿ ಆಕ್ರೋಶಗೊಂಡ ವ್ಯಕ್ತಿಯೊಬ್ಬ, ಪ್ರಿಯಕರನ ಕತ್ತು ಸೀಳಿ, ಆ ರಕ್ತವನ್ನೇ ಕುಡಿದಿದ್ದಾನೆ. ಅಲ್ಲದೆ, ಈ ಭೀಕರ ದೃಶ್ಯವನ್ನು ತನ್ನ ಸ್ನೇಹಿತನಿಂದ ಮೊಬೈಲ್‌ನಲ್ಲಿ ವಿಡಿಯೋ ಮಾಡಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್‌ ಬಳಿ ಜೂನ್‌ 19ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಿಂತಾಮಣಿ ತಾಲೂಕಿನ ಬಟ್ಲಪಲ್ಲಿ ನಿವಾಸಿ ವಿಜಯ್‌ ಹಾಗೂ ಮಾಲಾ ನಡುವೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ವಿಜಯ್‌, ಚಿಂತಾಮಣಿ ನಗರದಲ್ಲಿ ವಾಸವಾಗಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಬಾಗೇಪಲ್ಲಿ ತಾಲೂಕು ಮಂಡಂಪಲ್ಲಿ ನಿವಾಸಿ ಮಾರೇಶ್‌ ಎಂಬುವರು ಕೂಡ ಚಿಂತಾಮಣಿ ನಗರದಲ್ಲಿಯೇ ವಾಸವಾಗಿದ್ದು, ಅವರು ಕೂಡ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಟಾಟಾ ಏಸ್‌ನಲ್ಲಿ ಇಬ್ಬರೂ ಊರೂರು ಸುತ್ತಿ ವ್ಯಾಪಾರ ಮಾಡುತ್ತಿದ್ದರು. ಕೆಲವು ವೇಳೆ, ಒಟ್ಟಿಗೆ, ಕೆಲವು ವೇಳೆ ಬೇರೆ ಬೇರೆಯಾಗಿ ವ್ಯಾಪಾರ ಮಾಡುತ್ತಿದ್ದರು. ಇಬ್ಬರ ನಡುವೆ ಸ್ನೇಹ ಕೂಡ ಇತ್ತು. 

Tap to resize

Latest Videos

ಯುವತಿಯರ ಸ್ನಾನದ ದೃಶ್ಯ ಸೆರೆ ಹಿಡಿಯುತ್ತಿದ್ದವನಿಗೆ ಧರ್ಮದೇಟು: ಕಾಮುಕನ ಬಂಧನ

ಈ ಮಧ್ಯೆ, ತನ್ನ ಪತ್ನಿ ಮಾಲಾ ಹಾಗೂ ಮಾರೇಶ್‌ ನಡುವೆ ಅಕ್ರಮ ಸಂಬಂಧವಿದೆ ಎಂಬ ಅನುಮಾನ ವಿಜಯ್‌ಗಿತ್ತು. ಇದು ಆತನ ಆಕ್ರೋಶಕ್ಕೆ ಕಾರಣವಾಗಿತ್ತು. ಜೂ.19ರಂದು ಟಾಟಾ ಏಸ್‌ನಲ್ಲಿ ತನ್ನ ಸ್ನೇಹಿತನೊಬ್ಬನ ಜೊತೆ ಮಾರೇಶ್‌ನನ್ನು ಬಾಗೇಪಲ್ಲಿ ಕ್ರಾಸ್‌ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ವಿಜಯ್‌, ಚಾಕುವಿನಿಂದ ಮಾರೇಶ್‌ನ ಕತ್ತನ್ನು ಸೀಳಿದ್ದಾನೆ. ರಕ್ತ ಹೊರ ಚಿಮ್ಮಿದಾಗ ಅದನ್ನು ಕುಡಿದು ತನ್ನ ಕೋಪ ತೀರಿಸಿಕೊಂಡಿದ್ದಾನೆ. ಅಲ್ಲದೆ, ಜೊತೆಗಿದ್ದ ಸ್ನೇಹಿತನಿಗೆ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯಲು ಹೇಳಿದ್ದಾನೆ. ಬಳಿಕ ಮಾರೇಶ್‌ನನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಪತ್ನಿ ಮೇಲಿನ ಅನುಮಾನಕ್ಕೆ ಮಕ್ಕಳನ್ನ ಸುತ್ತಿಗೆಯಿಂದ ಹೊಡೆದು ಕೊಂದ ತಂದೆಯ ಬಂಧನ

ಬಳಿಕ, ಆತನ ಸ್ನೇಹಿತ ಮಾರೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಮಧ್ಯೆ, ವಿಜಯ್‌ ಸಹೋದರ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿಸಲು ಮುಂದಾಗಿದ್ದರಿಂದ ವಿಷಯ ಬೆಳಕಿಗೆ ಬಂದಿರಲಿಲ್ಲ. ಬಳಿಕ, ವಿಜಯ್‌ ಸ್ನೇಹಿತ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅದು ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ವಿಜಯ್‌ನನ್ನು ಬಂಧಿಸಿದ್ದಾರೆ.

click me!