ಕುಡಿದ ಮತ್ತಿನಲ್ಲಿ ತುಮಕೂರು ತಾಲೂಕಿನ ಡಿ.ಕೊರಟಗೆರೆಯಲ್ಲಿ ನಡೆದ ದುರ್ಘಟನೆ| ಬೇಟೆಗೆಂದು ಗೆಳೆಯನೊಬ್ಬನ ಬಳಿ ನಾಡಬಂದೂಕನ್ನು ತೆಗೆದುಕೊಂಡು ತಂದಿದ್ದ ಅರೋಪಿ| ತನ್ನ ಪತ್ನಿಯ ತಲೆಗೆ ಗುಂಡಿಟ್ಟು ಕೊಂದ ಗಂಡ|
ಹೆಬ್ಬೂರು(ಜ.13): ಕುಡಿದ ಮತ್ತಿನಲ್ಲಿ ಗುಂಡು ಹಾರಿಸುವುದು ಹೇಗೆಂದು ತೋರಿಸುತ್ತೇನೆ ಎಂದು ಹೇಳಿದ ಪತಿಯೊಬ್ಬ ತನ್ನ ಪತ್ನಿಯನ್ನೇ ಗುಂಡು ಹೊಡೆದು ಕೊಲೆ ಮಾಡಿದ ಘಟನೆ ತುಮಕೂರು ತಾಲೂಕಿನ ಡಿ.ಕೊರಟಗೆರೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಡಿ.ಕೊರಟಗೆರೆಯ ಶಾರದಾ(30) ಕೊಲೆಯಾದ ಮಹಿಳೆ. ಈಕೆಯ ಪತಿ ಕೃಷ್ಣಯ್ಯ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಆರೋಪಿ ಕೃಷ್ಣಯ್ಯ ಇತ್ತೀಚೆಗೆ ಬೇಟೆಗೆಂದು ಗೆಳೆಯನೊಬ್ಬನ ಬಳಿ ನಾಡಬಂದೂಕನ್ನು ತೆಗೆದುಕೊಂಡು ತಂದಿದ್ದ. ಕುಡಿದ ಅಮಲಿನಲ್ಲಿದ್ದ ಈತ, ಸೋಮವಾರ ರಾತ್ರಿ ತನ್ನ ಪತ್ನಿಗೆ ಬೇಟೆಯಾಡುವಾಗ ಬಂದೂಕಿನಿಂದ ಗುಂಡು ಹಾರಿಸುವುದು ಹೇಗೆಂದು ತೋರಿಸುತ್ತೇನೆ ಬಾ ಎಂದು ಕರೆದಿದ್ದಾನೆ. ಇದನ್ನು ನಂಬಿದ ಪತ್ನಿ ಗುಂಡು ಹಾರಿಸುವುದನ್ನು ನೋಡಲು ಕುತೂಹಲದಿಂದ ಬಂದಿದ್ದಾಳೆ.
ಹುಡುಗರೇ ಎಚ್ಚರ.. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ!
ಈ ಸಂದರ್ಭದಲ್ಲಿ ಮದ್ಯ ಸೇವನೆಯ ಅಮಲಿನಲ್ಲಿದ್ದ ಗಂಡ ತನ್ನ ಪತ್ನಿಯ ತಲೆಗೆ ಗುಂಡಿಟ್ಟು ಕೊಂದಿದ್ದಾನೆ. ಇದರಿಂದ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ದಂಪತಿಗೆ 10 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.